/newsfirstlive-kannada/media/post_attachments/wp-content/uploads/2025/04/TRUMP-TARRIF-1.jpg)
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇತ್ತೀಚೆಗೆ ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ತೆರಿಗೆ ಯುದ್ಧ ಆರಂಭಿಸಿದ್ದರು. ವಿಶ್ವದ ಬೇರೆ ರಾಷ್ಟ್ರಗಳಿಂದ ಅಮೆರಿಕಾಗೆ ಆಮದಾಗುವ ಎಲ್ಲಾ ಉತ್ಪನ್ನಗಳ ಮೇಲೆ ಸುಂಕದ ಸಮರ ಸಾರಿದ್ದರು. ಈಗ ಆ ಸಮರಕ್ಕೆ 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ. ಚೀನಾ ಹೊರತುಪಡಿಸಿ ವಿವಿಧ ದೇಶಗಳ ಮೇಲೆ ಹೇರಿದ್ದ ಆಮದ ಸುಂಕಕ್ಕೆ 90 ದಿನಗಳ ಕಾಲ ಅಂದ್ರೆ ಮೂರು ತಿಂಗಳುಗಳ ಕಾಲ ವಿರಾಮ ಘೋಷಿಸಿದ್ದಾರೆ. ಟ್ರಂಪ್ ಏಕಾಏಕಿ ಈ ನಿರ್ಧಾರಕ್ಕೆ ಬರಲು ಕಾರಣವೇನು?
ಅಮೆರಿಕಾದ ವ್ಯಾಪಾರ ಒಪ್ಪಂದಗಳು ಅಸಮೋತಲನಕ್ಕೆ ಈಡಾಗುವ ಆತಂಕ ಟ್ರಂಪ್ ಸರ್ಕಾರಕ್ಕೆ ಕಾಡುತ್ತಿದೆ. ಸುಮಾರು 75 ದೇಶಗಳು ಟ್ರಂಪ್ ಸುಂಕದ ನೀತಿಯಲ್ಲಿ ಮಾತುಕತೆ ನಡೆಸಿವೆ ಆದರೆ ಸುಂಕದ ವಿರುದ್ಧ ಸೇಡಿನ ಮಾತನ್ನು ಆಡಿಲ್ಲ. ಕೆಲವು ದಿನಗಳ ಕಾಲ ಇದಕ್ಕೆ ವಿರಾಮ ಹೇರುವಂತೆ ಮಾತುಕತೆಗಳು ನಡೆದಿವೆ, ಇದೇ ಹಿನ್ನೆಲೆಯಲ್ಲಿ ಟ್ರಂಪ್​ ಸುಂಕ ಸಮರಕ್ಕೆ ಸುಮಾರು 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/US_DONALD_TRUMP_CHINA.jpg)
ಇನ್ನು ಚೀನಾ ವಿಷಯದಲ್ಲಿ ಟ್ರಂಪ್ ವ್ಯಾಪಾರ ಮನಸ್ಥಿತಿ ಹಾಗೆಯೇ ಉಳಿದಕೊಂಡಿದೆ. ತತಕ್ಷಣಕ್ಕೆ ಚೀನಾದ ಮೇಲೆ ಸುಮಾರು 125 ಪರ್ಸೆಂಟ್​ನಷ್ಟು ಆಮದು ಸುಂಕ ಹೇರಿದ್ದಾರೆ. ಈ ಹಿಂದೆ ಇದು ಶೇಕಡಾ 104ರಷ್ಟಿತ್ತು. ಚೀನಾ ಜಾಗತಿಕ ಮಾರುಕಟ್ಟೆಗೆ ವಿರಪರೀತ ಅಗೌರವ ತೊರುತ್ತಿದೆ ಎಂಬುದು ಟ್ರಂಪ್ ವಾದ. ಇದೇ ಕಾರಣದಿಂದ ಅಮೆರಿಕಾ, ಚೀನಾದ ಉತ್ಪನ್ನಗಳ ಅಮದುಗಳ ಮೇಲೆ ಶೇಕಡಾ 125 ರಷ್ಟು ಸುಂಕವನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಒಂದು ದಿನ ಇಲ್ಲವೇ ಮುಂದಿನ ಕೆಲವು ದಿನಗಳಲ್ಲಿ ಚೀನಾಗೆ ಅಮೆರಿಕಾ ಮತ್ತು ಇತರ ದೇಶಗಳನ್ನು ಕತ್ತರಿಸುವ ಅದರ ಬುದ್ಧಿ ಅರಿವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ನೆಕ್ಸ್ಟ್ ಲೇವೆಲ್ ತಲುಪಿದ ಚೀನಾ-ಅಮೆರಿಕ ಸುಂಕ ಯುದ್ಧ; ‘ಸೇಡು ಬಿಡದಿದ್ರೆ..’ ಟ್ರಂಪ್ ಮತ್ತೊಂದು ಎಚ್ಚರಿಕೆ..!
/newsfirstlive-kannada/media/post_attachments/wp-content/uploads/2025/04/Donald-trump-Tariff.jpg)
ಟ್ರಂಪ್ ಸುಂಕ ಸಮರಕ್ಕೆ ವಿರಾಮ ಘೋಷಿಸಿದ್ದೇಕೆ?
ಕೆಲವು ದಿನಗಳಿಂದ ರಿಪಬ್ಲಿಕನ್ ಪಾರ್ಟಿಯ ಕೆಲವು ಮುಖ್ಯ ನಾಯಕರು ಹಾಗೂ ಉದ್ಯಮಿಗಳು ಡೊನಾಲ್ಡ್​ ಟ್ರಂಪ್​​ಗೆ ಈ ಸುಂಕದ ಹೇರಿಕೆಯನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಈ ತೆರಿಗೆ ಸಮರ ಮುಂದುವರಿದರೆ ದೊಡ್ಡ ಮಟ್ಟದ ಜಾಗತಿಕ ವ್ಯಾಪಾರದ ಯುದ್ಧವೊಂದು ಶುರುವಾಗುವ ಭೀತಿಯನ್ನು ಅವರು ಟ್ರಂಪ್​ಗೆ ಮನವರಿಕೆ ಮಾಡಿದ್ದಾರೆ. ಅದು ಮಾತ್ರವಲ್ಲ ಜಾಗತಿಕ ಮಾರುಕಟ್ಟೆ ಭವಿಷ್ಯದಲ್ಲಿ ಕುಸಿದು ಬೀಳುವ ಆತಂಕವನ್ನು ವ್ಯಕ್ತಪಡಿಸಿದ್ದು ಇದರಿಂದ ಟ್ರಂಪ್ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರದಂದು ಟ್ರಂಪ್​ಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಅವರ ಮನವೊಲಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಇನ್ನು ಅಮೆರಿಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಯುಎಸ್​ನ ಖಜಾನೆ ಕಾರಯದರ್ಶಿ ಸ್ಕಾಟ್​ ಬೆಸ್ಸೆಂಟ್,​ ಇದರಿಂದ ಮುಂದಾಗುವ ಅನಾಹುತಗಳ ಬಗ್ಗೆ ಹೇಳಿದ್ದಾರೆ. ಹೀಗಾಗಿ ಟ್ರಂಪ್ ಸದ್ಯ ಸುಂಕದ ಸಮರಕ್ಕೆ 90 ದಿನಗಳ ಕಾಲ ವಿರಾಮ ಘೋಷಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/WALL-STREET-MARKET.jpg)
ಇನ್ನು ಟ್ರಂಪ್ ಈ ತಮ್ಮ ತೆರಿಗೆ ನೀತಿಗೆ 90 ದಿನಗಳ ಕಾಲ ವಿರಾಮ ನೀಡಿದ ಬೆನ್ನಲ್ಲಿಯೇ ಯುಎಸ್​ನ ಷೇರು ಮಾರುಕಟ್ಟೆಗೆ ಕೊಂಚ ಚೇತರಿಕೆ ಬಂದಿದೆ. ವಾಲ್​ ಸ್ಟ್ರೀಟ್ ಸ್ಟಾಕ್ ಮಾರ್ಕೆಟ್​ನಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಅಮೆರಿಕಾದ ಹೂಡಿಕೆದಾರರು ಕೊಂಚ ನಿರಾಳರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಷೇರು ಮಾರುಕಟ್ಟೆ ದೊಡ್ಡ ಮಟ್ಟದ ಹೊಡೆತ ಕಂಡಿತ್ತು. 1987ರ ಬ್ಲ್ಯಾಕ್ ಮಂಡೇ ಇತಿಹಾಸ ಮರುಕಳಿಸುವ ಭೀತಿ ಹುಟ್ಟಿಸಿತ್ತು. ದೇಶದಲ್ಲಿ ನಿರೋದ್ಯಗದ ಪ್ರಮಾಣ, ಹಣದುಬ್ಬರ ಗಗನಕ್ಕೆ ಮುಟ್ಟಲಿರುವ ಆತಂಕ ವಿಶ್ವದ ಎಲ್ಲಾ ಆರ್ಥಿಕ ತಜ್ಞರಲ್ಲಿ ಮೂಡಿತ್ತು. ಸದ್ಯ ಟ್ರಂಪ್​ 90 ದಿನಗಳ ಕಾಲ ಚೀನಾ ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ ಸಮಾಧಾನಕರ ಬಹುಮಾನವೆನ್ನುವಂತೆ ತೆರಿಗೆ ಯುದ್ಧಕ್ಕೆ ವಿರಾಮ ಹೇಳಿದ್ದಾರೆ.
ಇದು ಭಾರತಕ್ಕೂ ಕೂಡ ಕೊಂಚ ನಿರಾಳ ತಂದಿಟ್ಟಿದೆ. ಈಗಾಗಲೇ ನವದೆಹಲಿ ಮತ್ತು ವಾಷಿಂಗ್ಟನ್​ ನಡುವೆ ತೆರಿಗೆ ವಿಚಾರವಾಗಿ ದೊಡ್ಡ ಮಟ್ಟದ ಮಾತುಕತೆಗಳು ನಡೆದಿದ್ದವು. ಅದನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಲು ಭಾರತಕ್ಕೆ ಅವಕಾಶ ಸಿಕ್ಕಾಂತಾಗಿದೆ ಎಂದು, ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ವಕ್ತಾರ ರನ್ದೀರ್ ಜೈಸ್ವಾಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us