/newsfirstlive-kannada/media/post_attachments/wp-content/uploads/2024/12/Kohli-Fight.jpg)
ಬ್ರಿಸ್ಪೇನ್ನಲ್ಲಿ ನಡೆದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಈ ಬೆನ್ನಲ್ಲೇ 4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದಕ್ಕಾಗಿ ಟೀಮ್ ಇಂಡಿಯಾ ಮೆಲ್ಬೋರ್ನ್ ತಲುಪಿದೆ. ಇದಕ್ಕೂ ಮೊದಲೇ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ವಿರುದ್ಧ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡಿದ್ದಾರೆ.
ಕೊಹ್ಲಿ ಕೋಪಕ್ಕೆ ಕಾರಣವೇನು?
ಇನ್ನು, ಕೊಹ್ಲಿ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಮಹಿಳಾ ಪತ್ರಕರ್ತೆಯೊಂದಿಗೆ ತೀವ್ರ ವಾಗ್ವಾದಕ್ಕೆ ಇಳಿದಿದ್ದರು. ವಿಮಾನ ನಿಲ್ದಾಣದಿಂದ ಹೊರುವಾಗ ಕೊಹ್ಲಿ ಮತ್ತವರ ಕುಟುಂಬಸ್ಥರನ್ನು ನೋಡಿ ವಿಡಿಯೋ ಮಾಡಿದ್ರು. ಈ ಸಂದರ್ಭದಲ್ಲಿ ಕೋಪಗೊಂಡ ಕೊಹ್ಲಿ ಮಹಿಳಾ ಪತ್ರಕರ್ತೆ ಜತೆಗೆ ಜಗಳ ಮಾಡಿದ್ದಾರೆ.
ಏನಂದ್ರು ಕೊಹ್ಲಿ?
ನನ್ನನ್ನು ಕೇಳದೆ ನೀವು ನನ್ನ ಮಕ್ಕಳ ಫೋಟೋಗಳು ತೆಗೆಯಬಾರದು. ನನ್ನ ಮತ್ತು ಮಕ್ಕಳ ಫೋಟೋ ವಿಡಿಯೋ ಹೇಗೆ ಸೆರೆಹಿಡಿದ್ರಿ. ನಮಗೆ ಪ್ರೈವಸಿ ಬೇಕು ಎಂದು ಕೆಂಡಕಾರಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿ ಉಭಯ ತಂಡಗಳಿವೆ.
ಇದನ್ನೂ ಓದಿ:ಮಗನ ನಿವೃತ್ತಿ ಬಗ್ಗೆ ಮೌನಮುರಿದ R ಅಶ್ವಿನ್ ತಂದೆ; ರೋಹಿತ್, ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ