/newsfirstlive-kannada/media/post_attachments/wp-content/uploads/2025/04/Pahalgam.jpg)
ಜಮ್ಮು-ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. 2019ರ ಪುಲ್ವಾಮಾ ದಾಳಿ ಬಳಿಕ ಅತ್ಯಂತ ರಣ ಭಯಂಕರ ಉಗ್ರರ ದಾಳಿ ಇದಾಗಿದೆ.
ಪೈಶಾಚಿಕ ಕೃತ್ಯ ಒಂದೊಂದು ಕ್ಷಣವೂ ಭಯಾನಕವಾಗಿತ್ತು. ಹಿಂದೂ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿದ್ದ ರಾಕ್ಷಸರು, ಹೆಸರು ಕೇಳಿ, ಅನುಮಾನ ಬಂದವರ ಪ್ಯಾಂಟ್ ಬಿಚ್ಚಿಸಿ ಗುಂಡಿಟ್ಟಿದ್ದಾರೆ. ಮೃತ 26 ಮಂದಿಯೂ ಪುರುಷರೇ ಆಗಿದ್ದಾರೆ. ಗಂಡಸರನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದು, ಮೃತರಲ್ಲಿ ಬಹುತೇಕರು ಹನಿಮೂನ್ಗೆ, ಫ್ಯಾಮಿಲಿ ಟ್ರಿಪ್ಗೆ ಅಂತಾ ಬಂದಿದ್ದರು.
ಯಾಕೆ ಪಹಲ್ಗಾಮ್ ಟಾರ್ಗೆಟ್ ಮಾಡಿದ್ರು?
ದೇಶದಲ್ಲಿರುವ ಅತೀ ಹೆಚ್ಚು ಆಕರ್ಷಣೀಯ ಸ್ಥಳಗಳಲ್ಲಿ ಇದು ಒಂದು. ಕಾಶ್ಮೀರಕ್ಕಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ಮೇಲೆ ಅಲ್ಲಿ ಶಾಂತಿ ನೆಲೆಸಿತ್ತು. ಹೀಗಾಗಿ ಅಲ್ಲಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆ ಬರುತ್ತಿದ್ದರು. ಇನ್ನು ಪ್ರವಾಸಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ.
ಇದನ್ನೂ ಓದಿ: ಅಪ್ಪನ ಮೃತದೇಹದ ಮೇಲೆ ಕೂತು ಕಂದಮ್ಮ ಕಣ್ಣೀರು.. ಚಾಕೊಲೇಟ್ ಇದೆ ಎಂದಾಗ ಪಪ್ಪ ಬೇಕು ಎಂದ ಪಾಪು
ದಾಳಿಯಾದ ಎಕ್ಸೈಟ್ ಸ್ಥಳದ ಹೆಸರು ಬೈಸರನ್ (Baisaran). ಈ ಬೈಸರನ್ ಪಹಲ್ಗಾಮ್ನಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿದೆ. ಬೈಸರನ್ ಸ್ಥಳದ ಇನ್ನೊಂದು ಮಹತ್ವ ಏನೆಂದರೆ ಇದು ಪ್ರಕೃತಿ ಕೇಂದ್ರದ ನೆಲೆಬೀಡು. ಇದೇ ಕಾರಣಕ್ಕೆ ಇದನ್ನು ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ಅತೀ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
ಇಲ್ಲಿಗೆ ಬರೋದು ಅಷ್ಟು ಸುಲಭ ಇಲ್ಲ. ಬೆಟ್ಟ ಗುಡ್ಡವನ್ನು ಹತ್ತಿ ಇಳಿದು ಬರಬೇಕು. ಅಂದರೆ ಇಲ್ಲಿಗೆ ಹೋಗಲು ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಬರುವ ಪ್ರವಾಸಿಗರು ಗುಡ್ಡವನ್ನು ಏರಿ ಬರಬೇಕು. ಇಲ್ಲಿಗೆ ಬಂದ ಪ್ರವಾಸಿಗರು ತಮ್ಮದೇ ಆದ ಜಾಲಿಯಲ್ಲಿ ಇದ್ದರು. ಆಗ ಎಂಟ್ರಿಯಾಗಿದ್ದೇ ರಾಕ್ಷಸ ಭಯೋತ್ಪಾದಕರು. ಅರಣ್ಯ ಪ್ರದೇಶದ ಮೂಲಕ ಬಂದ ದುಷ್ಟರು, ಪ್ರತಿಯೊಬ್ಬರ ಧರ್ಮ, ಜಾತಿ, ಹೆಸರುನ್ನು ಕೇಳಿ ಗುಂಡಿಟ್ಟಿದ್ದಾರೆ. ದಟ್ಟ ಅರಣ್ಯ ಇರೋದ್ರಿಂದಲೇ ಸುಲಭವಾಗಿ ಇಲ್ಲಿಗೆ ಬಂದಿದ್ದಾರೆ.
ಇದನ್ನೂ ಓದಿ: ಹೆಸರು ಹೇಳ್ತಿದ್ದಂತೆಯೇ ಪತಿಯ ಹಣೆಗೆ ಗುಂಡಿಟ್ಟರು.. 2 ತಿಂಗಳ ಹಿಂದೆ ಮದ್ವೆಯಾಗಿದ್ದ ನವವಧು ಕಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ