IPL 2025: ಆರ್​​​ಸಿಬಿ ತಂಡದಿಂದ ಸಿರಾಜ್​​ ಕೈ ಬಿಡಲು ಇಲ್ಲಿದೆ ಅಸಲಿ ಕಾರಣ; ಏನದು ಗೊತ್ತಾ?

author-image
Ganesh Nachikethu
Updated On
IPL 2025: ಆರ್​​​ಸಿಬಿ ತಂಡದಿಂದ ಸಿರಾಜ್​​ ಕೈ ಬಿಡಲು ಇಲ್ಲಿದೆ ಅಸಲಿ ಕಾರಣ; ಏನದು ಗೊತ್ತಾ?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​
  • ಹರಾಜಿಗೆ ಮೊದಲೇ ಮೂರವನ್ನು ಉಳಿಸಿಕೊಂಡ RCB
  • ತಂಡದ ಸ್ಟಾರ್​ ಆಟಗಾರರನ್ನೇ ಕೈ ಬಿಟ್ಟ ಬೆಂಗಳೂರು ತಂಡ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮೆಗಾ ಹರಾಜಿಗೆ ಮೊದಲೇ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಹೆಸರನ್ನು ಬಿಡುಗಡೆ ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ರಿಟೇನ್ ಪಟ್ಟಿ ರಿಲೀಸ್​ ಮಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಆರ್‌ಸಿಬಿ ಕೇವಲ ಮೂವರು ಆಟಗಾರನ್ನು ಮಾತ್ರ ರೀಟೈನ್​ ಮಾಡಿಕೊಂಡಿದ್ದು, ತಂಡದ ಸ್ಟಾರ್​ ಆಟಗಾರರನ್ನೇ ಕೈ ಬಿಟ್ಟಿದೆ. ಕ್ಯಾಪ್ಟನ್​​ ಫಾಪ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್​​, ಕ್ಯಾಮೆರಾನ್​ ಗ್ರೀನ್​​ ಸೇರಿದಂತೆ ಹಲವರನ್ನು ಆಟಗಾರರನ್ನು ಆರ್​​​ಸಿಬಿ ಕೈ ಬಿಟ್ಟಿದೆ.

ಐಪಿಎಲ್‌ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿರೋ ಆರ್​​​ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್​ ಮಾಡಿಕೊಂಡಿದೆ. ಆದರೆ, ತಂಡದ ಬೌಲಿಂಗ್​​ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್​ ಸಿರಾಜ್​ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಸಿರಾಜ್ ಕೈ ಬಿಡಲು ಕಾರಣವೇನು?

ಟೀಮ್​ ಇಂಡಿಯಾದ ಆಲ್​ ಫಾರ್ಮೇಟ್​ ಪ್ಲೇಯರ್​​​ ಮೊಹಮ್ಮದ್​​ ಸಿರಾಜ್​​ ಅವರು. ಇವರನ್ನು ಕೈ ಬಿಟ್ಟು ಆರ್​​​ಸಿಬಿ ಯಶ್​ ದಯಾಳ್​ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್​​ನಲ್ಲಿ ಸಿರಾಜ್​ಗಿಂತಲೂ ಯಶ್​ ದಯಾಳ್​​​ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್​​ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ರು. ಆರ್‌ಸಿಬಿ ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸಿರಾಜ್​ ಬದಲಿಗೆ ದಯಾಳ್​ಗೆ ಆರ್​​ಸಿಬಿ ಮಣೆ ಹಾಕಿದೆ.

ಚೆನ್ನೈ ವಿರುದ್ಧ ಖದರ್​ ತೋರಿಸಿದ್ದ ದಯಾಳ್​​

ಕಳೆದ ಸೀಸನ್​​ನಲ್ಲಿ ಲೀಗ್​ ಹಂತದ ಕೊನೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದಯಾಳ್​​​ ತಮ್ಮ ಖದರ್​ ತೋರಿಸಿದ್ದರು. ಕೊನೆಯ ಓವರ್ 6 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ ಎಂಎಸ್ ಧೋನಿ ದಯಾಳ್ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಯಾವುದಕ್ಕೂ ಹೆದರದ ದಯಾಳ್​​​ 2ನೇ ಎಸೆತದಲ್ಲಿ ಧೋನಿ ಅವರನ್ನು ಔಟ್ ಮಾಡಿದರು. ನಂತರ ಉಳಿದ 5 ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟು ಆರ್​​ಸಿಬಿ ತಂಡವನ್ನು ಗೆಲ್ಲಿಸಿದ್ರು.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು ಇವರೇ

ಮುಂದಿನ ಸೀಸನ್​​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಮುಂದಾಗಿರೋ ಆರ್​​ಸಿಬಿ ರೀಟೈನ್​​ ಮಾಡಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಎಲ್ಲರನ್ನು ಕೈ ಬಿಟ್ಟಿದೆ. ವಿರಾಟ್ ಕೊಹ್ಲಿ ಅವರಿಗೆ 21 ಕೋಟಿ, ರಜತ್ ಪಾಟಿದಾರ್ ಅವರಿಗೆ 11 ಕೋಟಿ, ಯಶ್ ದಯಾಳ್ ಅವರಿಗೆ 5 ಕೋಟಿ ಕೊಟ್ಟು ರೀಟೈನ್​ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment