Advertisment

ವಿಮಾನಗಳಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ನಿರ್ಬಂಧವೇಕೆ? ಇಲ್ಲಿವೆ ಕಾರಣಗಳು

author-image
Gopal Kulkarni
Updated On
ವಿಮಾನಗಳಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ನಿರ್ಬಂಧವೇಕೆ? ಇಲ್ಲಿವೆ ಕಾರಣಗಳು
Advertisment
  • ವಿಮಾನಯಾನದಲ್ಲಿ ತೆಂಗಿನಕಾಯಿಯನ್ನು ನಿಷೇಧ ಮಾಡಲು ಕಾರಣವೇನು?
  • ತೆಂಗಿನಕಾಯಿಯಿಂದ ವಾಯುಯಾನದಲ್ಲಾಗುವ ಸಮಸ್ಯೆಗಳು ಯಾವುವು?
  • ಯಾವೆಲ್ಲಾ ಮಾನದಂಡಗಳ ಮೇಲೆ ತೆಂಗಿನಕಾಯಿಗೆ ನಿರ್ಬಂಧ ವಿಧಿಸಲಾಗಿದೆ ?

ನೀವು ವಿಮಾನಯಾನ ಮಾಡಬೇಕಾದಾಗ ಅಲ್ಲಿ ಕೆಲವು ಬೇಕು ಬೇಡಗಳ ನಿಯಮಗಳನ್ನು ನೀವು ಪಾಲಿಸಲೇಬೇಕಾಗುತ್ತದೆ. ನಿಮ್ಮ ಲಗೇಜ್​ನಲ್ಲಿ ಏನಿರಬೇಕು ಏನಿರಬಾರದು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಅದರಲ್ಲೂ ಉರುವಲು ಅಂದ್ರೆ ಸುಲಭವಾಗಿ ಉರಿ ಹೊತ್ತಿಕೊಳ್ಳುವಂತಹ ವಸ್ತುಗಳು ಅಲ್ಲಿ ನಿರ್ಬಂಧವಿದೆ. ಉದಾಹರಣೆಗೆ ಲೈಟರ್, ಡ್ರೈ ಶೆಲ್ ಬ್ಯಾಟರೀಗಳು ಅದರ ಜೊತೆಗೆ ಹರಿತವಾದ ವಸ್ತುಗಳು ಉದಾಹರಣೆಗೆ ಚಾಕು, ಕತ್ತರಿ, ಬ್ಲೇಡ್ ಇವುಗಳನ್ನು ತೆಗೆದುಕೊಂಡು ಹೋಗಲು ಕೂಡ ನಿರ್ಬಂಧವಿದೆ. ಆದ್ರೆ ಈ ಒಂದು ವಿಷಯ ಕೇಳಿ ನಿಮಗೆ ಹೈರಾಣಾಗಬಹುದು, ಪ್ಲೇನ್​ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಕೂಡ ನಿರ್ಬಂಧವಿದೆ.

Advertisment

ಇದನ್ನೂ ಓದಿ:ಸಾಕ್ಸ್ ಧರಿಸದೇ ಬೂಟುಗಳನ್ನು ಹಾಕಲೇಬೇಡಿ! ಎಷ್ಟು ಡೇಂಜರ್ ಅಂದರೆ..

ನಿಜ, ಅಂತಾರಾಷ್ಟ್ರೀಯವಾಗಿ ಅಥವಾ ರಾಷ್ಟ್ರೀಯವಾಗಿ ನೀವು ವಾಯುಯಾನ ಕೈಗೊಂಡರೆ ಅಲ್ಲಿ ನಿಮಗೆ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅದಕ್ಕೆ ಕಾರಣವೇನೆಂದು ವಿಮಾನಯಾನದ ತಜ್ಞರು ಹಾಗೂ ಭಾರತದ ವಿಮಾನಯಾನದ ತರಬೇತುದಾರರಾದ ರಾಜಗೋಪಾಲ್ ಅವರು ಹೇಳುವುದು ಹೀಗೆ. ತೆಂಗಿನಕಾಯಿ ಗಟ್ಟಿಯಾದ ಹೊರಭಾಗವನ್ನು ಹೊಂದಿರುತ್ತದೆ. ಇದನ್ನು ಒಂದು ಅಸ್ತ್ರವಾಗಿ ಉಪಯೋಗಿಸುವ ಸಾಧ್ಯತೆಯೂ ಕೂಡ ಇದೆ. ಅದು ಮಾತ್ರವಲ್ಲ ತೆಂಗಿನಕಾಯಿಯಿಂದ ವಿಮಾನಕ್ಕೆ ಹಾನಿಯುಂಟು ಮಾಡಬಹುದು. ಪ್ರಯಾಣಿಕರ ಮೇಲೆ ಅದರಿಂದ ಹಲ್ಲೆಯಂತಹ ಯತ್ನ ನಡೆಯಬಹುದು. ಪ್ರತಿಯೊಂದು ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯೋಚಿಸುತ್ತವೆ. ಹೀಗಾಗಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ನಿರ್ಬಂಧವಿದೆ ಎಂದು ಹೇಳುತ್ತಾರೆ.

ಇದು ಒಂದು ಮಾತ್ರವಲ್ಲ ತೆಂಗಿನಕಾಯಿಯ ಮೇಲ್ಭಾಗ ತುಂಬಾ ಗಟ್ಟಿಯಾಗಿರುತ್ತದೆ ಹಾಗೂ ಅದರೊಳಗೆ ನೀರು ತುಂಬಿಕೊಂಡಿರುತ್ತದೆ. ವಿಮಾನ ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರಾಟ ನಡೆಸುತ್ತಿರುವಾಗ ಏರ್ ಪ್ರೆಶರ್​ ಕಡಿಮೆಯಾಗುತ್ತದೆ. ಇದರಿಂದಾಗಿ ತೆಂಗಿನಕಾಯಿ ಬಿರುಕು ಬಿಡುವ ಹಾಗೂ ಒಡೆದು ಛಿದ್ರಗೊಳ್ಳುವ ಸಂಭವವು ಕೂಡ ಇರುತ್ತದೆ ಹೀಗಾಗಿಯೇ ವಿಮಾನಗಳಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಕಾಸ್ಮೊಟಲಾಜಿಸ್ಟ್ ಡಾ. ಕರುಣಾ ಮಲಹೋತ್ರಾ ಹೇಳುತ್ತಾರೆ.

ಇದನ್ನೂ ಓದಿ:ಮೇಕಪ್ ಮಾಡಿಕೊಳ್ಳುವ ಮುನ್ನ ಎಚ್ಚರ! ನಿಮ್ಮ ಸೌಂದರ್ಯವರ್ಧಕಗಳಲ್ಲಿ ಈ ಕೆಮಿಕಲ್ಸ್​ ಇವೆಯಾ ಪರೀಕ್ಷಿಸಿ

Advertisment

ಇನ್ನು ವಿಮಾನಯಾನ ಮಾಡುವವರ ಲಗೇಜ್​ನಲ್ಲಿ ಕೇವಲ 100 ಮಿಲಿಲೀಟರ್ ದ್ರವ ಪದಾರ್ಥಗಳನ್ನು ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿದೆ. ತೆಂಗಿನಕಾಯಿಯಲ್ಲಿರುವ ನೀರು ಅದಕ್ಕಿಂತ ಹೆಚ್ಚು ಇರುತ್ತದೆ ಹೀಗಾಗಿಯೂ ಅದಕ್ಕೆ ನಿರ್ಬಂಧವಿದೆ. ಅದು ಮಾತ್ರವಲ್ಲ ಸುರಕ್ಷತೆಯ ದೃಷ್ಟಿಯಿಂದಲೂ ನಿರ್ಬಂಧ ಹೇರಲಾಗಿದೆ. ತೆಂಗಿನಕಾಯಿಯ ಮೇಲೆ ಇರುವ ಕವಚ ಅತ್ಯಂತ ಗಟ್ಟಿಯಾಗಿರುವುದರಿಂದ ಭದ್ರತಾ ಸಿಬ್ಬಂದಿಗಳು ಸ್ಕ್ಯಾನ್ ಮಾಡಿದಾಗ ತೆಂಗಿನಕಾಯಿಯೊಳಗೆ ನಿಜವಾಗಿಯೂ ಏನಿದೆ ಎಂದು ಕಂಡುಹಿಡಿಯುವುದು ಕಠಿಣ. ತೆಂಗಿನಕಾಯಿಯ ನೆಪದಲ್ಲಿ ಬೇರೆಯ ವಸ್ತುಗಳನ್ನು ಸಾಗಿಸುವ ಸಾಧ್ಯತೆಯ ಸಂಶಯವೂ ಹುಟ್ಟುತ್ತದೆ ಹೀಗಾಗಿ ತೆಂಗಿನಕಾಯಿಯನ್ನು ವಿಮಾನಯಾನದಲ್ಲಿ ನಿಷೇಧಿಸಲಾಗಿದೆ ಎಂದ ರಾಜಗೋಪಾಲ್ ಅವರು ಹೇಳುತ್ತಾರೆ.

ನೀವು ಮೊದಲ ಬಾರಿ ವಿಮಾನಯಾನ ಮಾಡುತ್ತಿದ್ದರೆ ಈ ಬಗ್ಗೆ ಗಮನವಿರಲಿ. ದೇವರಿಗೆ ತೆಂಗಿನಕಾಯಿ ನೈವೇದ್ಯ ಮಾಡಬೇಕು ಅಂತ ಇಲ್ಲಿಂದಲೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಡಿ. ಒಂದು ವೇಳೆ ಹಾಗೆ ಹೋಗಿದ್ದೇ ಆದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment