ಉಗುರು ಕತ್ತರಿಸಿ ನೆಲದ ಮೇಲೆ ಬಿಸಾಡಬಾರದು ಯಾಕೆ ಗೊತ್ತಾ? ವೈಜ್ಞಾನಿಕ ಕಾರಣಗಳು ಇಲ್ಲಿದೆ!

author-image
Veena Gangani
Updated On
ಉಗುರು ಕತ್ತರಿಸಿ ನೆಲದ ಮೇಲೆ ಬಿಸಾಡಬಾರದು ಯಾಕೆ ಗೊತ್ತಾ? ವೈಜ್ಞಾನಿಕ ಕಾರಣಗಳು ಇಲ್ಲಿದೆ!
Advertisment
  • ರಾತ್ರಿ ಹೊತ್ತಲ್ಲೇ ನಿಮ್ಮ ಉಗುರು ಕತ್ತರಿಸಿದರೆ ಏನೆಲ್ಲಾ ಅಪಾಯಕಾರಿ!
  • ಗುರು ಹಿರಿಯರು ಏಕೆ ಪದೇ ಪದೇ ಈ ಮಾತನ್ನು ಹೇಳುತ್ತಾ ಇರ್ತಾರೆ?
  • ಕಟ್​ ಮಾಡಿದ ಉಗುರಿನಿಂದ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ

ಪ್ರತಿ ಮನೆಯಲ್ಲಿ ಈ ಮಾತನ್ನು ಹೇಳಿಯೇ ಇರ್ತಾರೆ. ಅದರಲ್ಲೂ ಅಜ್ಜ ಅಜ್ಜಿಯಂತೂ ಪುಟ್ಟ ಮಕ್ಕಳಿಗೆ ಕೆಲವೊಂದು ಅಚ್ಚರಿ ಸಂಗತಿಗಳ ಬಗ್ಗೆ ಹೇಳುತ್ತಾರೆ. ಅದುವೇ ರಾತ್ರಿಯಲ್ಲಿ ಉಗುರನ್ನು ಕಟ್​ ಮಾಡಬಾರದು, ಅದರಲ್ಲೂ ಕಟ್​ ಮಾಡಿದ ಉಗುರನ್ನು ನೆಲದ ಮೇಲೆ ಬಿಸಾಡೋದಕ್ಕೆ ಹೋಗಲೇಬಾರದು.

ಇದನ್ನೂ ಓದಿ:ಫ್ರಿಡ್ಜ್​​ನಿಂದಲೇ UTI ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ; ಹೊಸ ಅಧ್ಯಯನ ಹೇಳುತ್ತಿರುವುದೇನು?

publive-image

ನಿಯಮದ ಪ್ರಕಾರ, ಕೈ, ಕಾಲು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಬಹಳ ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಉಗುರನ್ನು ಕತ್ತರಿಸಬೇಕು. ಉಗುರುಗಳನ್ನು ಕತ್ತರಿಸದೆ ಹಾಗೇ ಬಿಡುವುದರಿಂದ ಅನೇಕ ರೀತಿ ರೋಗಗಳು ನಮ್ಮನ್ನು ಬಾಧಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅದೇ ರೀತಿ ಉಗುರುಗಳನ್ನು ಕತ್ತರಿಸುವುದರ ಬಗ್ಗೆ ಸಾಕಷ್ಟು ಧಾರ್ಮಿಕ ನಂಬಿಕೆಗಳು, ಹಲವಾರು ಕಾರಣಗಳು ಇವೆ. ಸಂಜೆಯ ಸಮಯದಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯ ಹಿರಿಯರು, ತಿಳಿದವರು ಹೇಳುತ್ತಲೆ ಇರುತ್ತಾರೆ. ಆದರೆ ಇದರ ಹಿಂದೆ ಧಾರ್ಮಿಕ ಉದ್ದೇಶವೂ ಇದೆ.

publive-image

ಧಾರ್ಮಿಕ ಉದ್ದೇಶದ ಪ್ರಕಾರ, ಸಂಜೆಯ ವೇಳೆಯಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿಯು ಆಗಮಿಸುತ್ತಾಳಂತೆ. ಹೋಗಾಗಿ ಇದೇ ಸಮಯದಲ್ಲಿ ಮನೆಯಲ್ಲಿದ್ದ ಕಸವನ್ನು ಮನೆಯಿಂದ ಆಚೆ ಹಾಕಬಾರದು. ಹಣವನ್ನು ಹಸ್ತಾಂತರಿಸುವುದು, ಉಗುರುಗಳು ಮತ್ತು ಕೂದಲನ್ನು ಕತ್ತರಿಸಬಾರದು. ಇದು ಲಕ್ಷ್ಮಿ ದೇವಿಯನ್ನು ಅಗೌರವಗೊಳಿಸುತ್ತದೆ ಎಂದು ನಂಬಲಾಗಿದೆ. ಇನ್ನೂ ಕರೆಂಟ್​ ಇಲ್ಲದೇ ಇದ್ದಾ ಉಗುರನ್ನು ಕತ್ತರಿಸಲೇಬಾರದು. ಏಕೆಂದರೆ, ಕೆಲವೊಬ್ಬರು ಈಗಲೂ ಕೂಡ ತಮ್ಮ ತಮ್ಮ ಉಗುರುಗಳನ್ನು ಕತ್ತರಿಸಲು ಬ್ಲೇಡ್‌ಗಳನ್ನು ಬಳಸುತ್ತಾರೆ. ಈ ವೇಳೆ ಕೈ ಅಥವಾ ಕಾಲು ಬೆರಳಿಗೆ ಬ್ಲೇಡ್‌ ತಗುಲಬಹುದು, ಇದರಿಂದ ಗಾಯವಾಗಬಹುದು ಎನ್ನುವ ಕಾರಣದಿಂದಾಗಿ ಮುಸ್ಸಂಜೆ ವೇಳೆ ಉಗುರು ಕಟ್​ ಮಾಡಬೇಡಿ ಅಂತ ಹೇಳ್ತಾರೆ.

publive-image

ಜೊತೆಗೆ ನಾವು ಕತ್ತರಿಸಿ ಬಿಸಾಕಿದ ನಮ್ಮ ಉಗುರುಗಳು ಪಕ್ಷಿಗಳಿಗೆ ದೂರದಿಂದ ಅಕ್ಕಿಯ ಕಾಳಿನ ಹಾಗೆ ಕಾಣಿಸುತ್ತವೆ. ಅವುಗಳು ಅದನ್ನ ಅಕ್ಕಿ ಕಾಳು ಅಂತ ತಿಳಿದುಕೊಂಡು ತಿಂದು ಗಂಟಲಲ್ಲಿ ಸಿಕ್ಕಿ ಉಸಿರಾಟದ ತೊಂದರೆಯಿಂದ ಸಾಯುತ್ತವೆ. ಹೀಗಾಗಿ ಎಲ್ಲದರಲ್ಲಿ ಉಗುರು ಕಟ್​​ ಮಾಡದೇ, ಕತ್ತರಿಸಿದ ಬಳಿಕ ಒಂದು ಪೇಪರ್‌ನಲ್ಲಿ ಸುತ್ತಿ ಬಿಸಾಕಬೇಕು. ನಾವು ಮನುಷ್ಯರಾಗಿ ಭೂಮಿಯ ಮೇಲೆ ಇರುವ ಪ್ರಕೃತಿಯನ್ನ ಅಲ್ಲಿರುವ ಪ್ರಾಣಿ ಪಕ್ಷಿಗಳನ್ನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

publive-image

ಇನ್ನು, ಮತ್ತೊಂದು ಕಾರಣವೆಂದರೆ, ನಾವು ಉಗುರುಗಳನ್ನು ಕತ್ತರಿಸಿದ ನಂತರ, ಅದರ ತುಂಡುಗಳು ನೆಲದ ಮೇಲೆ ಬೀಳಬಹುದು. ಅದೇ ಉಗುರು ರಾತ್ರಿಯಲ್ಲಿ ಚೂಪಾದ ತುಣುಕುಗಳು ಗಾಳಿಯ ಮೂಲಕ ನಮ್ಮ ಆಹಾರವನ್ನು ಸೇರಿಕೊಳ್ಳಬಹುದು. ಇದರ ಮೂಲಕ ನಮ್ಮ ಉದರವನ್ನು ಸೇರಿ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹೀಗಾಗಿ ಆದಷ್ಟು ಜಾಗರೂಕರಾಗಿ ಇರಬೇಕಾಗುತ್ತದೆ. ಬಹಳ ಮುಖ್ಯವಾಗಿ ಉಗುರನ್ನು ಕತ್ತರಿಸದೇ ಇರುವುದು ನಮ್ಮಲ್ಲಿ ಅಶಿಸ್ತನ್ನು ಎತ್ತಿ ತೋರಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment