/newsfirstlive-kannada/media/post_attachments/wp-content/uploads/2025/04/BAT-CHECK.jpg)
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಐಪಿಎಲ್ ನಿಯಮಗಳಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಕಳೆದ ಭಾನುವಾರದಿಂದ ಅಂಪೈರ್ಗಳು ಬ್ಯಾಟರ್ಗಳ ಬ್ಯಾಟಿನ ಸೈಜ್ ಬಗ್ಗೆ ದಿಢೀರ್ ತಪಾಸಣೆ ಮಾಡ್ತಿದ್ದಾರೆ.
ಅಂತೆಯೇ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾರ ಬ್ಯಾಟ್ ಚೆಕ್ ಮಾಡುತ್ತಿರೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನೆಯ ಪಂದ್ಯದಲ್ಲೂ ಬ್ಯಾಟರ್ ಕ್ರೀಸ್ಗೆ ಬರುವ ಮುನ್ನ ಚೆಕ್ ಮಾಡಲಾಗಿದೆ.
ಅಂಪೈರ್ ಯಾಕೆ ಹಾಗೆ ಮಾಡ್ತಿದ್ದಾರೆ?
ವಾಸ್ತವವಾಗಿ ಬಿಸಿಸಿಐ ಮುಂದೆ ಕ್ರಿಕೆಟ್ನ ಗುಣಮುಟ್ಟದ ಪ್ರಶ್ನೆ ಇದೆ. ಮೈದಾನದಲ್ಲಿ ಅಬ್ಬರಿಸುವ ಫೋರು, ಸಿಕ್ಸರ್ಗಳು ಕ್ರಿಕೆಟ್ನ ಗುಣಮಟ್ಟವನ್ನು ಪ್ರಶ್ನೆ ಮಾಡಿವೆ. ಅದಕ್ಕಾಗಿ ಬಿಸಿಸಿಐ ಐಪಿಎಲ್ನಲ್ಲಿ ಬ್ಯಾಟ್ ತಪಾಸಣೆ ಮಾಡಲು ಬಯಸಿದೆ. ಆಟಗಾರರು ಬಳಸುವ ಬ್ಯಾಟ್ ಕ್ರಿಕೆಟ್ ಗುಣಮಟ್ಟಕ್ಕೆ ಅನುಗುಣವಾಗಿದೆಯೇ? ಇಲ್ಲವೇ ಅಂತಾ ಖಚಿತಪಡಿಸಿಕೊಳ್ಳಲು ಅಂಪೈರ್ ಚೆಕ್ ಮಾಡ್ತಿದ್ದಾರೆ.
ಇದನ್ನೂ ಓದಿ: ಸೂಪರ್ ಓವರ್ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!
ಅಂಪೈರ್ಗಳು ಒಂದು ಸಾಧನದ ಮೂಲಕ ಬ್ಯಾಟ್‌ನ ಗುಣಮಟ್ಟವನ್ನು ಪರೀಕ್ಷೆ ಮಾಡ್ತಿದ್ದಾರೆ. ಆಟಗಾರರು ಬಳಸುವ ಬ್ಯಾಟ್ಗಳು ಐಪಿಎಲ್ ನಿಯಮಗಳಿಗೆ ಅನುಗುಣವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಚೆಕ್ ಮಾಡಲಾಗ್ತಿದೆ. ಐಪಿಎಲ್‌ನ ನಿಯಮ 5.7ರ ಪ್ರಕಾರ ಬ್ಯಾಟ್ ಪರಿಶೀಲಿಸಲಾಗುತ್ತಿದೆ. ಈ ನಿಯಮವು ಬ್ಯಾಟ್‌ನ ಗಾತ್ರದ ಬಗ್ಗೆ ಹೇಳುತ್ತದೆ..
ಹೇಗಿರಬೇಕು..?
ಕ್ರಿಕೆಟ್‌ನಲ್ಲಿ ಬ್ಯಾಟ್ ಎರಡು ಭಾಗಗಳನ್ನು ಹೊಂದಿರುತ್ತದೆ, ಮೊದಲನೆಯದು ಹ್ಯಾಂಡಲ್ ಮತ್ತು ಎರಡನೆಯದು ಬ್ಲೇಡ್. ಹ್ಯಾಂಡಲ್ ಮತ್ತು ಬ್ಯಾಟ್ ಎರಡೂ ಮರದಿಂದ ಮಾಡಲ್ಪಟ್ಟಿದ್ದು, ಉತ್ತಮ ಹಿಡಿತಕ್ಕಾಗಿ ಹ್ಯಾಂಡಲ್ಗೆ ರಬ್ಬರ್ ಹಾಕಿರಲಾಗುತ್ತದೆ. ಹ್ಯಾಂಡಲ್ ಹೊರತುಪಡಿಸಿ ಒಟ್ಟು ಉದ್ದ 38 ಇಂಚುಗಳು ಅಥವಾ 96.52 ಸೆಂಟಿಮೀಟರ್ ಮೀರಬಾರದು. ಬ್ಲೇಡ್‌ನ ಅಗಲ ಗರಿಷ್ಠ 4.25 ಇಂಚುಗಳಾಗಿರಬಹುದು. ಬ್ಯಾಟ್‌ನ ಆಳ 2.64 ಇಂಚು ಮೀರಬಾರದು ಮತ್ತು ಅಂಚುಗಳು 1.56 ಇಂಚು ಮೀರಬಾರದು. ಹಾಗಿದ್ದೂ ಬ್ಯಾಟರ್ಗಳು ನಿಯಮ ಉಲ್ಲಂಘಿಸಿ, ಬ್ಯಾಟಿಂಗ್ಗೆ ಬಂದರೆ ಬ್ಯಾಟ್ಸ್‌ಮನ್‌ಗೆ ದಂಡ ವಿಧಿಸಲು ಯಾವುದೇ ಅವಕಾಶವಿಲ್ಲ.
ಇದನ್ನೂ ಓದಿ: ಕೋಚ್ಗಳ ಮೇಲೆ ಸಿಟ್ಟು ತೀರಿಸಿಕೊಂಡ BCCI.. ಟಿ ದಿಲೀಪ್ ಸೇರಿ ಹಲವರಿಗೆ ಗೇಟ್ಪಾಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್