/newsfirstlive-kannada/media/post_attachments/wp-content/uploads/2024/11/RCB-5.jpg)
ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದ ಆರ್ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು. ಇತ್ತೀಚೆಗೆ ನಡೆದ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.
ಇನ್ನು, ಆರ್ಸಿಬಿ ತಂಡದ ಯುವ ಆಲ್ರೌಂಡರ್ ಆಗಿದ್ದ ಮಹಿಪಾಲ್ ಲೋಮ್ರೋರ್ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆರ್ಟಿಎಂ ಕಾರ್ಡ್ ಬಳಸಿ ಖರೀದಿ ಮಾಡಲು ಅವಕಾಶ ಇದ್ರೂ ಯಾಕೆ ಬಿಡ್ ಮಾಡಲಿಲ್ಲ? ಅನ್ನೋ ಚರ್ಚೆ ಜೋರಾಗಿದೆ.
ಗುಜರಾತ್ ಟೈಟನ್ಸ್ ಸೇರಿದ ಯುವ ಆಟಗಾರ
ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲಿ ಮಹಿಪಾಲ್ ಲೋಮ್ರೋರ್ ಅವರಿಗಾಗಿ ಭಾರೀ ಪೈಪೋಟಿ ನಡೆಯಿತು. ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಲೋಮ್ರೋರ್ ಅವರನ್ನು 50 ಲಕ್ಷ ಬೇಸ್ ಪ್ರೈಸ್ಗೆ ಬಿಡ್ ಮಾಡಿತು. ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕೊನೆಗೂ ಲೋಮ್ರೋರ್ 1.70 ಕೋಟಿಗೆ ರಾಜಸ್ಥಾನ್ ತಂಡದ ಪಾಲಾದ್ರು.
ಯಾರು ಈ ಮಹಿಪಾಲ್ ಲೋಮ್ರೋರ್?
ಆರ್ಸಿಬಿ ತಂಡದ ಮಾಜಿ ಯುವ ಬ್ಯಾಟರ್ ಮಹಿಪಾಲ್ ಲೋಮ್ರೋರ್. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಇವರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಲಿಲ್ಲ. 2024ರ ಐಪಿಎಲ್ನಲ್ಲಿ ಆರ್ಸಿಬಿ ಪರ 10 ಪಂದ್ಯ ಆಡಿದ್ದ ಮಹಿಪಾಲ್ ಲೋಮ್ರೋರ್ ಅವರು ಗಳಿಸಿದ್ದು ಕೇವಲ 125 ರನ್. ಅದರಲ್ಲೂ ಕೇವಲ 9 ಸಿಕ್ಸರ್ ಮತ್ತು 9 ಫೋರ್ ಬಾರಿಸಿದ್ದರು. ಒಂದು ಪಂದ್ಯದಲ್ಲಿ 33 ರನ್ ಗಳಿಸಿದ್ರೂ ದೊಡ್ಡ ಇಂಪ್ಯಾಕ್ಟ್ ಏನು ಬೀರಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಈ ಸಲ ಕಪ್ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹೀಗಾಗಿ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಿದೆ. ಇದರ ಪರಿಣಾಮ ಮಹಿಪಾಲ್ ಲೋಮ್ರೋರ್ಗೆ ಕೊಕ್ ನೀಡಲಾಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್; ಟೀಮ್ ಇಂಡಿಯಾಗೆ ಸ್ಟಾರ್ ಪ್ಲೇಯರ್ ಎಂಟ್ರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ