/newsfirstlive-kannada/media/post_attachments/wp-content/uploads/2024/04/TULSI.jpg)
ತುಳಸಿ, ಹೆಚ್ಚು ಕಡಿಮೆ ಎಲ್ಲಾ ಹಿಂದೂಗಳ ಮನೆಯ ಎದುರು ಜಾಗ ಪಡೆದುಕೊಂಡಿರುವ ಸಸ್ಯ. ಕೇವಲ ಸಸ್ಯವಲ್ಲ, ಪವಿತ್ರ ಸಸ್ಯವೆಂದೂ ದೇವತೆಯ ಸ್ಥಾನಕೊಟ್ಟು ಪೂಜಿಸುತ್ತಾರೆ. ಇಂದು ತುಳಸಿ ಪೂಜಾ ದಿನ. ತುಳಸಿ ಕೇವಲ ಧಾರ್ಮಿಕವಾಗಿ ಮಾತ್ರ ಪವಿತ್ರ ಸಸ್ಯ ಶ್ರೇಷ್ಠವಾಗಿ ಉಳಿದಿಲ್ಲ. ಆಯುರ್ವೇದದಲ್ಲಿಯೂ ಕೂಡ ಇದಕ್ಕೆ ಪ್ರಮುಖ ಸ್ಥಾನವಿದೆ. ಹಲವು ಮಾರಣಾಂತಿಕ ಕಾಯಿಲೆಗಳಿಗೆ ತುಳಸಿ ದಳ ರಾಮಬಾಣ. ಮುಂಜಾನೆಯೆದ್ದು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹಲವು ಲಾಭಗಳಿವೆ
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ; ತುಳಸಿ ಎಲೆಯಲ್ಲಿ ಆ್ಯಂಟಿಆಕ್ಸಿಡಂಟ್​ಗಳ ಅಂಶ ಹೆಚ್ಚು ಇರುತ್ತದೆ ಅದರ ಜೊತೆಗೆ ಅದರಲ್ಲಿರುವ ಸಾರಭೂತ ತೈಲ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಇದು ದೇಹಕ್ಕೆ ನೈಸರ್ಗಿಕವಾದ ರಕ್ಷಣಾ ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ ದೇಹದಲ್ಲಿರುವ ಬ್ಯಾಕ್ಟಿರಿಯಾ ಹಾಗೂ ವೈರಸ್​ಗಳ ಜೊತೆಗೆ ಬಲವಾಗಿ ಹೋರಾಡುತ್ತದೆ.
ಇದನ್ನೂ ಓದಿ:ಕಳಪೆ ನಿದ್ದೆಯಿಂದ ಮಕ್ಕಳ ಮೆದುಳಿಗೆ ಭಾರೀ ಹಾನಿ; ನಿಮ್ಮ ಮಗು ಅಪಾಯದಲ್ಲಿದಿಯೇ..?
ದೇಹವನ್ನು ಡಿಟಾಕ್ಸಿಫೈ ಮಾಡುತ್ತದೆ : ತುಳಸಿಯಲ್ಲಿ ನೈಸರ್ಗಿಕವಾಗಿಯೇ ದೇಹವನ್ನು ನಿರ್ವಿಷಗೊಳಿಸುವ ಅಂದ್ರೆ ಡಿಟಾಕ್ಸಿಫೈ ಮಾಡುವ ಶಕ್ತಿಯಿದೆ. ಇದು ಹೊಟ್ಟೆಯಲ್ಲಿರುವ ವಿಷಕಾರಿ ಅಂಶಗಳನ್ನು ಸ್ವಚ್ಛಗೊಳಿಸುತ್ತದೆ. ತುಳಸಿಯನ್ನು ನೀವು ಪ್ರತಿನಿತ್ಯ ತಪ್ಪದೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಿಮ್ಮ ಲಿವರ್ ಕಾರ್ಯಕ್ಷಮತೆಯೂ ಕೂಡ ಇನ್ನಷ್ಟು ಶಕ್ತಿಯುತಗೊಳ್ಳುತ್ತದೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದರ ಜೊತೆಗೆ ಒಟ್ಟಾರೆ ಆರೋಗ್ಯ ನಿರ್ವಹಣೆಯ ಮೇಲೆ ಪ್ರಮುಖ ಪಾತ್ರವಹಿಸುತ್ತದೆ.
/newsfirstlive-kannada/media/post_attachments/wp-content/uploads/2024/10/TULASI-BENEFITS.jpg)
ಆತಂಕ ಮತ್ತು ಒತ್ತಡಗಳನ್ನು ದೂರ ಮಾಡುತ್ತದೆ: ತುಳಸಿಯಲ್ಲಿ ಅಡಾಪ್ಟಜೆನಿಕ್ ಸಂಯುಕ್ತಗಳು ಹೆಚ್ಚು ಇರುವುದರಿಂದ ಇದು ನಿಮ್ಮ ನಿತ್ಯದ ಒತ್ತಡ, ದುಗುಡ ದುಮ್ಮಾನಗಳನ್ನು ಕೂಡ ದೂರ ಮಾಡುತ್ತದೆ. ಬೆಳಗ್ಗೆ ಎದ್ದು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಹಾರ್ಮೊನ್ಸ್​​ಗಳ ಸಮತೋಲನ ಬಿಗಡಾಯಿಸುವಂತಹ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸನ್ನು ಸದಾ ಶಾಂತವಾಗಿ ಇಡುವಲ್ಲಿ ತುಳಸಿ ಎಲೆಗಳು ಬಹಳ ಸಹಾಯಕಾರಿ.
ಇದನ್ನೂ ಓದಿ:ನಿಮ್ಮ ನಿತ್ಯದ ಒಂದು ಕಪ್ ಇನ್​ಸ್ಟಂಟ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಾ? ಇದರ ಅಡ್ಡ ಪರಿಣಾಮಗಳು ಏನು?
ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತದೆ : ತುಳಸಿ ಎಲೆಯಲ್ಲಿ ಆ್ಯಂಟಿ ಮೈಕ್ರೊಬಿಯಲ್ ಅಂಶಗಳು ಇರುವುದರಿಂದ ಇದು ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಗೆ ರಾಮಬಾಣ. ತುಳಸಿ ಎಲೆಗಳನ್ನು ನಿರಂತರವಾಗಿ ತಿನ್ನುವುದರಿಂದ ಕಫ, ಅಸ್ತಮಾ ಸೇರಿದಂತೆ ಹಲವಾರು ಉಸಿರಾಟದ ತೊಂದರೆಗಳು ಮಂಗಮಾಯವಾಗುತ್ತವೆ.
/newsfirstlive-kannada/media/post_attachments/wp-content/uploads/2024/10/TULASI-BENEFITS-2.jpg)
ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡುತ್ತದೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ಅದು ಇನ್ಸುಲಿನ್ ಸೆನ್ಸಿಟಿವಿಟಿಯನ್ನ ಸುಧಾರಿಸುತ್ತದೆ. ಅದು ಮಾತ್ರವಲ್ಲ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಾಯಕಾರಿಯಾಗುತ್ತದೆ. ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಗ್ಲುಕೋಸ್​ ಬಿಡುಗಡೆಯ ಪ್ರಮಾಣವನ್ನು ಕುಗ್ಗಿಸುತ್ತದೆ ಎಂದು ಅನೇಕ ತಜ್ಞರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us