/newsfirstlive-kannada/media/post_attachments/wp-content/uploads/2024/11/Maxwell_Faf.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಮೂವರನ್ನು ಹೊರತುಪಡಿಸಿ ಆರ್ಸಿಬಿ ಉಳಿದ ಎಲ್ಲರಿಗೂ ಗೇಟ್ಪಾಸ್ ನೀಡಿದೆ.
ಮೂವರು ವಿದೇಶಿ ಆಟಗಾರರಿಗೆ ಕೊಕ್
ಪ್ರಮುಖ ವಿದೇಶಿ ಆಟಗಾರರನ್ನು ಆರ್ಸಿಬಿ ಕೈ ಬಿಟ್ಟಿದೆ. ಅದರಲ್ಲಿ ಪ್ರಮುಖವಾಗಿ ಮ್ಯಾಕ್ಸ್ವೆಲ್ ಇದ್ದಾರೆ. 2021ರಿಂದ 2023ರವರೆಗೆ ಆರ್ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್ವೆಲ್ 513, 2022ರಲ್ಲಿ 301, 2023ರಕ್ಕು 400 ರನ್ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್ಸಿಬಿ ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದ್ರು.
ಫಾಫ್ ಡುಪ್ಲೆಸಿಸ್
ಕಿಂಗ್ ವಿರಾಟ್ ಆರ್ಸಿಬಿ ನಾಯಕತ್ವಕ್ಕೆ ವಿದಾಯ ಹೇಳಿದ ಮೇಲೆ ಫಾಫ್ ಅವರನ್ನು ಕರೆತಂದಿತ್ತು. 40 ವರ್ಷದ ಫಾಫ್ 2022ರಲ್ಲಿ ಆರ್ಸಿಬಿ ಸೇರಿಕೊಂಡರು. ಅದೇ ವರ್ಷವೇ ಅವರಿಗೆ ನಾಯಕತ್ವ ಒಲಿದಿತ್ತು. ಆದರೆ ಅವರ ಅಧ್ಯಕ್ಷತೆಯಲ್ಲಿ ತಂದ ನಿರೀಕ್ಷಿತ ಗುರಿ ತಲುಪಿಲ್ಲ. ಹೀಗಾಗಿ ಅವರನ್ನು ಕೈ ಬಿಡಲಾಗಿದೆ. ಫಾಫ್ ಜಾಗಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಖರೀದಿಸಿ ನಾಯಕತ್ವದ ಜವಾಬ್ದಾರಿ ನೀಡುವ ಲೆಕ್ಕಾಚಾರದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಇದೆ ಎನ್ನಲಾಗಿದೆ.
ಟಾಮ್ ಕರಣ್
2024ರಲ್ಲಿ ಆರ್ಸಿಬಿಯ ಭಾಗವಾಗಿದ್ದ ಟಾಮ್ ಕರಣ್, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಫೇಲ್ ಆಗಿದ್ದಾರೆ. 2024ರ ಹರಾಜಿನಲ್ಲಿ ಅವರ ಮೂಲ ಬೆಲೆ 1.5 ಕೋಟಿಗೆ ಅವರನ್ನು ಖರೀದಿ ಮಾಡಿತ್ತು. ಇವರನ್ನು ಕೂಡ ಆರ್ಸಿಬಿ ಉಳಿಸಿಕೊಂಡಿಲ್ಲ. ಅವರ ಜೊತೆಗೆ ಅಲ್ಝರ್ರಿ ಜೋಸೆಫ್, ಲಾಕಿ ಫರ್ಗುಸನ್, ಟೋಪ್ಲಿ ಅವರನ್ನೂ ಸಹ ಕೈಬಿಟ್ಟು ಹೊಸ ಬೌಲರ್ಗಳ ಹುಡುಕಾಟದಲ್ಲಿದೆ ಆರ್ಸಿಬಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ