/newsfirstlive-kannada/media/post_attachments/wp-content/uploads/2024/11/VIRAT_KOHLI-1.jpg)
ಕೊಹ್ಲಿ ಮತ್ತೆ ಆರ್ಸಿಬಿಯ ಸಿಂಹಾಸನ ಏರ್ತಾರೆ ಅಂದುಕೊಂಡಿದ್ದ ಫ್ಯಾನ್ಸ್ಗೆ ಐಪಿಎಲ್ಗೂ ಮುನ್ನವೇ ನಿರಾಸೆಯಾಗಿದೆ. ಕೊಹ್ಲಿ ಕ್ಯಾಪ್ಟೆನ್ಸಿ ಆಫರ್ನ ರಿಜೆಕ್ಟ್ ಮಾಡಿದ್ದೂ ಆಯ್ತು. ರಜತ್ ಪಾಟಿದಾರ್ಗೆ ಪಟ್ಟ ಕಟ್ಟಿದ್ದೂ ಆಯ್ತು. ಆರ್ಸಿಬಿಯ ನಾಯಕತ್ವದ ಆಫರ್ನ ಕೊಹ್ಲಿ ರಿಜೆಕ್ಟ್ ಮಾಡಿದ್ಯಾಕೆ? ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಇನ್ನೂ ಅಭಿಮಾನಿಗಳನ್ನ ಕಾಡ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿಯಾಗಿ ಸಜ್ಜಾಗಿದೆ. ಯುವ ಕ್ರಿಕೆಟಿಗ ರಜತ್ ಪಾಟಿದಾರ್ಗೆ ಪಟ್ಟಾಭಿಷೇಕ ಮಾಡಿರೋ ಆರ್ಸಿಬಿ ಕ್ಯಾಂಪ್ನಲ್ಲೀಗ ಹೊಸ ಅಧ್ಯಾಯ ಶುರುವಾಗಿದೆ. ಹೊಸ ಸೀಸನ್ನಲ್ಲಿ, ಹೊಸ ಕ್ಯಾಪ್ಟನ್, ಹೊಸ ಛಲ, ಹೊಸ ಹುರುಪಿನೊಂದಿಗೆ ಸುದೀರ್ಘ 17 ಸೀಸನ್ಗಳ ಹಳೆ ಕನಸಾದ ಕಪ್ ಗೆಲುವನ್ನ ಟಾರ್ಗೆಟ್ ಮಾಡಿದೆ.
ಇದನ್ನೂ ಓದಿ: ‘ಈ ತರಹದ ಮದುವೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?
RCB ಕ್ಯಾಪ್ಟನ್ಸಿ ಆಫರ್ ರಿಜೆಕ್ಟ್ ಮಾಡಿದ ಕೊಹ್ಲಿ
ಐಪಿಎಲ್ ಮೆಗಾ ಆಕ್ಷನ್ ಅಂತ್ಯದ ಬಳಿಕ ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿ ಕ್ಯಾಪ್ಟನ್ ಆಗ್ತಾರೆ ಅನ್ನೋ ಸುದ್ದಿ ಸಖತ್ ಸದ್ದು ಮಾಡಿತ್ತು. ಕೊಹ್ಲಿಗೆ ಪಟ್ಟಕಟ್ಟಲು ಫ್ರಾಂಚೈಸಿ ಮುಂದಾಗಿರೋದನ್ನ ಮ್ಯಾನೇಜ್ಮೆಂಟ್ನ ಮೂಲಗಳೂ ಕೂಡ ಕನ್ಫರ್ಮ್ ಮಾಡಿದ್ವು. ಹೀಗಾಗಿ ಕಿಂಗ್ ಕೊಹ್ಲಿ ಮತ್ತೊಮ್ಮೆ ನಾಯಕತ್ವದ ಸಿಂಹಾಸನವೇರೋದು ಕನ್ಫರ್ಮ ಅನ್ನೋದು ಆರ್ಸಿಬಿ ಫ್ಯಾನ್ಸ್ ಮನದಾಳವಾಗಿತ್ತು. ಫ್ರಾಂಚೈಸಿ ಮನವೊಲಿಕೆಗೆ ಒಪ್ಪದ ಕೊಹ್ಲಿ, ಹೊಸ ಆಟಗಾರನಿಗೆ ನಾಯಕತ್ವ ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ನಾಯಕತ್ವ ರಿಜೆಕ್ಟ್ ಮಾಡ್ತಿರೋದಕ್ಕೆ ಕಾರಣ ನೀಡಿದ್ದಾರೆ.
ಫಾರ್ಮ್ ಸಮಸ್ಯೆ..!
ಕಳೆದ ಒಂದು ವರ್ಷದಿಂದ ಕೊಹ್ಲಿ ಫಾರ್ಮ್ ಸಮಸ್ಯೆಯಿಂದ ಬಳಲ್ತಿದ್ದಾರೆ. ಇನ್ಕನ್ಸಿಸ್ಟೆನ್ಸಿ ಕೊಹ್ಲಿಯನ್ನ ಬಿಡದೇ ಕಾಡ್ತಿದೆ. ಟೀಮ್ ಇಂಡಿಯಾದಲ್ಲೂ ಸ್ಥಾನ ಅಲುಗಾಡ್ತಿದೆ. ಹೀಗಾಗಿ ಈಗ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚು ಫೋಕಸ್ ಮಾಡಬೇಕಿದೆ. ರನ್ಗಳಿಸಿ ಟೀಕೆಗಳಿಗೆ ಉತ್ತರಿಸಬೇಕಿದೆ. ಈ ಒತ್ತಡದ ನಡುವೆ ನಾಯಕತ್ವದ ಜವಾಬ್ದಾರಿ ನಿಭಾಯಿಸೋದು ಸವಾಲಿನ ಕೆಲಸ. ಕೊಹ್ಲಿ ನಾಯಕತ್ವದ ಆಫರ್ನ ತಿರಸ್ಕರಿಸಿದ್ರ ಹಿಂದಿರೋ ಮೇನ್ ರೀಸನ್ ಇದೇ.
ಇದನ್ನೂ ಓದಿ: ಡಾಲಿ ಮದುವೆಯಲ್ಲಿ ಗಣ್ಯರು, ಫ್ಯಾನ್ಸ್‌ಗೂ ಒಂದೇ ಭೋಜನದ ವ್ಯವಸ್ಥೆ; ಊಟದ ಮೆನು ಇಲ್ಲಿದೆ!
11 ವರ್ಷ ಸುದೀರ್ಘ ಸಾರಥ್ಯ..
ಆರ್ಸಿಬಿ ತಂಡದ ನಾಯಕನಾಗಿ ಕೊಹ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 2011ರಿಂದ 2021ರವರೆಗೆ ಸುದೀರ್ಘ 10 ವರ್ಷಗಳ ಕಾಲ ಆರ್ಸಿಬಿ ತಂಡವನ್ನ ಮುನ್ನಡೆಸಿದ್ರು. ಇದೇ ಸಮಯದಲ್ಲಿ ಟೀಮ್ ಇಂಡಿಯಾಗೂ ನಾಯಕನಾಗಿದ್ರು. ಸುದೀರ್ಘ ಕಾಲ ನಾಯಕತ್ವ ನಿರ್ವಹಿಸಿರೋದ್ರಿಂದ ಮತ್ತೆ ನಾಯಕನಾಗಲು ನೋ ಎಂದಿರೋ ಕೊಹ್ಲಿ, ಹೊಸಬರಿಗೆ ಅವಕಾಶ ನೀಡಲು ಸಲಹೆ ನೀಡಿದ್ದಾರೆ.
ಹೊಸ ಲೀಡರ್ಗೆ ಮತ್ತೊಬ್ಬ ಲೀಡರ್ ಬೆಳೆಸೋ ಕನಸು
ವಿರಾಟ್ ಕೊಹ್ಲಿಗೀಗ 36 ವರ್ಷ.. ಹೆಚ್ಚಂದ್ರೆ ಮುಂದಿನ 4-5 ಸೀಸನ್ ಆಡಬಹುದು. ಹೀಗಾಗಿ ಹೊಸ ಲೀಡರ್ನ ಗ್ರೂಮ್ ಮಾಡೋ ಕನಸು ಕಾಣ್ತಿದ್ದಾರೆ. ಐಪಿಎಲ್ ಆರಂಭದಿಂದ ಈವರೆಗೂ ಆರ್ಸಿಬಿ ಭಾಗವಾಗಿರೋ ಕೊಹ್ಲಿ, ತಾನು ತಂಡದಲ್ಲಿದ್ದಾಗಲೇ ಮತ್ತೊಬ್ಬ ಲೀಡರ್ನ ಬೆಳೆಸುವ ಲೆಕ್ಕಾಚಾರದಲ್ಲಿದ್ದಾರೆ. ಈಗ ಸಾರಥ್ಯವನ್ನ ವಹಿಸಿಕೊಂಡಿರೋ ರಜತ್ ಪಾಟಿದಾರ್ ಹೆಸರನ್ನು ನಾಯಕತ್ವಕ್ಕೆ ಸೂಚಿಸಿದ್ದೆ ಕೊಹ್ಲಿ!
ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ ವಿರುದ್ಧ ಕೇಸ್ ದಾಖಲಿಸಿದ್ದೇನೆ ಎಂದ ಪ್ರಕಾಶ್ ರಾಜ್; ಇಬ್ಬರ ಮಧ್ಯೆ ಏನಾಯ್ತು..?
ಯುವಕರಿಗೆ ಆದ್ಯತೆ
ಟಿ20 ಅನ್ನೋದು ಸದ್ಯಕ್ಕಂತೂ ಯಂಗ್ಸ್ಟರ್ಸ್ ಗೇಮ್ ಆಗಿ ಗುರುತಿಸಿಕೊಂಡಿದೆ. ಹೀಗಾಗಿ ಯಂಗ್ಸ್ಟರ್ಸ್ಗೆ ಹೆಚ್ಚಿನ ಅವಕಾಶ ನೀಡಬೇಕಿದೆ. ಕೊಹ್ಲಿ ಈಗ ಟಿ20 ಇಂಟರ್ನ್ಯಾಷನಲ್ಸ್ಗೆ ರಿಟೈರ್ಮೆಂಟ್ ಘೋಷಿಸಿದ್ದಾರೆ. ಕೊಹ್ಲಿಯ ಟಿ20 ಆಟ ಏನಿದ್ರೂ ಆರ್ಸಿಬಿಗೆ ಮಾತ್ರ ಸೀಮಿತವಾಗಿದೆ. ಸಾರಥ್ಯವಹಿಸಿಕೊಂಡು ಕಪ್ ಗೆಲ್ಲಿಸಿದ್ರೂ, ಟೀಮ್ ಇಂಡಿಯಾ ಪರ ಆಡೋಕೆ ಸಾಧ್ಯವಿಲ್ಲ. ಅದೇ ಒಬ್ಬ ಯಂಗ್ಸ್ಟರ್ ಆರ್ಸಿಬಿ ಪರ ಶೈನ್ ಆಗಿ ಕಪ್ ಗೆಲ್ಲಿಸಿದ್ರೆ, ಅದೃಷ್ಟವಿದ್ರೆ ಆತನಿಗೆ ಟೀಮ್ ಇಂಡಿಯಾ ಡೋರ್ ತೆಗೆಯಲಿದೆ. ಹೀಗಾಗಿ ಯಂಗ್ಸ್ಟರ್ಸ್ಗೆ ಹೆಚ್ಚಿನ ಆದ್ಯತೆ ನೀಡೋದು ಕೊಹ್ಲಿ ನಿರ್ಧಾರದ ಹಿಂದಿನ ಉದ್ದೇಶಗಳಲ್ಲಿ ಒಂದಾಗಿದೆ.
ವಿವಾದದಿಂದ ದೂರ ಇರಲು ಪ್ರಯತ್ನ
ನಾಯಕತ್ವ ಅಂದ್ರೆ ಅಧಿಕಾರ ಮಾತ್ರ ಸಿಗಲ್ಲ. ಆಗಾಗ ವಿವಾದಗಳಿಗೂ ಆಹಾರವಾಗಬೇಕಾಗುತ್ತದೆ. ವಿವಾದಗಳು, ಟೀಕೆಗಳು ಮೆಂಟಲಿ ಡಿಸ್ಟರ್ಬ್ ಮಾಡಲಿವೆ. ಅದ್ರಲ್ಲೂ ಆರ್ಸಿಬಿ ನಾಯಕತ್ವ ಫ್ರೆಶರ್ ಸ್ವಲ್ಪ ಹೆಚ್ಚೇ ಇರುತ್ತೆ. ಇದೆಲ್ಲದರಿಂದ ದೂರ ಇರಲು ವಿರಾಟ್ ಕೊಹ್ಲಿ ಸರ್ವ ಪ್ರಯತ್ನ ಮಾಡ್ತಿದ್ದಾರೆ. ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಕೊಹ್ಲಿ ನಾಯಕತ್ವವನ್ನ ರಿಜೆಕ್ಟ್ ಮಾಡಿದ್ದಾರೆ. ಇದೇ ವೇಳೆ ನಿನ್ನೆ ಬೆನ್ನ ಹಿಂದೆ ನಾನಿದ್ದೇನೆ ಎಂದು ಬಹಿರಂಗವಾಗಿ ಹೇಳಿ ನೂತನ ನಾಯಕ ರಜತ್ ಬೆಂಬಲಕ್ಕೆ ನಿಂತಿದ್ದಾರೆ. ಆನ್ಫೀಲ್ಡ್ನಲ್ಲಿ ಪಾಟಿದಾರ್ಗೆ ಅಗತ್ಯ ಮಾರ್ಗದರ್ಶನ ನೀಡೋ ವಾಗ್ದಾನ ಮಾಡಿದ್ದಾರೆ. ಕೊಹ್ಲಿಯ ಈ ಗುಣವೇ ಅಭಿಮಾನಿಗಳಿಗೆ ಇಷ್ಟವಾಗೋದು.
ಇದನ್ನೂ ಓದಿ: RCB ಫ್ಯಾನ್ಸ್ ಕುತೂಹಲಕ್ಕೆ ಒಂದೇ ಉತ್ತರ.. Heartbroken ಎಂದ ಶ್ರೇಯಾಂಕ ಪಾಟೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ