newsfirstkannada.com

BBK10: ಒಂದು ವಾರದ ಹಿಂದೆ ಸಂಗೀತಾಗೆ ಗೆಲ್ಲೋ ಚಾನ್ಸ್‌? ಕಾರ್ತಿಕ್‌ ಗೆದ್ದ ಕಾರಣ ಏನು?

Share :

Published February 1, 2024 at 4:04pm

  ವಿನಯ್, ಸಂಗೀತಾ ಜಗಳ ಕಾರ್ತಿಕ್ ಗೆಲುವಿಗೆ ಕಾರಣವಾಯ್ತಾ?

  ಬಿಗ್​ಬಾಸ್​ ಸೀಸನ್ 10ರ ವಿನ್ನರ್​ ಆದ್ರೂ ಕಾರ್ತಿಕ್​ ಮಹೇಶ್​

  ಟಾಸ್ಕ್​ಗಳಲ್ಲಿ ಅಗ್ರೇಶನ್​ ಆಗಿದ್ದ ಸಂಗೀತಾ ವಿನ್​ ಆಗಲಿಲ್ಲ ಯಾಕೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಅದ್ಧೂರಿಯಾಗಿ ಅಂತ್ಯ ಕಂಡಿದೆ. ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಆಗಿ ಕಾರ್ತಿಕ್​ ಮಹೇಶ್​ ಹೊರ ಹೊಮ್ಮಿದ್ದಾರೆ. ಡ್ರೋನ್​​ ಪ್ರತಾಪ್ ರನ್ನರ್​​ ಅಪ್​ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬಂದ ಫೈನಲಿಸ್ಟ್​ಗಳು ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ ವಿನ್ನರ್​ ಪಟ್ಟವನ್ನು ತಮ್ಮದಾಗಿಸಿಕೊಂಡ ಕಾರ್ತಿಕ್​ ಅವರಿಗೆ ಅತೀ ಹೆಚ್ಚು ಪ್ರಶಂಸೆ ದೊರೆಯುತ್ತಿದೆ.

112 ದಿನಗಳ ಕಾಲ ಬಿಗ್​ಬಾಸ್​ ಟ್ರೋಫಿ ತಮ್ಮದಾಗಿಸಿಕೊಳ್ಳುವುದಕ್ಕೆ ಎಲ್ಲಾ ಕಂಟೆಸ್ಟೆಂಟ್​ಗಳು ಸಾಕಷ್ಟು ಹರಸಾಹಸ ಪಟ್ಟಿದ್ದರು. ಆದರೆ ಬಿಗ್​ಬಾಸ್​ ಟ್ರೋಫಿ ಗೆಲ್ಲಲು ಕೇವಲ ಟಾಸ್ಕ್​​ ಒಂದೇ ಮುಖ್ಯವಲ್ಲ. ಬದಲಿಗೆ ಮನರಂಜನೆ, ಎಲ್ಲರ ಜತೆ ಒಡನಾಟ ಎಲ್ಲವೂ ಮುಖ್ಯವಾಗುತ್ತದೆ. ಹೀಗೆ ಕಾರ್ತಿಕ್​​ ವಿನ್​ ಆಗಿದ್ದು ಕೂಡ ಇದೇ ವಿಚಾರಕ್ಕೆ. ಬಿಗ್​ಬಾಸ್​ ಮನೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಿದ್ದ ಕಾರ್ತಿಕ್​ ಅವರು ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ತಮ್ಮದೆಯಾದ ಆಟದ ಶೈಲಿಯ ಮೂಲಕ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡು ವಿನ್ನರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇದೇ ಟ್ರೋಫಿಗಾಗಿ ಸಂಗೀತಾ ಶೃಂಗೇರಿ, ವಿನಯ್​ ಗೌಡ, ವರ್ತೂರು ಸಂತೋಷ್​, ಡ್ರೋನ್ ಪ್ರತಾಪ್​ ಕೂಡ ರೇಸ್​ನಲ್ಲಿದ್ದರು.

ಇದನ್ನು ಓದಿ:  ‘ಮೋದಿ ಹೀಗೆ ಮಾಡಿದ್ರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯ’- ಸಂಸದ ಡಿ.ಕೆ ಸುರೇಶ್

ಅದೇ ರೀತಿ ಬಿಗ್​ಬಾಸ್​​ ಟ್ರೋಫಿಯನ್ನು ಈ ಬಾರಿ ಮಹಿಳಾ ಸ್ಪರ್ಧಿ ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಬಿಗ್​ಬಾಸ್​ ಕೊನೆಯ ವಾರದಲ್ಲಿ ​ಸಂಗೀತಾ ಶೃಂಗೇರಿ ಟ್ರೋಫಿ ನಾನೇ ಗೆಲ್ಲುತ್ತೇನೆ ಅಂತಾ ಓವರ್​ ಕಾನ್ಫಿಡೆನ್ಸ್​​ ಇಟ್ಟುಕೊಂಡಿದಕ್ಕೆ ಹೀಗೆ ಆಗಿದೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕೆಲ ಮಾತುಗಳು ಕೇಳಿ ಬರುತ್ತೇವೆ. ಬಿಗ್​​ಬಾಸ್​​ ಕೊಟ್ಟ ಎಲ್ಲಾ ಟಾಸ್ಕ್​ಗಳಲ್ಲಿ ಸಂಗೀತಾ, ವಿನಯ್​​ ಅವರು ಜಾಸ್ತಿ ಗಲಾಟೆ ಮಾಡಿಕೊಂಡು ಆಡುತ್ತಿದ್ದರು.

ಆದರೆ ಆ ಇಬ್ಬರು ಆಡಿದ ಟಾಸ್ಕ್​​ಗಳು ಅರ್ಧಕ್ಕೆ ನಿಂತು ಹೋಗುತ್ತಿದ್ದವು. ಫಿನಾಲೆಗೆ ಒಂದು ವಾರದ ಹಿಂದಷ್ಟೇ ಸಂಗೀತಾ ಅವರು ಆತ್ಮವಿಶ್ವಾಸದಲ್ಲಿ ನಾನೇ ವಿನ್ನರ್​ ಆಗುತ್ತೇನೆ ಅಂತ ಜಾಸ್ತಿ ಓಡಾಡುತ್ತಿದ್ದರು. ಅದಕ್ಕಾಗಿ ನಮಗೆ ವೋಟ್​ ಮಾಡಲು ಮನಸ್ಸು ಬರಲಿಲ್ಲ. ಎಂಟರ್​ಟೇನ್ಮೆಂಟ್​  ಅಂತಾ ನೋಡೋದಾದರೆ ಸಂಗೀತಾ ಅವರು ಏನು ಇಲ್ಲ. ಅದರ ಬದಲಾಗಿ ಕಾರ್ತಿಕ್​ ಅವರು ಸಖತ್​ ಮನರಂಜನೆ ನೀಡಿದ್ದಾರೆ. ಹೀಗಾಗಿ ಅವರಿಗೆ ವೋಟ್​ ಹಾಕಿದ್ದೇವೆ ಅಂತಾ ಬಿಗ್‌ಬಾಸ್ ವಿನ್ನರ್‌ ಕಾರ್ತಿಕ್‌ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

BBK10: ಒಂದು ವಾರದ ಹಿಂದೆ ಸಂಗೀತಾಗೆ ಗೆಲ್ಲೋ ಚಾನ್ಸ್‌? ಕಾರ್ತಿಕ್‌ ಗೆದ್ದ ಕಾರಣ ಏನು?

https://newsfirstlive.com/wp-content/uploads/2023/12/Sangeetha.jpg

Load More