‘ರುಚಿ’ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್​.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!

author-image
Ganesh
Updated On
‘ರುಚಿ’ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್​.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!
Advertisment
  • ನಿಮ್ಮ ನಾಲಿಗೆ ಆಗಾಗ ರುಚಿ ಕಳೆದುಕೊಳ್ಳುವುದು ಯಾಕೆ
  • ತಿನ್ನುವ ಆಹಾರದಲ್ಲಿ ಜನ ರುಚಿ ಹುಡುಕುತ್ತಾರೆ, ಆದರೆ!
  • ಇದ್ದಕ್ಕಿದ್ದಂತೆ ಟೇಸ್ಟ್​ ಕಳೆದುಕೊಂಡರೆ ವೈದ್ಯರ ಸಂಪರ್ಕಿಸಿ

ಅವರವರ ರುಚಿ ಅವರವರೇ ಆಸ್ವಾದಿಸಬೇಕು! ಇಲ್ಲಿ ಆಹಾರವಿಲ್ಲದೆ ನಮ್ಮ ಜೀವನ ಇಲ್ಲ. ಹಾಗಂತ ಎಲ್ಲಾ ಸಂದರ್ಭದಲ್ಲೂ ಹಸಿವಿಗಾಗಿಯೇ ಆಹಾರ ತೆಗೆದುಕೊಳ್ಳಲ್ಲ. ಒಂದಷ್ಟು ಬಾಯಿ ಚಪಲ ಇರುತ್ತದೆ. ತಿನ್ನುವ ಆಹಾರದಲ್ಲಿ ಜನ ರುಚಿ ಹುಡುಕುತ್ತಾರೆ. ಆ ಜವಾಬ್ದಾರಿ ನಮ್ಮ ನಾಲಿಗೆಯ ಮೇಲೆ!

ನಾಲಿಗೆಯ ರುಚಿಗೆ ತಕ್ಕಂತೆ ಆಹಾರ ನೋಡುತ್ತೇವೆ. ಅಂದರೆ ಆಹಾರದ ಆಯ್ಕೆ ನಮ್ಮ ನಾಲಿಗೆಗೆ ಬೇಕಾದುದನ್ನು ಆಧರಿಸಿವೆ. ಆದರೆ ಇದ್ದಕ್ಕಿದ್ದಂತೆ ನಾಲಿಗೆಯ ರುಚಿ ಮಂದವಾದರೆ ಅಪಾಯಕಾರಿ! ಯಾಕೆಂದರೆ.. ನಾಲಿಗೆ ರುಚಿ ಕಳೆದುಕೊಳ್ಳುವುದು ಗಂಭೀರ ಕಾಯಿಲೆಗಳ ಲಕ್ಷಣ.

ಇದನ್ನೂ ಓದಿ:ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್.. ಕಾರಣ ಏನು ಗೊತ್ತಾ..?

ನಾವು ಅನಾರೋಗ್ಯಕ್ಕೆ ಒಳಗಾದಾಗ ನಾಲಿಗೆ ರುಚಿ ಮತ್ತು ಬಣ್ಣದಲ್ಲಿ ಬದಲಾಗುತ್ತದೆ. ವೈದ್ಯರು ಚಿಕಿತ್ಸೆಯ ಸಮಯದಲ್ಲಿ ನಾಲಿಗೆ ನೋಡುವುದು ಇದೇ ಕಾರಣಕ್ಕೆ. ಕೊನೆಗೆ ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರೆ. ಏಕಾಏಕಿ ನಾಲಿಗೆಯ ರುಚಿ ಬದಲಾದರೆ ಎಂತಹ ರೋಗಗಳ ಮುನ್ಸೂಚನೆ ಗೊತ್ತಾ..?

ನಾಲಿಗೆ ರುಚಿ ಬದಲಾಗೋದು ಯಾಕೆ?

ಜ್ವರ: ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ನಾಲಿಗೆ ರುಚಿ ಕಳೆದುಕೊಳ್ಳುತ್ತದೆ. ಇದು ಸಾಮಾನ್ಯ ದೈಹಿಕ ಸಮಸ್ಯೆ. ಕೆಲವು ಸಂದರ್ಭಗಳಲ್ಲಿ ಇದು ರೋಗದ ಲಕ್ಷಣವೂ ಆಗಿರಬಹುದು.

ಮಧುಮೇಹ: ಈ ರೋಗಿಗಳು ನಾಲಿಗೆಯ ರುಚಿಯಲ್ಲಿ ಆಗಾಗ ಬದಲಾವಣೆ ಅನುಭವಿಸುತ್ತಾರೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯ ಸ್ಥಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ.

ಹಲ್ಲಿನ ಸಮಸ್ಯೆ: ಅಲ್ಲಿನ ಸಮಸ್ಯೆಗಳು ನಾಲಿಗೆಯ ರುಚಿಯ ಮೇಲೆ ಪರಿಣಾಮ ಬೀರುತ್ತವೆ. ಒಸಡಿನ ಉರಿಯೂತ, ಕುಳಿ ಮತ್ತು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಇಂಥ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

ನರವೈಜ್ಞಾನಿಕ ಸಮಸ್ಯೆಗಳು: ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಅಥವಾ ಮಲ್ಟಿಪಲ್ ಸ್ಕ್ಲೆರೋಸಿಸ್ ಅಂತಹ ಅನೇಕ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ನಾಲಿಗೆ ರುಚಿಯಲ್ಲಿ ಬದಲಾವಣೆ ತರುತ್ತವೆ.

ಇದನ್ನೂ ಓದಿ: ನ್ಯೂಸ್​ ಫಸ್ಟ್ ವರದಿ ಬೆನ್ನಲ್ಲೇ ಎಚ್ಚತ್ತ ಅಧಿಕಾರಿ; BPL ಕಾರ್ಡ್ ರದ್ದಾಗಿದ್ದ ಕುಟುಂಬಕ್ಕೆ ಪರಿಹಾರ..!

ಕೆಮ್ಮು - ಶೀತ: ಕೆಮ್ಮು ಮತ್ತು ಶೀತದ ಸಮಯದಲ್ಲಿ ನಾಲಿಗೆ ರುಚಿಯನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಅದು ಮೂಗಿಗೆ ಅಡ್ಡಿಪಡಿಸುತ್ತದೆ. ಇದು ನಮ್ಮ ರುಚಿಯನ್ನು ನಿರ್ಧರಿಸಲು ಕಾರಣವಾಗಿದೆ.

ಕೋವಿಡ್ 19: ಕೊರೊನಾ ವೈರಸ್ ಸೋಂಕು ಪ್ರಪಂಚದಾದ್ಯಂತ ಭಾರೀ ಪೆಟ್ಟು ನೀಡಿದೆ. ಸಾಂಕ್ರಾಮಿಕ ರೋಗದಿಂದ ಸೋಂಕಿತರಾದ ಅನೇಕರು ರುಚಿಯನ್ನು ಕಳೆದುಕೊಂಡಿದ್ದಾರೆ. ಇದು ಕೋವಿಡ್ -19ರ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಕಾಂಗರೂ ಬೇಟೆಗೆ ಕೆರಳಿ ನಿಂತ ಕಿಂಗ್ ಕೊಹ್ಲಿ.. ಪರ್ತ್​ನಲ್ಲಿ ಯಾವಗಲೂ ವಿರಾಟ್​ ಸೂಪರ್ ಸ್ಟಾರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment