/newsfirstlive-kannada/media/post_attachments/wp-content/uploads/2024/08/RCB-Team_IPL-2025.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದಿದೆ. ಈ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್ಸಿಬಿ ತಂಡದಿಂದ ಈ ಯುವ ಆಲ್ರೌಂಡರ್ಗೆ ಗೇಟ್ಪಾಸ್ ನೀಡಲಾಗಿದೆ.
ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಯಿಂದ ಔಟ್ ಆಗಿರೋ ಯುವ ಆಲ್ರೌಂಡರ್ ಮತ್ಯಾರು ಅಲ್ಲ, ಮಯಾಂಕ್. ಇವರನ್ನು ಹರಾಜಿನಲ್ಲೂ ಆರ್ಸಿಬಿ ಬಿಡ್ ಮಾಡಲಿಲ್ಲ.
ಮಯಾಂಕ್ಗೆ ಕೊಕ್ ನೀಡಲು ಕಾರಣವೇನು?
ಆರ್ಸಿಬಿ ತಂಡದ ಯುವ ಆಲ್ರೌಂಡರ್ ಮಯಾಂಕ್. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಇವರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಲಿಲ್ಲ. 2024ರ ಐಪಿಎಲ್ನಲ್ಲಿ ಆರ್ಸಿಬಿ ಪರ ತಾನು ಆಡಿದ 5 ಪಂದ್ಯದಲ್ಲಿ ಕೇವಲ 1 ವಿಕೆಟ್ ಪಡೆದಿದ್ರು. ಬ್ಯಾಟಿಂಗ್ನಲ್ಲಂತೂ ಶೂನ್ಯ ಕೊಡುಗೆ. ಹಾಗಾಗಿ ಇವರನ್ನು ಕೈ ಬಿಡಲಾಗಿದೆ. ಮಯಾಂಕ್ ಡಗಾರ್ ಕೊಹ್ಲಿಗೆ ಬಹಳ ಆಪ್ತನಾಗಿದ್ದ.
ಇದನ್ನೂ ಓದಿ:ಹಾರ್ದಿಕ್ಗೆ ಮಾಸ್ಟರ್ ಸ್ಟ್ರೋಕ್; ಮುಂಬೈ ತಂಡದ ಕ್ಯಾಪ್ಟನ್ಸಿಗಾಗಿ ಈ ಮೂವರ ಮಧ್ಯೆ ಪೈಪೋಟಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ