/newsfirstlive-kannada/media/post_attachments/wp-content/uploads/2024/11/KL-Rahul_Kohli_IPL.jpg)
ಇತ್ತೀಚೆಗೆ ಸೌದಿಯಲ್ಲಿ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ತಂಡ ಆಯ್ಕೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೂ ಸ್ಟಾರ್ ಆಟಗಾರರ ಖರೀದಿಗೆ ಹಿಂದೇಟು ಹಾಕಿದ್ಯಾಕೆ? ಎಂಬ ದೊಡ್ಡ ಪ್ರಶ್ನೆಯೊಂದು ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಆರ್ಸಿಬಿಯೇ ಉತ್ತರ ನೀಡಿದೆ.
ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ಹೊಸ ಕ್ಯಾಪ್ಟನ್ಗಾಗಿ ಹುಡುಕಾಟ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಆರ್‌ಸಿಬಿ ಹರಾಜಿನಲ್ಲಿ ತನಗೆ ಅಗತ್ಯ ಇರೋ ಆಟಗಾರರನ್ನು ಪ್ಲಾನ್ ಪ್ರಕಾರ ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್‌ಸಿಬಿ ಸ್ಟಾರ್ ಆಟಗಾರರ ಗೋಜಿಗೆ ಹೋಗಲೇ ಇಲ್ಲ. ದೊಡ್ಡ ಮೊತ್ತ ಖರೀದಿ ಮಾಡಲು ಮನಸು ಮಾಡಲೇ ಇಲ್ಲ. ಇದಕ್ಕೆ ಕಾರಣ ಆರ್‌ಸಿಬಿ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ಪಟ್ಟ ಕಟ್ಟಲು ಮುಂದಾಗಿದೆಯಾ? ಎಂಬ ಚರ್ಚೆ ಹುಟ್ಟು ಹಾಕಿದೆ.
10 ಕೋಟಿ ಮಾತ್ರ ಸುರಿಯಲು ಮುಂದಾದ ಆರ್‌ಸಿಬಿ
ಲಕ್ನೋ ಸೂಪರ್ ಜೈಂಟ್ಸ್ ತೊರೆದ ಕೆ.ಎಲ್ ರಾಹುಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಎಲ್ಎಸ್ಜಿ ಕೈ ಬಿಡುತ್ತಿದ್ದಂತೆ ಕೆ.ಎಲ್ ರಾಹುಲ್ ಅವರನ್ನು ತವರಿನ ತಂಡಕ್ಕೆ ಕರೆ ತನ್ನಿ ಎಂಬ ಬೇಡಿಕೆ ಹೆಚ್ಚಾಯಿತು. ಆರ್‌ಸಿಬಿ ಕೂಡ ಈ ನಿಟ್ಟಿನಲ್ಲಿ ಹರಾಜಿನಲ್ಲಿ ಹಣ ಹೂಡಿತು. ಆರ್‌ಸಿಬಿ ಕೇವಲ 10 ಕೋಟಿ ಸುರಿದಿದ್ದು, ಒಂದು ಆಟಗಾರನನ್ನಾಗಿ ಖರೀದಿ ಮಾಡಲು. ಕ್ಯಾಪ್ಟನ್ ಮಾಡಲು ಬೇಕಾದಷ್ಟು ಹಣ ಸುರಿಯಲು ಆರ್‌ಸಿಬಿ ಮುಂದಾಗಲಿಲ್ಲ. ಕಾರಣ ಆರ್‌ಸಿಬಿ ನಾಯಕನಿಗಾಗಿ ಹುಡುಕಾಟ ನಡೆಸಿಲ್ಲ. ಅಯ್ಯರ್, ಪಂತ್ ಹಿಂದೆಯೂ ಬೆಂಗಳೂರು ಫ್ರಾಂಚೈಸಿ ಹೋಗಲಿಲ್ಲ.
ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್‌ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್‌ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್‌ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ.
ಸದ್ಯ ಎಲ್ಲರ ಈ ಪ್ರಶ್ನೆಗೆ ಆರ್‌ಸಿಬಿ ತಂಡದಿಂದ ಕೇಳಿ ಬರುತ್ತಿರೋ ಏಕೈಕ ಉತ್ತರ ವಿರಾಟ್ ಕೊಹ್ಲಿ. ಮುಂದಿನ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸುವುದು ಬಹುತೇಕ ಕನ್ಫರ್ಮ್ ಆಗಿದೆ.
ಕೊಹ್ಲಿ ಆರ್‌ಸಿಬಿ ಕ್ಯಾಪ್ಟನ್
ಐಪಿಎಲ್ ಪ್ರಾರಂಭವಾದ 2008ರಿಂದಲೂ ಕೊಹ್ಲಿ ಆರ್‌ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕರಾದರು. ಆದರೆ, ಒಮ್ಮೆಯೂ ಕೊಹ್ಲಿ ಐಪಿಎಲ್ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ 2022 ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಬಳಿಕ ಐಪಿಎಲ್ನಲ್ಲೂ ಆರ್‌ಸಿಬಿ ಕ್ಯಾಪ್ಟನ್ಸಿಗೂ ವಿದಾಯ ಹೇಳಿದ್ರು. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ಕ್ಯಾಪ್ಟನ್ ಆಗೋ ಸಾಧ್ಯತೆ ಇದೆ. ಈ ವಿಚಾರ ಖಚಿತಪಡಿಸಿಕೊಂಡೇ ಆರ್‌ಸಿಬಿ ಹರಾಜಿನಲ್ಲಿ ಕೇವಲ ಆಟಗಾರರನ್ನು ಮಾತ್ರ ಖರೀದಿ ಮಾಡಿದೆ.
ಇದನ್ನೂ ಓದಿ:ಐಪಿಎಲ್ 2025: ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ