/newsfirstlive-kannada/media/post_attachments/wp-content/uploads/2025/02/Virat-Kohli-On-Rcbcaptain-1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನೇನು ಮೂರು ವಾರ ಮಾತ್ರ ಬಾಕಿ ಇದೆ. ಇದೇ ತಿಂಗಳು ಮಾರ್ಚ್ 22 ರಿಂದ ಅದ್ಧೂರಿಯಾಗಿ ಐಪಿಎಲ್ ಶುರುವಾಗಲಿದೆ. ಎಲ್ಲ ಫ್ರಾಂಚೈಸಿಗಳು ಭರ್ಜರಿ ತಯಾರಿಯಲ್ಲಿವೆ. ಈ ಬಾರಿ ಉದ್ಘಾಟನೆ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ.
ರಜತ್ ಪಾಟೀದಾರ್ಗೆ ಕೊಹ್ಲಿ ಬೆಂಬಲ
ಕ್ಯಾಪ್ಟನ್ಸಿ ರೇಸ್ನಲ್ಲಿ ರಜತ್ ಪಾಟಿದಾರ್ ಹೆಸರು ಮುಂಚೂಣಿಯಲ್ಲಿತ್ತು. ರಜತ್ ಹೆಸರು ಬರುತ್ತಿದ್ದಂತೆ ವಿರಾಟ್ ಕೊಹ್ಲಿಯ ಆಪ್ತ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. 2021ರಿಂದ ಆರ್ಸಿಬಿಯಲ್ಲಿರುವ ರಜತ್, ಕೊಹ್ಲಿ ಆಪ್ತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಂತೆಯೇ ರಜತ್ ಕ್ಯಾಪ್ಟನ್ ಆಗಿರೋದರ ಹಿಂದೆ ಕೊಹ್ಲಿ ಬೆಂಬಲ ಇದ್ದೇ ಇದೆ.
ಕೊಹ್ಲಿಗೆ ಕ್ಯಾಪ್ಟನ್ಸಿ ಬೇಡ ಎಂದಿದ್ದೇಕೆ?
ಕೊಹ್ಲಿ ಜೊತೆ ಆರ್‌ಸಿಬಿ ಸಭೆ ನಡೆಸಿತ್ತು. ಕೊಹ್ಲಿಗೆ ನೀವು ನಾಯಕತ್ವ ವಹಿಸಿಕೊಳ್ಳಿ ಎಂದು ಫ್ರಾಂಚೈಸಿ ಮನವಿ ಮಾಡಿತ್ತು. ಆದರೆ ಅದನ್ನು ವಿರಾಟ್ ವಿನಯದಿಂದ ನಿರಾಕರಿಸಿದರು. ನಂತರ ಪಾಟಿದಾರ್ ಹೆಸರು ಬಂದಿದೆ. ಇದಕ್ಕೆ ಎಲ್ಲರೂ ಒಪ್ಪಿದರು. ಕೊಹ್ಲಿ ಒಪ್ಪಿಗೆ ನೀಡಿದ ನಂತರ ರಜತ್ ಪಾಟಿದಾರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಬ್ಯಾಟಿಂಗ್ ಮೇಲೆ ಫೋಕಸ್ ಮಾಡಲು ಕೊಹ್ಲಿ ಕ್ಯಾಪ್ಟನ್ಸಿ ಬೇಡ ಎಂದರು.
2011ರಿಂದ 2021ರವರೆಗೆ ಸುದೀರ್ಘ 10 ವರ್ಷಗಳ ಕಾಲ ಆರ್‌ಸಿಬಿ ತಂಡವನ್ನ ನಾಯಕನಾಗಿ ವಿರಾಟ್ ಮುನ್ನಡೆಸಿದ್ದಾರೆ. ನಾಯಕತ್ವ ನಿರ್ವಹಿಸಿರೋದ್ರಿಂದ ಮತ್ತೆ ನಾಯಕನಾಗಲು ನೋ ಎಂದಿರೋ ಕೊಹ್ಲಿ, ಹೊಸಬರಿಗೆ ಅವಕಾಶ ನೀಡಲು ಸಲಹೆ ನೀಡಿದ್ದಾರೆ. ವಿರಾಟ್ ಹೆಚ್ಚಂದ್ರೆ ಮುಂದಿನ 4-5 ಸೀಸನ್ ಆಡಬಹುದು. ಹೀಗಾಗಿ ಹೊಸ ಲೀಡರ್ನ ಗ್ರೂಮ್ ಮಾಡೋ ಕನಸು ಕಾಣ್ತಿದ್ದಾರೆ.
ಇದನ್ನೂ ಓದಿ: Jio, Airtel, Vi; ನಿಮ್ಮ ಸಿಮ್ ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಇಷ್ಟು ಮಿನಿಮಮ್ ರೀಚಾರ್ಜ್ ಮಾಡಲೇಬೇಕು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ