/newsfirstlive-kannada/media/post_attachments/wp-content/uploads/2024/09/RCB_TEAM.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ಲಾನ್​ ಮಾಡಿಕೊಂಡಿದೆ. ಹಾಗಾಗಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಆರ್​​ಸಿಬಿ ಸಾಕಷ್ಟು ಅಳೆದುತೂಗಿ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ಫಾಫ್ ಡುಪ್ಲೆಸಿಸ್. ಇವರು ಕೇವಲ ಆಟಗಾರನಾಗಿ ಮಾತ್ರವಲ್ಲದೆ ಕ್ಯಾಪ್ಟನ್​ ಆಗಿ ಕೂಡ ಆರ್​​ಸಿಬಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇನ್ನೂ ಟ್ರೋಫಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಫಾಫ್​​​ ಅವರನ್ನೇ ರಿಲೀಸ್​ ಮಾಡಿದ ಆರ್​​​ಸಿಬಿ ಹರಾಜಿನಲ್ಲೂ ಬಿಡ್​ ಮಾಡಲಿಲ್ಲ. ಆರ್​ಟಿಎಂ ಕಾರ್ಡ್​ ಬಳಸಿ ಫಾಫ್​ ಅವರನ್ನು ಖರೀದಿ ಮಾಡಬಹುದಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್​​ ತಂಡ ಫಾಫ್​ ಅವರನ್ನು ಬಿಡ್​ ಮಾಡಿದ್ರೂ ಆರ್​​ಸಿಬಿ ಆಸಕ್ತಿ ತೋರಲಿಲ್ಲ.
ಆರ್​​ಸಿಬಿ ಫಾಫ್​ ಕೈ ಬಿಡಲು ಕಾರಣಗಳೇನು?
1. ಫಾಫ್​ ಡುಪ್ಲೆಸಿಸ್​ಗೆ ಈಗಾಗಲೇ 40 ವರ್ಷ ಆಗಿದೆ. ಇನ್ನೂ ಮೂರು ವರ್ಷಗಳ ಕಾಲ ಫಾಫ್​​ ಐಪಿಎಲ್​ ಆಡುವುದು ಕಷ್ಟ. ಹಾಗಾಗಿ ಇವರನ್ನು ಕೈ ಬಿಡಲಾಗಿದೆ ಎಂದು ಆಕ್ಷನ್​ ನಂತರ ತಂಡದ ಮುಖ್ಯ ಕೋಚ್​​ ತಿಳಿಸಿದ್ದಾರೆ.
2. ಇನ್ನು, ಫಾಫ್​ ಅವರನ್ನು ರಿಲೀಸ್​ ಮಾಡಲು 2ನೇ ಕಾರಣ ಎಂದರೆ ಅವರು ಫಾರಿನ್​ ಪ್ಲೇಯರ್​​. ಆರ್​​ಸಿಬಿ ತಂಡ ಇಂಡಿಯನ್​ ಅದರಲ್ಲೂ ಕೊಹ್ಲಿಯನ್ನೇ ಕ್ಯಾಪ್ಟನ್ಸಿ ಪಟ್ಟಲು ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
3. ಮೂರನೇ ಕಾರಣ ಎಂದರೆ ಆರ್​ಸಿಬಿ ತಂಡಕ್ಕೆ ಫಾಫ್​ ಕೊಡುಗೆ ಹೇಳಿಕೊಳ್ಳುವಷ್ಟು ಇಲ್ಲ. ಜತೆಗೆ ಮಹತ್ವದ ಪಂದ್ಯಗಳಲ್ಲೇ ಆರ್​ಸಿಬಿ ತಂಡದ ಪರ ಸ್ಟ್ರಾಂಗ್​ ಆಗಿ ನಿಂತು ಆಡಿಲ್ಲ ಎಂಬ ಆರೋಪ ಕೂಡ ಇದೆ. ಇವರು ಕೊಹ್ಲಿಯಂತೆ ಅಗ್ರೆಸ್ಸಿವ್​ ಅಲ್ಲ ಅನ್ನೋದು ಕೂಡ ಪ್ರಮುಖ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ