ಗಂಡಂದಿರೇ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ನಿಮ್ಮನ್ನ ಹೆಂಡತಿ ಬಿಟ್ಟೋಗಲು ಇದೇ ಕಾರಣ ಆಗಬಹುದು!

author-image
Veena Gangani
Updated On
ಗಂಡಂದಿರೇ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ನಿಮ್ಮನ್ನ ಹೆಂಡತಿ ಬಿಟ್ಟೋಗಲು ಇದೇ ಕಾರಣ ಆಗಬಹುದು!
Advertisment
  • ಇಡೀ ನಮ್ಮ ವೈವಾಹಿಕ ಜೀವನ ಹದಗೆಡಿಸೋಕೆ ಕಾರಣಗಳೇನು?
  • ಮದ್ವೆಯಾದ ಮೇಲು ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಏಕೆ?
  • ಪತ್ನಿ ಹಾಗೂ ಪತಿ ದೂರ ದೂರ ಆಗೋದು ಏಕೆ ಎಂದು ತಿಳಿದುಕೊಳ್ಳಿ!

ಕೆಲವು ಮಹಿಳೆಯರು ಮದುವೆಯಾದ ನಂತರವೂ ತಮ್ಮ ಗಂಡಂದಿರಿಗೆ ಮೋಸ ಮಾಡುತ್ತಾರೆ. ಮದುವೆಯ ನಂತರದ ದಾಂಪತ್ಯದಲ್ಲಿ ಮಾಡುವ ವಂಚನೆ ನಂಬಿಕೆಯ ಕೊರತೆಗೂ ಕಾರಣವಾಗಬಹುದು. ಅಲ್ಲದೇ ಇಡೀ ವೈವಾಹಿಕ ಜೀವನವನ್ನು ಹದಗೆಡಿಸಬಹುದು. ಈಗಂತೂ ಬದಲಾಗುತ್ತಿರುವ ಜೀವನಶೈಲಿ ಕೂಡ ಈ ರೀತಿಯ ಕೆಲಸಕ್ಕೆ ದಾರಿ ಮಾಡಿ ಕೊಡಬಹುದು.

ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್​ ಮದುವೆಗೆ ಗೌತಮಿ ಜಾಧವ್​ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?

publive-image

ನೀವು ಡೇಟಿಂಗ್ ಮಾಡುತ್ತಿರಲಿ, ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರಲಿ ಅಥವಾ ಮದುವೆಯಾಗಿರಲಿ ಹೀಗೆ ಆ ಪ್ರೀತಿಯ ಮೇಲಿನ ನಂಬಿಕೆಯನ್ನು ಮುರಿಯುವುದು ಪ್ರೇಮ ಸಂಬಂಧವನ್ನು ಮುರಿದಂತೆ. ಈ ಪರಿಸ್ಥಿತಿಯಲ್ಲಿ ನೀವು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಿರ್ಧರಿಸಿದರೂ ಸಹ ನಿಮ್ಮ ನಡುವಿನ ಹಳೆಯ ಬಂಧ ಮತ್ತು ಹಳೆಯ ಭಾವನೆಗಳನ್ನು ಕಾಪಾಡಿಕೊಳ್ಳುವುದು ಅಸಾಧ್ಯ.

publive-image

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪುರುಷರೇ ಅತಿ ಹೆಚ್ಚಾಗಿ ಬಹು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದನ್ನು ತೋರಿಸಲಾಗುತ್ತದೆ. ಆದ್ರೇ ಇತ್ತೀಚಿನ ವರ್ಷಗಳಲ್ಲಿ ಪುರುಷರಷ್ಟೇ ಅಲ್ಲದೇ ಮದುವೆಯಾದ ಮಹಿಳೆಯರು ಕೂಡ ಬೇರೆ ಬೇರೆ ಪುರುಷರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಿರೋದು ಹೆಚ್ಚಾಗಿ ಕಂಡು ಬಂದಿದೆ. ಅಷ್ಟೇ ಅಲ್ಲದೇ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ರಾಷ್ಟ್ರೀಯ ಅಭಿಪ್ರಾಯ ಸಂಶೋಧನಾ ಕೇಂದ್ರದ (NORC) 2022ರ ಜಾಗತಿಕ ಸಾಮಾಜಿಕ ಸಮೀಕ್ಷೆಯಲ್ಲಿ (GSS) ಇಂತಹ ಕೆಲವು ಆಘಾತಕಾರಿ ವಿಷಯಗಳು ಕಂಡುಬಂದಿವೆ. ಈ ಸಮೀಕ್ಷೆಯಲ್ಲಿ, ಶೇ. 20 ರಷ್ಟು ಪುರುಷರು ಮತ್ತು ಶೇ. 13 ರಷ್ಟು ಮಹಿಳೆಯರು ತಮ್ಮ ಸಂಗಾತಿಗಳಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಬ್ರಿಟಿಷ್ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆ ಯುಗೋವ್ 1,000 ಕ್ಕೂ ಹೆಚ್ಚು ವಿವಾಹಿತರ ಮೇಲೆ ನಡೆಸಿದ 2019 ರ ಸಮೀಕ್ಷೆಯಲ್ಲಿ ಇದೇ ರೀತಿಯ ಫಲಿತಾಂಶಗಳು ಕಂಡುಬಂದಿವೆ.

publive-image

ಇವರಲ್ಲಿ ಶೇ. 20ರಷ್ಟು ಪುರುಷರು ಮತ್ತು ಶೇ. 10ರಷ್ಟು ಮಹಿಳೆಯರು ತಮ್ಮ ಸಂಗಾತಿಗಳಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ, ದಾಂಪತ್ಯ ಮೋಸ ಮಾಡುವ ಮಹಿಳೆಯರ ಸಂಖ್ಯೆ ಸ್ಥಿರವಾಗಿ ಹೆಚ್ಚಾಗಿದೆ. 2010ರಲ್ಲಿ, ಪತ್ನಿಯರು ತಮ್ಮ ಗಂಡಂದಿರಿಗೆ ಮೋಸ ಮಾಡುವ ಪ್ರವೃತ್ತಿ 20 ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ. ಅಷ್ಟಕ್ಕೂ ಹೆಂಡತಿಯರೇ ಆಗಲಿ, ಪುರುಷರೇ ಆಗಲಿ ಮದುವೆ ಬಳಿಕ ಅಕ್ರಮ ಸಂಬಂಧ ಇಟ್ಟುಕೊಳ್ಳುವುದಾದರೂ ಏಕೆ ಎಂಬುವುದುರ ಬಗ್ಗೆ ಮಾಹಿತಿ ಇಲ್ಲಿದೆ.

publive-image

ಒಂಟಿತನ

ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವನಾತ್ಮಕರು. ತಮ್ಮ ಸಂಗಾತಿಯಿಂದ ತೀವ್ರವಾದ ಒಂಟಿತನ ಅಥವಾ ಭಾವನಾತ್ಮಕ ಬೇರ್ಪಡುವಿಕೆಯಿಂದಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಭಾವನಾತ್ಮಕ ಮತ್ತು ಪ್ರಣಯ ಸಂಬಂಧಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಅಂದ್ರೆ ನನಗೆ ಇವರು ಸಿಗೋದಕ್ಕಿಂತ ಆ ವ್ಯಕ್ತಿ ಸಿಕ್ಕಿದ್ದರೇ ಚೆನ್ನಾಗಿ ಇರುತ್ತಿತ್ತು ಅಂತ ಅಂದುಕೊಳ್ಳುತ್ತಾರೆ. ಈ ರೀತಿಯ ಭಾವನೆಯು ಹಲವು ವಿಭಿನ್ನ ಸನ್ನಿವೇಶಗಳಿಂದ ಉಂಟಾಗಬಹುದು. ಇದರಲ್ಲಿ ಪ್ರಮುಖವಾಗಿ ಸಂಗಾತಿ ನಿರಂತರವಾಗಿ ಪ್ರಯಾಣಿಸುವುದು, ಸಂಗಾತಿಯು ದೀರ್ಘಕಾಲ ಕೆಲಸ ಮಾಡುವುದು, ಸಂಗಾತಿಯ ಅನಾರೋಗ್ಯದಿಂದ ಬಳಲುತ್ತಿದ್ದರೇ, ನಿರಂತರವಾಗಿ ಜಗಳ ಮಾಡುವುದರಿಂದಲೂ ಹೀಗೆ ಆಗುತ್ತದೆ.

ಕಡಿಮೆ ಸ್ವಾಭಿಮಾನ 

ಮಹಿಳೆಯರು ಕಡಿಮೆ ಸ್ವಾಭಿಮಾನದಿಂದ ಬಳಲುತ್ತಿರುವಾಗ, ಈ ಪರಿಸ್ಥಿತಿಯಲ್ಲಿ ಅವರ ಪತಿ, ಪತ್ನಿಗೆ ಸರಿಯಾಗಿ ಗಮನ, ಗೌರವ ಕೊಡದಿದ್ದಾಗ, ಆಗ ಹೊರಗಿನವರ ಕಡೆಗೆ ನೋಡುವಂತೆ ಮಾಡುತ್ತದೆ. ಬೇರೆ ವ್ಯಕ್ತಿ ಹೊಗಳುವುದರಿಂದ ಇದು ಬೇರೆ ಸಂಬಂಧಕ್ಕೆ ತಿರುಗುವಂತೆ ಮಾಡುತ್ತದೆ. ಅದಕ್ಕೆ ದೊಡ್ಡವರು ಹೇಳ್ತಾರೆ, ಹೆಂಡತಿ ಹಾಗೂ ಮಕ್ಕಳಿಗೆ ಅತಿ ಹೆಚ್ಚು ಸಮಯ ಕೊಡಿ ಅಂತ.

ಭಾವನಾತ್ಮಕ ಹಸಿವು

ತಮ್ಮ ಸಂಗಾತಿಗಳಿಗೆ ಮೋಸ ಮಾಡುವ ಮಹಿಳೆಯರು ತಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಹಾಗೆ ಮಾಡುತ್ತಾರೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಆ ಸಂಬಂಧವು ದೈಹಿಕವಾಗಿರಲಿ ಅಥವಾ ಭಾವನಾತ್ಮಕವಾಗಿರಲಿ, ಮಹಿಳೆ ತನ್ನ ಪ್ರಸ್ತುತ ಸಂಬಂಧದಿಂದ ಸಿಗದಿರುವ ಸಂಭಾಷಣೆ, ಸಹಾನುಭೂತಿ, ಗೌರವ, ಮೆಚ್ಚುಗೆ, ಬೆಂಬಲವನ್ನು ಇನ್ನೊಬ್ಬ ವ್ಯಕ್ತಿಯಿಂದ ಬಯಸುತ್ತಾಳೆ. ಹೀಗಾಗಿ ತನಗೆ ಪತಿ ಇದ್ದರು ಬೇರೆ ಪುರುಷನ ಜೊತೆಗೆ ಅಕ್ರಮವಾಗಿ ಬೆರೆಯುವಂತೆ ಮಾಡುತ್ತದೆ.

ಕೋಪ ಅಥವಾ ಸೇಡು

ಸಂಗಾತಿ ಪತ್ನಿಯ ನಿರೀಕ್ಷೆಗಳಿಗೆ ತಕ್ಕಂತೆ ಬದುಕದಿದ್ದರೆ ಮತ್ತು ಅವರ ಪ್ರತಿಯೊಂದು ಅಗತ್ಯ ಮತ್ತು ಆಸೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ, ಅದು ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತದೆ. ಇದಲ್ಲದೆ, ಕೆಲವರು ತಮ್ಮ ಹಿಂದಿನ ಸಂಬಂಧದಂತಹ ಬೇರೆ ಯಾವುದೋ ಕಾರಣಕ್ಕಾಗಿ ತಮ್ಮ ಸಂಗಾತಿಯ ಮೇಲೆ ಕೋಪಗೊಳ್ಳಬಹುದು ಮತ್ತು ಸೇಡು ತೀರಿಸಿಕೊಳ್ಳಲು ತಮ್ಮನ್ನು ತಾವು ಮೋಸ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment