newsfirstkannada.com

ಗಾಯಕ್ವಾಡ್​ಗೆ CSK ನಾಯಕತ್ವದ ಜವಾಬ್ದಾರಿ ನೀಡಿದ್ದೇಕೆ? ಧೋನಿ ದಿಢೀರ್​​ ನಿರ್ಧಾರಕ್ಕೆ ಕಾರಣವೇನು?

Share :

Published March 22, 2024 at 12:45pm

    ಸೀಸನ್​ 17ಕ್ಕೂ ಮುನ್ನ ಫ್ಯಾನ್ಸ್​ಗೆ ಶಾಕ್​ ಕೊಟ್ಟ ಧೋನಿ

    CSKಗೆ ಋತುರಾಜ್​ ಗಾಯಕ್ವಾಡ್​ ನೂತನ ನಾಯಕ

    ಪಟ್ಟ ತ್ಯಜಿಸಿದ ತಲಾ, ಋತುರಾಜ್​ ನೂತನ ನಾಯಕ..!

ಧೋನಿ ಅಂದ್ರೆನೆ ಅನ್​​ಪ್ರಿಡಿಕ್ಟಬಲ್​. ಯಾವಾಗ? ಏನು? ನಿರ್ಧಾರ ತೆಗೆದುಕೊಳ್ತಾರೆ ಅನ್ನೋದನ್ನ ಕನಿಷ್ಟ ಊಹಿಸೋಕೂ ಸಾಧ್ಯವಿಲ್ಲ. ಎಲ್ಲರೂ ಐಪಿಎಲ್​ ಹಬ್ಬದ ಸಂಭ್ರಮಕ್ಕೆ ಕಾತರರಾಗಿ ಕಾಯ್ತಿದ್ದಾರೆ. ಈ ಸಂದರ್ಭದಲ್ಲಿ ತಲಾ ಧೋನಿ, ಫ್ಯಾನ್ಸ್​ಗೆ ಶಾಕ್​ ಕೊಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಚೆನ್ನೈ ಮತ್ತೆ ಕಪ್​ ಗೆಲ್ಲುತ್ತಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​ 17ರ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಒಂದು ಟ್ರೋಫಿ ಮೇಲೆ 10 ತಂಡಗಳು ಕಣ್ಣಿಟ್ಟಿವೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಫ್ಯಾನ್ಸ್​ ಕೂಡ ಐಪಿಎಲ್​ ಆರಂಭಕ್ಕೆ ಕಾತುರರಾಗಿ ಕಾಯ್ತಿದ್ದಾರೆ. ಇದ್ರ ನಡುವೆ ಸಿಎಸ್​ಕೆ ನಾಯಕ ಎಮ್​​.ಎಸ್​ ಧೋನಿ ಫ್ಯಾನ್ಸ್​ಗೆ​​ ಆಘಾತ ನೀಡಿದ್ದಾರೆ.

ಸಿಎಸ್​ಕೆ ನಾಯಕತ್ವಕ್ಕೆ ಗುಡ್​​ ಬೈ ಹೇಳಿದ ಧೋನಿ
ಐಪಿಎಲ್​ ಆರಂಭಕ್ಕಾಗಿ ಎಲ್ರೂ ಕಾಯ್ತಾ ಇರೋ ಈ ಸಂದರ್ಭದಲ್ಲಿ ಧೋನಿ ದಿಢೀರ್​ ನಿರ್ಧಾರ ಕೈಗೊಂಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ನಾಯಕತ್ವಕ್ಕೆ ಧೋನಿ ದಿಢೀರ್​​ ಗುಡ್​ ಬೈ ಹೇಳಿದ್ದಾರೆ. CSK​ ಫ್ರಾಂಚೈಸಿ ಟ್ವೀಟ್ ಮಾಡುವ ಮೂಲಕ ಧೋನಿ ನಾಯಕತ್ವದಿಂದ ಕೆಳಗಿಳಿದ ಸುದ್ದಿಯನ್ನ ಅಧಿಕೃತವಾಗಿಸಿದೆ. ಟೂರ್ನಿಗೆ ಒಂದು ದಿನ ಮುಂಚೆ ಧೋನಿ ತೆಗೆದುಕೊಂಡಿರೋ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಪಟ್ಟ ತ್ಯಜಿಸಿದ ತಲಾ, ಋತುರಾಜ್​ ನೂತನ ನಾಯಕ
ಧೋನಿ ನಾಯಕತ್ವದ ಕೆಳಗಿಳಿದ ಬೆನ್ನಲ್ಲೇ ಯುವ ಆಟಗಾರನಿಗೆ ಫ್ರಾಂಚೈಸಿ ಪಟ್ಟ ಕಟ್ಟಿದೆ. ನಿರೀಕ್ಷೆಯಂತೆ ಋತುರಾಜ್​ ಗಾಯಕ್ವಾಡ್​ ನಾಯಕನ ಪಟ್ಟಕ್ಕೇರಿದ್ದಾರೆ. ಭವಿಷ್ಯದ ಲೆಕ್ಕಾಚಾರವನ್ನ ಹಾಕಿರುವ ಫ್ರಾಂಚೈಸಿ, 27 ವರ್ಷದ ಋತುರಾಜ್​ಗೆ ಪಟ್ಟ ಕಟ್ಟಿದೆ. ಋತುರಾಜ್ ​​2019ರಿಂದ ಚೆನ್ನೈ ಫ್ರಾಂಚೈಸಿಯ ಭಾಗವಾಗಿದ್ದಾರೆ.

ಧೋನಿ ದಿಢೀರ್​​ ನಿರ್ಧಾರಕ್ಕೆ ಕಾರಣ ಏನು?
ಕಳೆದ ವರ್ಷದ ಐಪಿಎಲ್​ ಅಂತ್ಯವಾದ ಬೆನ್ನಲ್ಲೇ ಧೋನಿ KNEE ಸರ್ಜರಿಗೆ ಒಳಗಾಗಿದ್ರು. ಇಂಜುರಿಯಿಂದ ಈವರೆಗೆ ಧೋನಿ ಪರಿಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದ್ರಿಂದ ಧೋನಿಗೆ ಟೀಮ್​ ಮೇಲೆ ಫೋಕಸ್​ ಮಾಡೋದಕ್ಕೆ ಕಷ್ಟ ಆಗ್ತಿದೆ. ಟೂರ್ನಿ ಮಧ್ಯೆ ಮತ್ತೆ ಇಂಜುರಿಯಾದ್ರೆ, ತಂಡದಿಂದ ಹೊರಬರಬೇಕಾಗುತ್ತದೆ. ಹೀಗಾಗಿ ಧೋನಿ ಈ ನಿರ್ಧಾರ ಕೈಗೊಂಡಿದ್ದಾರೆ.

ಇದೇ ಧೋನಿ ಪಾಲಿನ ಕೊನೆಯ ಐಪಿಎಲ್?
ಚೆನ್ನೈ ನಾಯಕತ್ವಕ್ಕೆ ಗುಡ್​ ಬೈ ಹೇಳಿರೋದು ಇದೇ ಧೋನಿ ಪಾಲಿನ ಕೊನೆಯ ಸೀಸನ್​ ಎಂಬ ಸುಳಿವು ನೀಡಿದಂತಿದೆ. ಈಗಾಗಲೇ ಧೋನಿಯ ವಯಸ್ಸು 42ರ ಗಡಿ ದಾಟಿದೆ. ಹಿಂದಿನ ಚಾರ್ಮ್​ ಕೂಡ ಮಾಯವಾಗಿದೆ. ನೀ ಇಂಜುರಿ ಸಮಸ್ಯೆ ಕೂಡ ಇರೋದ್ರಿಂದ ಈ ಸೀಸನ್​​ನ ಅಂತ್ಯದೊಂದಿಗೆ ಧೋನಿ ಐಪಿಎಲ್​ಗೂ ಗುಡ್​ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ.

ಋತುರಾಜ್​​ಗೆ ನಾಯಕತ್ವ ನೀಡಿದ್ಯಾಕೆ..?
ಚಾಣಾಕ್ಷ ಧೋನಿ ಅಳೆದೂ ತೂಗಿ ಲೆಕ್ಕಾಚಾರ ಹಾಕಿಯೇ ನಾಯಕತ್ವ ಹಸ್ತಾಂತರ ಮಾಡಿದ್ದಾರೆ. ಕಳೆದ 5 ಸೀಸನ್​​ನಿಂದ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯಲ್ಲಿರೋ ಋತುರಾಜ್​, ಸಿಎಸ್​​ಕೆ ಕಲ್ಚರ್​ಗೆ ಅಡ್ಜಸ್ಟ್​ ಆಗಿದ್ದಾರೆ. ನಾಯಕನಿಗೆ ಇರಬೇಕಾದ ಎಲ್ಲಾ ಕ್ವಾಲಿಟಿಗಳು ಋತುರಾಜ್​ಗಿದೆ. ಕೂಲ್​ ಅಂಡ್ ಕಾಮ್ ವ್ಯಕ್ತಿತ್ವದ ಋತುರಾಜ್ ಒಳ್ಳೆ ಬ್ಯಾಟ್ಸ್​ಮನ್​​ ಅನ್ನೋದ್ರ ಜೊತೆಗೆ ಉತ್ತಮ ಗೇಮ್​ ರೀಡರ್​ ಕೂಡ ಹೌದು. ತಂಡಕ್ಕೆ ಏಕ್ಸಾಂಪಲ್​ ಸೆಟ್​ ಮಾಡಬಲ್ಲ ಸಾಮರ್ಥ್ಯವಿರೋ ಋತುರಾಜ್​, ಭವಿಷ್ಯದ ದೃಷ್ಟಿಯಿಂದಲೂ ಬೆಸ್ಟ್​ ಚಾಯ್ಸ್​.!

ಒಟ್ಟಿನಲ್ಲಿ, ಫ್ರಾಂಚೈಸಿ ಭವಿಷ್ಯದ ಬಗ್ಗೆ ಲೆಕ್ಕಾಚಾರ ಹಾಕಿರುವ ಧೋನಿ ಸೀಸನ್​ ಆರಂಭಕ್ಕೂ ಮುನ್ನವೇ ಯುವ ಆಟಗಾರನಿಗೆ ನಾಯಕತ್ವ ಹಸ್ತಾಂತರಿಸಿದ್ದಾರೆ. ಧೋನಿ ಗರಡಿಯಲ್ಲೇ ಪಳಗಿರೋ ಋತುರಾಜ್​ ಗಾಯಕ್ವಾಡ್​​, ತಂಡವನ್ನ ಹೇಗೆ ಲೀಡ್​ ಮಾಡ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಾಯಕ್ವಾಡ್​ಗೆ CSK ನಾಯಕತ್ವದ ಜವಾಬ್ದಾರಿ ನೀಡಿದ್ದೇಕೆ? ಧೋನಿ ದಿಢೀರ್​​ ನಿರ್ಧಾರಕ್ಕೆ ಕಾರಣವೇನು?

https://newsfirstlive.com/wp-content/uploads/2024/03/GAIKWAD.jpg

Load More