Advertisment

ವಾಶ್​ರೂಮ್​ಗೆ ಹೋಗುವಾಗಲೂ ಮೊಬೈಲ್ ತೆಗೆದುಕೊಂಡು ಹೋಗುತ್ತೀರಾ? ಹಾಗಿದ್ರೆ ನಿಮಗೆ ಕಾಡುತ್ತವೆ ಆರೋಗ್ಯ ಸಮಸ್ಯೆಗಳು

author-image
Gopal Kulkarni
Updated On
ವಾಶ್​ರೂಮ್​ಗೆ ಹೋಗುವಾಗಲೂ ಮೊಬೈಲ್ ತೆಗೆದುಕೊಂಡು ಹೋಗುತ್ತೀರಾ? ಹಾಗಿದ್ರೆ ನಿಮಗೆ ಕಾಡುತ್ತವೆ ಆರೋಗ್ಯ ಸಮಸ್ಯೆಗಳು
Advertisment
  • ವಾಶ್​ರೂಮ್​ನಲ್ಲಿ ನೀವು ಅವಶ್ಯಕತೆಗಿಂತ ಹೆಚ್ಚು ಕಾಲ ಕಳೆಯುತ್ತಿದ್ದೀರಾ
  • ಯೂಟ್ಯೂಬ್​, ವಾಟ್ಸಾಪ್​ನಲ್ಲಿ ಗಂಟೆಗಟ್ಟಲೇ ಅಲ್ಲಿ ಮುಳುಗಿ ಹೋಗ್ತೀರಾ?
  • ಇಂತಹ ರೂಢಿಗಳು ನಿಮಗೆ ಗಂಭೀರವಾದ ಆರೋಗ್ಯ ಸಮಸ್ಯೆ ತಂದಿಡಲಿವೆ

ನಿಮ್ಮ ಮೆದುಳು ಅತ್ಯಂತ ಚುರುಕಾಗಿ ಕೆಲಸ ಮಾಡುವುದೇ ಬಾತ್​ರೂಮ್​ನಲ್ಲಿ. ಅಲ್ಲಿಯೇ ಹೊಸ ಹೊಸ ಐಡಿಯಾಗಳು ಸೃಷ್ಟಿಯಾಗುವುದು. ಅತ್ಯಂತ ಮೇಧಾವಿಗಳೆಲ್ಲಾ ಹೆಚ್ಚು ಹೆಚ್ಚು ಐಡಿಯಾಗಳನ್ನು ಕಂಡುಕೊಂಡಿದ್ದೇ ಅಲ್ಲಿ ಎಂಬ ಮಾತುಗಳು ಕೂಡ ಇವೆ. ಅದೊಂದೇ ಜಾಗದಲ್ಲಿ ನೀವು ನೀವಾಗಿ ಉಳಿಯಲು ಸಾಧ್ಯ. ಇತ್ತೀಚೆಗೆ ಇಂತಹ ಏಕಾಂತ ಸಮಯವನ್ನೂ ಕೊಲ್ಲಲು ಈಗ ಮೊಬೈಲ್ ಎಂಬ ಬೇಡದ ಸಂಗಾತಿಯೂ ಕೂಡ ಅಲ್ಲಿ ಅಲ್ಲಿ ಸೆಟ್ಲ್ ಆಗಿಬಿಟ್ಟಿದೆ. ಇದು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಲಿದೆ ಅನ್ನೋದು ಗೊತ್ತಾ?

Advertisment

ಇದನ್ನೂ ಓದಿ:ನೀವು ಚಿಕನ್ ಲಿವರ್ ತಿನ್ನುತ್ತಿದ್ದೀರಾ..? ಈ ವಿಚಾರ ನಿಮಗೆ ಗೊತ್ತಿರಲೇಬೇಕು..!

ಯಾವಾಗಲೇ ಆಗಲಿ ಬೆಳಗ್ಗೆ ನೀವು ಬಹಿರ್ದೆಸೆಗೆ ಅಂತ ಹೋದಾಗ ಆಗಲಿ. ಇಲ್ಲವೇ ಬೇರೆ ಸಮಯದಲ್ಲಾಗಲಿ ಟಾಯ್ಲೆಟ್​ನಲ್ಲಿ ನೀವು ಮೊಬೈಲ್​ನೊಂದಿಗೆ ಅಂಟಿಕೊಂಡರೆ ಹಲವು ಸಮಸ್ಯೆಗಳು ಶುರುವಾಗುತ್ತವೆ. ನೀವು ಮೊಬೈಲ್​ನ್ನು ಟಾಯ್ಲೆಟ್​ಗೆ ತೆಗೆದುಕೊಂಡು ಹೋಗಿದ್ದೇ ಆದಲ್ಲಿ ಹಲವು ಆರೋಗ್ಯ ಹಾನಿಕಾರ ಸಮಸ್ಯಗಳು ಉಂಟಾಗೋದು ಗ್ಯಾರಂಟಿ. ಅದು ಹಲವು ಕೀಟಾಣುಗಳಿಂದಲೇ ಶುರುವಾಗುತ್ತದೆ. ನಮಗೆಲ್ಲಾ ಗೊತ್ತು ಬಾತ್​ರೂಮ್ ಅಂದ್ರೆ ಅದು ಬ್ಯಾಕ್ಟಿರಿಯಾಗಳ ಗೂಡು ಅಂತ. ಅಲ್ಲಿ ನೀವು ಮೊಬೈಲ್ ತೆಗೆದುಕೊಂಡು ಹೋಗುವುದರಿಂದ, ಅಲ್ಲಿರುವ ಬ್ಯಾಕ್ಟಿರಿಯಾಗಳು,ನೀವು ಅಲ್ಲಿ ಮೊಬೈಲ್ ಬಳಸುವುದರಿಂದ ಬಾತ್​ರೂಮ್ ಆಚೆಗೂ ಹರಡಿಕೊಂಡು ಹಲವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗೋದು ಪಕ್ಕಾ.

ಇದನ್ನೂ ಓದಿ: ಪ್ರೀತಿಗೆ ಸೇತುವೆಯಾದ ಒಂದು ಚಾಕೊಲೇಟ್​.. ಸಿನಿಮಾ ಮೀರಿಸುತ್ತೆ ಅಕ್ಷರ್ ಪಟೇಲ್ ಲವ್​ ಸ್ಟೋರಿ

Advertisment

ಬಾತ್​ರೂಮ್​ಗಳಲ್ಲಿ ಇತ್ತೀಚೆಗೆ ಮೊಬೈಲ್​ನಲ್ಲಿ ಕಾಲ ಕಳೆಯುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ನೀವು ಟಾಯ್ಲೆಟ್​ನಲ್ಲಿ ಮೊಬೈಲ್​ನೊಂದಿಗೆ ಕೂತಾಗ ಏನೇನೋ ನೋಡುತ್ತಾ ಸುಮ್ಮನೆ ಕೆಲಸ ಮುಗಿದ ಮೇಲೆಯೂ ಕೂಡ ಅಲ್ಲಿ ಸಮಯ ಕಳೆಯುತ್ತಿರುತ್ತಾರೆ. ಅನಾವಶ್ಯಕವಾಗಿ ನಮ್ಮ ಗುದನಾಳದ ರಕ್ತನಾಳದ ಮೇಲೆ ಅನವಾಶ್ಯಕವಾಗಿ ಹೆಚ್ಚು ಒತ್ತಡ ಬೀಳುವುದರಿಂದ ಪೈಲ್ಸ್​ನಂತಹ ಸಮಸ್ಯೆಗಳು ಶುರುವಾಗುತ್ತವೆ. ಧರ್ಮಶಿಲಾ ನಾರಾಯಣ ಆಸ್ಪತ್ರೆಯ ವೈದ್ಯರಾದ ಡಾ. ಮಹೇಶ್​ ಗುಪ್ತಾ ಅವರು ಹೇಳುವ ಪ್ರಕಾರ. ನೀವು ಒಂದು ವೇಳೆ ನಾನು ಮೊಬೈಲ್ ಮರೆತು ಬಂದೆ ಅಂತ ವಾಪಸ್​ ಟಾಯ್ಲೆಟ್​ಗೆ ಹೋಗಿ ಬಂದಿರುವವರಲ್ಲಿ ಒಬ್ಬರಾದರೆ ತಿಳಿದುಕೊಳ್ಳಿ ನೀವು ಅವಶ್ಯಕತೆಗಿಂತ ಹೆಚ್ಚು ಸಮಯವನ್ನು ಅಲ್ಲಿ ಕೊಂದಿದ್ದೀರಿ ಎಂದು. ಅಲ್ಲಿ ಅನಾವಶ್ಯಕವಾಗಿ ಸ್ಕ್ರೀನ್ ಸ್ಕ್ರಾಲ್ ಮಾಡುತ್ತಾ ಕುಳಿತರೆ. ರೀಲ್ಸ್​ಗಳಲ್ಲಿ ಕಳೆದು ಹೋದರೆ ಆಗುವ ದೊಡ್ಡ ಪರಿಣಾಮಗಳು ಬಹಳ ಇವೆ. ಈ ತರಹದ ರೂಢಿಗಳು ನಿಮಗೆ ಪೈಲ್ಸ್​ನಂತಹ ಸಮಸ್ಯೆಗಳನ್ನ ತಂದಿಡುವುದರಲ್ಲಿ ಸಂದೇಹವೇ ಇಲ್ಲೆ ಎನ್ನುತ್ತಾರೆ ಡಾ. ಮಹೇಶ್ ಗುಪ್ತಾ.

ಇದನ್ನೂ ಓದಿ:ಮಕ್ಕಳಿಗೆ ತಾವೇ ಅಡುಗೆ ಮಾಡ್ತಾರೆ ಕೊಹ್ಲಿ, ಅನುಷ್ಕಾ.. ಸ್ಟಾರ್​ ಸೆಲೆಬ್ರಿಟಿ ಕಾಳಜಿ ಹೆಂಗಿದೆ ಗೊತ್ತಾ?

ಹೀಗ ದೀರ್ಘವಾಗಿ ಒಂದೇ ಜಾಗದಲ್ಲಿ ಒಂದೇ ಭಂಗಿಯಲ್ಲಿ ಕೂಡುವುದಿಂದಾಗಿ ಗುದನಾಳದಲ್ಲಿರುವ ರಕ್ತನಾಳಗಳ ಮೇಲೆ ಹೆಚ್ಚು ಪ್ರೆಶರ್​ ಉಂಟಾಗಿ ಪೈಲ್ಸ್​ನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗೆ ಜನರು ಬಾತ್​ರೂಮ್​ನಲ್ಲಿ 45 ರಿಂದ 50 ನಿಮಿಷಗಳ ಕಾಲ ಕುಳಿತಿರುತ್ತಾರೆ. ಇದು ಅತ್ಯಂತ ಸುದೀರ್ಘವಾದ ಸಮಯ. ಹೀಗಾಗಿ ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಗುದದ್ವಾರದಲ್ಲಿ ನೋವು, ನೆವೆ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳು ಇದರಿಂದ ಶುರುವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment