/newsfirstlive-kannada/media/post_attachments/wp-content/uploads/2024/11/Shah-rukh-Khan.jpg)
ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್. ಇವರು ಎಂದರೆ ಅಭಿಮಾನಿಗಳಿಗೆ ಹುಚ್ಚು. ಇತ್ತೀಚೆಗೆ ನಟ ಶಾರುಖ್ ಖಾನ್ ತಾನು ಧೂಮಪಾನ ತ್ಯಜಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
ಶಾರುಖ್ ಖಾನ್ ದಿನಕ್ಕೆ 100ನ ಸಿಗರೇಟು ಸೇದುತ್ತಿದ್ದರಂತೆ. ಆದರೆ ಇದರಿಂದ ಉಸಿರಾಟ ಸಮಸ್ಯೆ ಕಂಡುಕೊಂಡ ಅವರು ಅದನ್ನು ತ್ಯಜಿಸಿದ್ದಾರೆ. ಅಭಿಮಾನಿಗಳ ಮುಂದೆ ನಾನು ಇನ್ನು ಮುಂದೆ ಸಿಗರೇಟ್ ಸೇದಲ್ಲ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ಏನಂದ್ರು?
ನನಗೆ ಉಸಿರಾಟದ ತೊಂದರೆಯಾಗುತ್ತಿದೆ. ಧೂಮಪಾನ ತ್ಯಜಿಸಿದ ನಂತರ ನಮಗೆ ಉಸಿರಾಡಲು ಕಷ್ಟವಾಗುತ್ತದೆ ಎಂದು ಭಾವಿಸಿದ್ದೆ. ಅದು ತಪ್ಪೆಂದು ಆಮೇಲೆ ತಿಳಿಯಿತು. ಹಾಗಾಗಿ ನಾನು ಸಿಗರೇಟು ಸೇದುವುದನ್ನು ತ್ಯಜಿಸಿದ್ದೇನೆ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿದೆ ಎಂದಿದ್ದರು.
2011ರಲ್ಲಿ ಸಂದರ್ಶನ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ತಮ್ಮ ಜೀವನ ಶೈಲಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ದಿನಕ್ಕೆ 100 ಸಿಗರೇಟು ಸೇದುತ್ತೇನೆ ಎಂದು ಹೇಳಿದ್ದರು. ನಾನು ತಿನ್ನಲು ಮರೆಯುತ್ತೇನೆ. ನೀರು ಕುಡಿಯುವುದಿಲ್ಲ. ನನ್ನ ಬಳಿ ಸುಮಾರು 30 ಕಪ್ ಕಾಫಿ ಇದೆ. ಸಿಕ್ಸ್ ಪ್ಯಾಕ್ ಕೂಡ ಇದೆ ಎಂದು ತಮಾಷೆ ಮಾಡಿದ್ದರು.
ಇದನ್ನೂ ಓದಿ:ಇಂದು ಡಾಲಿ ಧನಂಜಯ್, ವೈದ್ಯೆ ಧನ್ಯತಾ ಸಪ್ತಪದಿ; ಕೆಲವೇ ಕ್ಷಣಗಳಲ್ಲಿ ಮಾಂಗಲ್ಯ ಧಾರಣೆ
ಸಿನಿಮಾ ವಿಚಾರಕ್ಕೆ ಬರೋದಾದ್ರೆ ಶಾರುಖ್ ಖಾನ್ ಕಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಆ್ಯಕ್ಷನ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ಸುಯೋಜ್ ಘೋಷ್ ನಿರ್ದೇಶಿಸುತ್ತಿದ್ದಾರೆ. ಡಾನ್ ಪಾತ್ರದಲ್ಲಿ ಶಾರುಖ್ ಕಾಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸುಹಾನಾ ಖಾನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಅಭಿಷೇಕ್ ಬಚ್ಚನ್ ವಿಲನ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ