/newsfirstlive-kannada/media/post_attachments/wp-content/uploads/2024/09/8-DRINKS-FOR-WEIGHT-LOSS-1.jpg)
ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯನಿಗೆ ಫ್ಯಾಟ್ ಬರೋದು ಕಾಮನ್. ಹೆಚ್ಚು ಫ್ಯಾಟ್ ಹೊಂದಿರೋರು ಸಣ್ಣ ಆಗಲೇಬೇಕು. ಅದಕ್ಕಾಗಿ ಅವರು Weight Loss ಮಾಡಲೇಬೇಕು. ಅದರಲ್ಲೂ ಆರೋಗ್ಯವಾಗಿ ಫಿಟ್ ಆಗಿರಲು ಸಣ್ಣ ಆಗೋದು ಬಿಟ್ಟರೆ ಮತ್ಯಾವ ಪರಿಹಾರವೂ ಇಲ್ಲ.
ಹೆಚ್ಚುವರಿ ತೂಕ ಯಾವತ್ತಿದ್ರೂ ಡೇಂಜರ್ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರಿಂದ ಮನುಷ್ಯರಿಗೆ ನಾನಾ ಕಾಯಿಲೆಗಳು ಬರೋದು ನಾವು ನೋಡಿದ್ದೇವೆ. ಹೀಗಾಗಿ ಹೆಚ್ಚುವರಿ ತೂಕವನ್ನು ನಿರ್ಲಕ್ಷ್ಯ ಮಾಡಬಾರದು. ಬದಲಿಗೆ ಆರೋಗ್ಯವಾಗಿರಲು ಸಣ್ಣ ಆಗಲೇಬೇಕು. ಅದಕ್ಕೆ ಆರೋಗ್ಯಕರ ಡಯಟ್ ತುಂಬಾ ಮುಖ್ಯ.
ಒಂದು ತಿಂಗಳಲ್ಲಿ 5 ಕಿಲೋ ವೇಟ್ ಲಾಸ್ ಹೇಗೆ?
ಸಣ್ಣ ವಯಸ್ಸಿನಲ್ಲೇ 90 ಕೆಜಿಗಿಂತಲೂ ಹೆಚ್ಚು ಇದ್ದವರು ತೂಕ ಕಡಿಮೆ ಮಾಡಿಕೊಳ್ಳಲೇಬೇಕು. ಒಂದು ವೇಳೆ ತೂಕ ಕಡಿಮೆ ಮಾಡಿಕೊಳ್ಳದಿದ್ರೆ ನಾನಾ ರೀತಿಯ ಆರೋಗ್ಯದ ಸಮಸ್ಯೆಗಳು ಕಾಡುತ್ತವೆ. ಆರೋಗ್ಯ ಸಮಸ್ಯೆ ಎದುರಾಗೋ ಮುನ್ನವೇ ವೈದ್ಯರ ಸಲಹೆ ಪಡೆದು ನೀವು 5 ತಿಂಗಳಲ್ಲಿ ಅಗತ್ಯ ಇರೋ ಅಷ್ಟು ತೂಕ ಇಳಿಸಲೇಬೇಕು. ಆಗ ಮಾತ್ರ ಹೆಲ್ದಿ ಲೈಫ್‌ಸ್ಟೈಲ್‌ಗೆ ಮರಳಬಹುದು.
ಹೆಚ್ಚು ತೂಕ ಇದ್ರೆ ಸಮಸ್ಯೆ ಏನು?
ತುಂಬಾ ತೂಕ ಇದ್ದವರಿಗೆ ಜಠರ ಹುಣ್ಣು, ಫ್ಯಾಟಿ ಲಿವರ್, ಪಿತ್ತಗಲ್ಲು, 1 ನಿಮಿಷ ನಡೆದ್ರೂ ಕಾಲೂತ ಬರೋದು ಹೀಗೆ ನಾನಾ ಸಮಸ್ಯೆಗಳು ಬರುತ್ತವೆ ಎನ್ನುತ್ತಾರೆ ವೈದ್ಯರು.
ಕಡಿಮೆ ಆಗಲು ಡಯೆಟ್ ಪ್ಲಾನ್ ಮುಖ್ಯ
ಸಣ್ಣ ಆಗಲೇಬೇಕು ಅನ್ನೋರು ವೈದ್ಯರ ಸಲಹೆ ಮೇರೆಗೆ ಉಪಹಾರಕ್ಕೆ ಪಪ್ಪಾಯ, ಪೇರಲ, ಸೇಬುಗಳಂತಹ ಉತ್ತಮ ಪ್ರಮಾಣದ ಹಣ್ಣುಗಳು ಸೇವನೆ ಮಾಡಬಹುದು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಒಂದು ಬೌಲ್ ಸಲಾಡ್, ಸಬ್ಜಿ ಅಥವಾ ದಾಲ್, ಎರಡು ಚಪಾತಿ ತಿಂದರೆ ಸಾಕು. ಫ್ರೀ ವರ್ಕೌಟ್ ಮೀಲ್ ಇರಬೇಕು. ಸಂಜೆ ವರ್ಕೌಟ್ ಮಾಡ್ತಿದ್ದರಿಂದ ಊಟವನ್ನೇ ಅವಲಂಬಿಸಬೇಕು. ಪೋಸ್ಟ್ ವರ್ಕೌಟ್ ಮೀಲ್ಗೆ ಪ್ರೋಟೀನ್ ಶೇಕ್ ಅಥವಾ ಹಣ್ಣುಗಳು ಸೇವಿಸಬೇಕು. ಅದರಲ್ಲೂ ನಿತ್ಯ ವರ್ಕೌಟ್ ಮತ್ತು ದಿನಕ್ಕೆ 15000 ಹೆಜ್ಜೆಗಳನ್ನು ನಡೆಯಬೇಕು ಎನ್ನುತ್ತಾರೆ ಫಿಟ್ನೆಸ್ ಗುರುಗಳು.
ಇದನ್ನೂ ಓದಿ:ಸ್ಟಾರ್ ಕ್ರಿಕೆಟರ್ ಸೆಹ್ವಾಗ್ ಮತ್ತು ಆರತಿ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್ಗೆ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ