/newsfirstlive-kannada/media/post_attachments/wp-content/uploads/2024/11/rooster.jpg)
ಹುಂಜಾ ಮುಂಜಾನೆ ಕೂಗುವುದು ದೈನಂದಿನ ಸಾಮಾನ್ಯ ವಿದ್ಯಮಾನ. ಹಕ್ಕಿ-ಪಕ್ಷಿಗಳು ಬೆಳ್​ ಬೆಳಗ್ಗೆ ಚಿಲಿಪಿಲಿ ಗುಟ್ಟುವುದು ಕಾಮನ್ ಆಗಿದೆ ಎಂದು ನೀವು ಹೇಳಬಹುದು. ಆದರೆ ಈ ಹುಂಜಗಳಿಗೆ ಬೇಗ ಬೆಳಗಾಗುತ್ತದೆ. ನೀವು ಎಂದಾದರೂ ಯೋಚಿಸಿದ್ದೀರಾ? ಉಳಿದ ದಿನಗಳಿಗೆ ಹೋಲಿಸಿದರೆ ಕೋಳಿಗಳು ಮುಂಜಾನೆ ಏಕೆ ಕೂಗುತ್ತವೆ ಎಂದು?
/newsfirstlive-kannada/media/post_attachments/wp-content/uploads/2024/11/rooster-1.jpg)
ಹಿಂದಿನ ಕಾಲದಲ್ಲಿ ಹುಂಜದ ಕೂಗಿಗೆ ಮುಂಜಾನೆ ಬೇಗ ಏಳುತ್ತಿದ್ದೆವು ಎಂಬ ಮಾತನ್ನ ಕೇಳಿರಬಹುದು. ಅನೇಕ ಹಳ್ಳಿಗಳಲ್ಲಿ ಈಗಲೂ ಈ ರೂಢಿ ಚಾಲ್ತಿಯಲ್ಲಿದೆ. ಕೋಳಿ ಮುಂಜಾನೆ ಏಕೆ ಕೂಗುತ್ತದೆ? ಅಂದರೆ ಕೋಳಿಗಳು ತಮ್ಮ ದೇಹದಲ್ಲಿ ‘ಜೈವಿಕ ಗಡಿಯಾರ’ ಹೊಂದಿರುತ್ತವೆ. ಅದನ್ನು ಸಿರ್ಕಾಡಿಯನ್ ರಿದಮ್ (Circadian rhythm) ಎಂದು ಹೇಳಲಾಗುತ್ತದೆ. ಈ ಗಡಿಯಾರವು ಅವುಗಳ ದೇಹದಲ್ಲಿ 24-ಗಂಟೆಗಳ ಕಾಲ ಚಕ್ರದಲ್ಲಿ ಕೆಲಸ ಮಾಡಲು ಸೂಚಿಸುತ್ತದೆ. ಸೂರ್ಯೋದಯದಲ್ಲಿ ಬೆಳಕಿನ ಬದಲಾವಣೆಯಿಂದಾಗಿ ಸಿರ್ಕಾಡಿಯನ್ ರಿದಮ್ ಹೆಚ್ಚು ಕ್ರಿಯಾಶೀಲಗೊಳ್ಳುವಂತೆ ಮಾಡುತ್ತದೆ. ಅದು ಕೋಳಿ ಕೂಗಲು ಸೂಚನೆ ನೀಡುತ್ತದೆ.
ಇದನ್ನೂ ಓದಿ:Angry Kids: ಅತಿಯಾದ ಕೋಪ.. ನಿಮ್ಮ ಮಗುವಿನ ಭಾವನೆ ನಿಭಾಯಿಸಲು ಇಲ್ಲಿದೆ ಉಪಾಯ..!
/newsfirstlive-kannada/media/post_attachments/wp-content/uploads/2024/11/rooster-2.jpg)
ಇನ್ನು, ಕೋಳಿಯ ಕಣ್ಣುಗಳು ಬೆಳಕಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಬೆಳಕಿನ ಬದಲಾವಣೆಯನ್ನು ತಕ್ಷಣವೇ ಅವು ಕಂಡು ಹಿಡಿಯುತ್ತವೆ. ಕಾಗೆಗಳು ಕೂಡ ಅಷ್ಟೇ ಸುಕ್ಷ್ಮವಾಗಿರುತ್ತವೆ. ಮುಂಜಾನೆ ಕೋಳಿ, ಕಾಗೆ ಕೂಗುವುದು ಅವುಗಳಿಗೆ ಸಾಮಾಜಿಕ ನಡವಳಿಕೆಯಾಗಿದೆ. ತನ್ನ ಗುಂಪಿನ ಇತರ ಸದಸ್ಯರಿಗೆ ದಿನ ಪ್ರಾರಂಭವಾಗಿದೆ, ಎಚ್ಚರಗೊಳ್ಳಿ ಎಂದು ತಿಳಿಸಲು ಅವು ಕೂಗುತ್ತವೆ.
ಕೆಲವು ಸಂದರ್ಭಗಳಲ್ಲಿ ಹುಂಜಗಳು ಹೆಣ್ಣನ್ನು ಆಕರ್ಷಿಸಲು ಕೂಗುತ್ತವೆ. ಶತಮಾನಗಳಿಂದ ರೂಸ್ಟರ್ ಕೂಗುವುದನ್ನು ಸಮಯದ ಸಂಕೇತವೆಂದು ಪರಿಗಣಿಸಲಾಗಿದೆ. ರೈತರಿಗೆ ಮತ್ತು ಇತರ ಜನರಿಗೆ ಕೋಳಿ ಕೂಗುವಿಕೆಯು ದಿನವನ್ನು ಪ್ರಾರಂಭಿಸುವ ಸಂಕೇತವಾಗಿದೆ. ರೂಸ್ಟರ್ ಕೂಗು ನೈಸರ್ಗಿಕ ಪ್ರಪಂಚದ ಜೀವನ ಚಕ್ರದ ಒಂದು ವಿಶೇಷ ಭಾಗವಾಗಿದೆ. ಹಗಲು-ರಾತ್ರಿಯ ಚಕ್ರವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಪ್ರಾಣಿಗಳ ನಡವಳಿಕೆಯನ್ನು ಸಹ ಪ್ರಭಾವಿಸುತ್ತದೆ.
ಇದನ್ನೂ ಓದಿ:ಅಂದು ತುತ್ತು ಊಟಕ್ಕೂ ಪರದಾಟ.. ಇಂದು 13 ಕೋಟಿ ಒಡೆಯ.. ರಿಂಕು ಸಿಂಗ್ ಐಷಾರಾಮಿ ಬಂಗಲೆ ಹೆಂಗಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us