/newsfirstlive-kannada/media/post_attachments/wp-content/uploads/2024/05/VIRAT_KOHLI_SIRAJ.jpg)
ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದ ಆರ್‌ಸಿಬಿ ಅಳೆದು ತೂಗಿ ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು. ಇತ್ತೀಚೆಗೆ ನಡೆದ ಹರಾಜಿನಲ್ಲಿ ಆರ್‌ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್‌ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.
ಇನ್ನು, ಅದರಲ್ಲೂ ತಂಡದ ಬೌಲಿಂಗ್ ವಿಭಾಗದ ಆಧಾರಸ್ಥಂಬ ಆಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆರ್ಟಿಎಂ ಕಾರ್ಡ್ ಬಳಸಿ ಖರೀದಿ ಮಾಡಲು ಅವಕಾಶ ಇದ್ರೂ ಯಾಕೆ ಬಿಡ್ ಮಾಡಲಿಲ್ಲ? ಅನ್ನೋ ಚರ್ಚೆ ಜೋರಾಗಿದೆ.
ಟೀಮ್ ಇಂಡಿಯಾದ ಆಲ್ ಫಾರ್ಮೇಟ್ ಪ್ಲೇಯರ್ ಮೊಹಮ್ಮದ್ ಸಿರಾಜ್ ಅವರು. ಇವರನ್ನು ಕೈ ಬಿಟ್ಟು ಆರ್‌ಸಿಬಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್ನಲ್ಲಿ ಸಿರಾಜ್ಗಿಂತಲೂ ಯಶ್ ದಯಾಳ್ ಅತ್ಯುತ್ತಮ ಪ್ರದರ್ಶನ ನೀಡಿದ್ರು. ದಯಾಳ್ ತಾನು ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ರು. ಆರ್‌ಸಿಬಿ ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ಯುವಲ್ಲಿ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸಿರಾಜ್ ಬದಲಿಗೆ ದಯಾಳ್ಗೆ ಆರ್‌ಸಿಬಿ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ. ಆದರೆ, ಸಿರಾಜ್ ಅವರನ್ನು ಕೈ ಬಿಡಲು ಅಸಲಿ ಕಾರಣ ಇಲ್ಲಿದೆ.
ಆರ್‌ಸಿಬಿ ಲಿಸ್ಟ್ನಲ್ಲಿತ್ತು ಸಿರಾಜ್ ಹೆಸರು
ಮುಂದಿನ ಸೀಸನ್ನಲ್ಲಿ ಕಪ್ ಗೆಲ್ಲಲೇಬೇಕು ಎಂದು ಮುಂದಾಗಿರೋ ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಸಾಕಷ್ಟು ಸರ್ಕಸ್ ಮಾಡಿದೆ. ಆರ್‌ಸಿಬಿ ತನ್ನ ಸ್ಟ್ರಾಟಜಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಫೇಸ್ ಬೌಲರ್ಗಾಗಿ ಆರ್‌ಸಿಬಿ ಮಾಡಿದ ಲಿಸ್ಟ್ನಲ್ಲಿ ಆಸ್ಟ್ರೇಲಿಯಾದ ವೇಗಿ ಹೆಜಲ್ವುಡ್, ಭುವನೇಶ್ವರ್ ಕುಮಾರ್ ಜತೆಗೆ ಸಿರಾಜ್ ಹೆಸರು ಕೂಡ ಇತ್ತು.
ಸಿರಾಜ್ ಕೈ ಬಿಡಲು ಅಸಲಿ ಕಾರಣವೇನು?
ಒಂದು ವೇಳೆ ಹೆಜಲ್ವುಡ್, ಭುವನೇಶ್ವರ್ ಇಬ್ಬರಲ್ಲಿ ಒಬ್ಬರು ಸಿಗದೆ ಹೋದ್ರೂ ಸಿರಾಜ್ಗೆ ಮಣೆ ಹಾಕುವ ಪ್ಲಾನ್ ಆರ್‌ಸಿಬಿ ಮಾಡಿತ್ತು. ಸಿರಾಜ್ ಅವರನ್ನು ಬಿಡ್ 8-12 ಕೋಟಿವರೆಗೂ ಮೀಸಲಿಟ್ಟಿತ್ತು. ಆದರೆ, ಹೆಜಲ್ವುಡ್ ಮತ್ತು ಭುವನೇಶ್ವರ್ ಇಬ್ರು ಸಿಕ್ಕ ಕಾರಣ ಸಿರಾಜ್ ಗೋಜಿಗೆ ಆರ್‌ಸಿಬಿ ಹೋಗಲಿಲ್ಲ.
ಇದನ್ನೂ ಓದಿ:ಆರ್ಸಿಬಿಗೆ ಜೂನಿಯರ್ ಬುಮ್ರಾ ಎಂಟ್ರಿ; ಇವರ ಖರೀದಿ ನಿಜಕ್ಕೂ ಸಖತ್ ಸರ್ಪ್ರೈಸ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ