/newsfirstlive-kannada/media/post_attachments/wp-content/uploads/2024/11/gouathmi.jpg)
ಕನ್ನಡದ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಬಿಗ್ಬಾಸ್ ಮನೆಯಲ್ಲಿ ಒಂದು ರೇಂಜ್ಗೆ ಸೌಂಡ್ ಮಾಡುತ್ತಿದ್ದಾರೆ. ಇನ್ನೂ ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್ ಖಡಕ್ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು. ಇದೀಗ ವೀಕ್ಷಕರ ಕನಸ್ಸು ಒಂದು ಮಟ್ಟಿಗೆ ನನಸಾಗಿದೆ.
ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ; ಹುಡುಗ ಯಾರು?
ಹೌದು, ವೀಕ್ಷಕರು ಸುಮಾರು 3 ವರ್ಷಗಳ ಕಾಲ ಗೌತಮಿ ಅವರನ್ನ ಸತ್ಯನ್ನೋ ಖಡಕ್ ಪಾತ್ರದಲ್ಲಿಯೇ ನೋಡಿದ್ದಾರೆ. ಯಾವುದೇ ಶೋಗೆ ಬಂದ್ರೂ ಅದೇ ಪಾತ್ರದಲ್ಲಿಯೇ ಎಂಟ್ರಿಯಾಗ್ತಿದ್ರು. ಅಲ್ಲೊಂದು ಇಲ್ಲೊಂದು ಸಂದರ್ಶನವೊಂದರಲ್ಲಿ ಬಿಟ್ಟರೇ ಗೌತಮಿ ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತೇ ಇರಲಿಲ್ಲ.
ಇದೀಗ ಬಿಗ್ಬಾಸ್ನಲ್ಲಿ ಗೌತಮಿ ಅವರು ಹೇಗಿದ್ದಾರೆ ಅಂತ ಒಂದು ಮಟ್ಟಿಗೆ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಗೊತ್ತಾಗಿದೆ. ಗೌತಮಿ ಅವರು ಆಡುವ ಟಾಸ್ಕ್ ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಟಾಸ್ಕ್ ಅಂತ ಬಂದರೆ ಅವರು ಎಷ್ಟು ಸ್ಟ್ರಾಂಗ್ ಆಗಿ ಆಡುತ್ತಾರೆ? ಯಾವ ತರ ಸ್ಟಾಟರ್ಜಿ ಯೂಸ್ ಮಾಡ್ತಾರೆ ಅಂತ ಗೊತ್ತಾಗಿದೆ. ಹೀಗೆ ಇಷ್ಟೆಲ್ಲಾ ಗಮನಕೊಟ್ಟು ಆಡುವ ಆಟದ ಹಿಂದೆ ಒಂದು ಶಕ್ತಿ ಇದೆ. ಅದುವೆ ಧ್ಯಾನ.
ಹೌದು, ಗೌತಮಿ ಅವರು ಅಷ್ಟು ಕೂಲ್ ಆಗಿ ಇರೋದಕ್ಕೆ ಮುಖ್ಯ ಕಾರಣವೇ ಧ್ಯಾನ. ಬಿಗ್ಬಾಸ್ ಮನೆಯಲ್ಲಿ ದೇವರ ವಿಗ್ರಹದ ಮುಂದೆ ಕುಳಿತುಕೊಂಡ ಆಗಾಗ ಧ್ಯಾನ ಮಾಡುತ್ತಲೇ ಇರುತ್ತಾರೆ. ಅಲ್ಲದೇ ಯಾವಾಗಲೂ ಧನಾತ್ಮಕವಾಗಿ ಯೋಚನೆ ಮಾಡುತ್ತಾರೆ. ಹೀಗಾಗಿ ಅವರು ಏಕಾಗ್ರತೆಯಿಂದ ಇರೋದಕ್ಕೆ ಸಾಧ್ಯವಾಗಿದೆ. ಅದಕ್ಕಾಗಿ ಅವರು ಯಾವುದೇ ಟಾಸ್ಕ್ ಆಡಿದ್ರೂ ಒಂದೇ ಕಡೆ ಗಮನಹರಿಸಿ ವಿನ್ ಆಗುತ್ತಾರೆ.
ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!
ನಿನ್ನೆಯ ಎಪಿಸೋಡ್ನಲ್ಲೂ ಗೌತಮಿ ಅವರು ತುಂಬಾ ಚೆನ್ನಾಗಿ ಟಾಸ್ಕ್ ಆಡಿ ಗೆದ್ದು ಬಿಗಿದ್ದಾರೆ. ಆಟದ ವೇಳೆ ಗೌತಮಿ ಅವರು ಮಂತ್ರವನ್ನು ಓದುತ್ತಾ ತವರಿನ ಸಿರಿ ಟಾಸ್ಕ್ನಲ್ಲಿ ಗೆದ್ದು ಅನುಷಾ ಅವರನ್ನು ನಾಮಿನೇಷನ್ನಿಂದ ಸೇವ್ ಮಾಡಿದ್ದಾರೆ. ಅಲ್ಲದೇ ಸಹ ಸ್ಪರ್ಧಿಗಳು ಗೌತಮಿ ಅವರ ಆಟವನ್ನು ನೋಡಿ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ