newsfirstkannada.com

2011ರ ಏಕದಿನ ವಿಶ್ವಕಪ್​ನಲ್ಲಿ​ ರೋಹಿತ್​ ಶರ್ಮಾಗೆ ಚಾನ್ಸ್​ ನೀಡಿಲ್ಲ ಯಾಕೆ? ಕಾರಣ ಹೀಗಿದೆ..

Share :

Published August 23, 2023 at 1:02pm

    2011ರ ಏಕದಿನ ವಿಶ್ವಕಪ್​ನಲ್ಲಿ​ ಟ್ರೋಫಿ ಜಯಸಿದ್ದ ಟೀಮ್ ಇಂಡಿಯಾ

    ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ

    ಸೆಲೆಕ್ಷನ್ ಮೀಟಿಂಗ್​ನಲ್ಲಿ ರೋಹಿತ್​ ಶರ್ಮಾ ಬಗ್ಗೆ ನಿರ್ಧಾರ ಏನಾಗಿತ್ತು?

2011ರ ಏಕದಿನ ವಿಶ್ವಕಪ್​ನಲ್ಲಿ​ ಟ್ರೋಫಿ ಜಯಸಿದ ಟೀಮ್​ ಇಂಡಿಯಾ, 28 ವರ್ಷಗಳ ಕೊರಗಿಗೆ ಬ್ರೇಕ್​ ಹಾಕಿತ್ತು. ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ. ಇದೀಗ ತವರಿನಲ್ಲಿ ಮತ್ತೊಮ್ಮೆ ಏಕದಿನ ವಿಶ್ವಕಪ್​ ಕಿರೀಟ ಗೆಲ್ಲಲು ಟೀಮ್​ ಇಂಡಿಯಾ ಸಜ್ಜಾಗಿದೆ. ಆದ್ರೂ, ಆ ಸಂದರ್ಭದಲ್ಲಿ ಎದುರಾಗಿದ್ದ ಒಂದು ಪ್ರಶ್ನೆಗೆ ಇಂದಿಗೂ ಬಹುತೇಕ ಅಭಿಮಾನಿಗಳಿಗೆ ಉತ್ತರ ಸಿಕ್ಕಿಲ್ಲ.

2011ರ ಏಕದಿನ ವಿಶ್ವಕಪ್​ಗೆ ಟೀಮ್​ ಅನೌನ್ಸ್​ ಆದಾಗ ಎಲ್ಲರಿಗೂ ಶಾಕ್​ ಕಾದಿತ್ತು. ತಂಡದಿಂದ ರೋಹಿತ್​ ಶರ್ಮಾಗೆ ಕೊಕ್​ ಕೊಡಲಾಗಿತ್ತು. ಇದಾದ ಬಳಿಕ ಬಹಿರಂಗವಾಗಿ ರೋಹಿತ್​ ಅಸಮಾಧಾನ ಹೊರ ಹಾಕಿದ್ರೆ, ಫ್ಯಾನ್ಸ್​ ಅಚ್ಚರಿಗೊಂಡಿದ್ರು. ಇದೀಗ ಅಂದಿನ ಸೆಲೆಕ್ಷನ್​ ಕಮಿಟಿ ಸದಸ್ಯ ರಾಜಾ ವೆಂಕಟರಾಮನ್​​, ಆಯ್ಕೆ ಹಿಂದಿನ ಕಾರಣವನ್ನ ರಿವೀಲ್​ ಮಾಡಿದ್ದಾರೆ.

2011ರ ವಿಶ್ವಕಪ್​ ಸೆಲೆಕ್ಷನ್​ ಮೀಟಿಂಗ್​ನಲ್ಲಿ ಟೀಮ್​ ಇಂಡಿಯಾದ 15ನೇ ಆಟಗಾರನಾಗಿ ರೋಹಿತ್​ ​​ಶರ್ಮಾ ಆಯ್ಕೆಗೆ ಸೆಲೆಕ್ಷನ್​ ಪ್ಯಾನಲ್ ಮುಂದಾಗಿತ್ತಂತೆ. ಕೋಚ್​ ಗ್ಯಾರಿ ಕರ್ಸ್ಟನ್​ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ರಂತೆ. ಆದ್ರೆ, ಅಂದಿನ ಕ್ಯಾಪ್ಟನ್​ ಎಮ್​.ಎಸ್​ ಧೋನಿ, ರೋಹಿತ್​ ಶರ್ಮಾ ಬದಲಿಗೆ ಫಿಯೂಷ್​ ಚಾವ್ಲಾ ಬೇಕೆಂದು ಹೇಳಿದ್ರಂತೆ. ಆ ಬಳಿಕ ಕೋಚ್​ ಕರ್ಸ್ಟನ್​ ಕೂಡ U ಟರ್ನ್​ ಹೊಡೆದ್ರಂತೆ. ಕೋಚ್​ ಮತ್ತು ಕ್ಯಾಪ್ಟನ್​ ಬೇಡಿಕೆಗೆ ಕಟ್ಟಿ ಬಿದ್ದ ಸೆಲೆಕ್ಷನ್​ ಕಮಿಟಿ ರೋಹಿತ್​ ಶರ್ಮಾರನ್ನ ಬಿಟ್ಟು ಪಿಯೂಶ್​ ಚಾವ್ಲಾಗೆ ಮಣೆ ಹಾಕ್ತಂತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2011ರ ಏಕದಿನ ವಿಶ್ವಕಪ್​ನಲ್ಲಿ​ ರೋಹಿತ್​ ಶರ್ಮಾಗೆ ಚಾನ್ಸ್​ ನೀಡಿಲ್ಲ ಯಾಕೆ? ಕಾರಣ ಹೀಗಿದೆ..

https://newsfirstlive.com/wp-content/uploads/2023/08/Rohit-sharma-1.jpg

Load More