/newsfirstlive-kannada/media/post_attachments/wp-content/uploads/2025/03/ONE-COLOUR.jpg)
ವಿಶ್ವದ ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ರಾಷ್ಟ್ರಧ್ವಜವನ್ನು ಹೊಂದಿರುತ್ತದೆ. ಅದು ಆಯಾ ದೇಶದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ಬಣ್ಣಗಳು ಹಾಗೂ ಚಿತ್ರಗಳನ್ನು ರಾಷ್ಟ್ರಧ್ವಜದಲ್ಲಿ ಚಿತ್ರಿಸುತ್ತವೆ. ಪ್ರತಿ ರಾಷ್ಟ್ರವೂ ತನ್ನ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡುವಾಗ ಅದರ ಆಕೃತಿ, ಗಾತ್ರ ಬಣ್ಣ ಹಾಗೆ ಉಳಿದಂತೆ ಹಲವು ವಿಷಯಗಳಲ್ಲಿ ವಿಶೇಷ ಧ್ಯಾನವಿಟ್ಟುಕೊಂಡು ನಿರ್ಮಾಣ ಮಾಡಿವೆ. ಪ್ರತಿ ದೇಶದ ರಾಷ್ಟ್ರಧ್ವಜದಲ್ಲಿ ವಿಶೇಷ ರೀತಿಯ ವಿವಿಧ ರೀತಿಯ ಬಣ್ಣಗಳು ನಮಗೆ ಕಾಣಲು ಸಿಗುತ್ತವೆ. ನಮ್ಮದೇ ರಾಷ್ಟ್ರಧ್ವಜವನ್ನು ನೋಡಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ನಡುವೆ ಅಶೋಕಚಕ್ರ ಕಾಣ ಸಿಗುತ್ತದೆ.
ಆದರೆ ಒಂದು ವಿಷಯ ನಿಮಗೆ ಗೊತ್ತಾ? ಜಗತ್ತಿನ ಯಾವ ರಾಷ್ಟ್ರಧ್ವಜದಲ್ಲೂ ಪ್ರಮುಖವಾಗಿ ಒಂದು ಬಣ್ಣ ಕಾಣ ಸಿಗುವುದೇ ಇಲ್ಲ. ಬಹುತೇಕವಾಗಿ ಯಾವ ದೇಶದ ರಾಷ್ಟ್ರಧ್ವಜವು ಈ ಬಣ್ಣವನ್ನು ತನ್ನ ರಾಷ್ಟ್ರಧ್ವಜದ ಬಣ್ಣದಲ್ಲಿ ಅಳವಡಿಸಿಕೊಂಡಿಯೇಯಿಲ್ಲ. ಅದಕ್ಕೆ ಕಾರಣವೂ ಇದೆ. ಕಾರಣ ತಿಳಿಯುವ ಮೊದಲು ಆ ಬಣ್ಣ ಯಾವುದು ಎಂಬುದನ್ನು ನೋಡೋಣ.
ಇದನ್ನೂ ಓದಿ:ಶಿವಾಜಿ ಸಮಾಧಿ ಪಕ್ಕ ನಾಯಿಯ ಸ್ಮಾರಕ ಯಾಕೆ ಕಟ್ಟಲಾಗಿತ್ತು? ಮುಧೋಳ ಶ್ವಾನಕ್ಕೂ ಛತ್ರಪತಿಯ ಸೇನೆಗೂ ಇತ್ತಾ ನಂಟು?
ವಿಶ್ವದಲ್ಲಿ ಯಾವುದೇ ದೇಶದ ರಾಷ್ಟ್ರಧ್ವಜದಲ್ಲಿ ನಾವು ಕಾಣಲಾರದ ಬಣ್ಣ ಅಂದ್ರೆ ಅದು ನೇರಳೆ ಅಂದ್ರೆ ಪರ್ಪಲ್ ಕಲರ್. ಈ ಬಣ್ಣವು ಜಗತ್ತಿನ ಯಾವ ದೇಶದ ಧ್ವಜದಲ್ಲಿಯೂ ಕೂಡ ನಮಗೆ ಕಾಣ ಸಿಗುವುದಿಲ್ಲ. ಯಾವ ದೇಶವೂ ಈ ಬಣ್ಣವನ್ನು ಪ್ರಯೋಗ ಮಾಡಿಲ್ಲ.ಇದರ ನಡುವೆ ನಮಗೆ ಯೋಚನೆ ಮಾಡುವ ವಿಚಾರವೆಂದರೆ, ಯಾಕೆ? ಯಾಕೆ ವಿಶ್ವದಲ್ಲಿ ಇಷ್ಟು ರಾಷ್ಟ್ರಗಳಿದ್ದರೂ ಒಂದೇ ಒಂದು ರಾಷ್ಟ್ರ ನೇರಳೆ ಬಣ್ಣವನ್ನು ತನ್ನ ರಾಷ್ಟ್ರಧ್ವಜದಲ್ಲಿ ಸೇರಿಸಲಿಲ್ಲ ಅನ್ನೋದು.
ಇದನ್ನೂ ಓದಿ:ಕೈದಿಯಾಗಿ ಬಂದವಳು.. ಮೊಘಲ್ ಸಾಮ್ರಾಜ್ಯದ ಮಹಾ ಸಾಮ್ರಾಜ್ಞಿನಿಯಾಗಿ ಬೆಳೆದಳು ! ಇದು ನಿಜಕ್ಕೂ ಒಂದು ರೋಚಕ ಕಥೆ
ಇದಕ್ಕೆ ಕಾರಣವೇನೆಂದರೆ ನೇರಳೆ ಬಣ್ಣ ತೀರ ವಿರಳವಾಗಿ ಲಭ್ಯವಾಗುವ ಹಾಗೂ ಅದನ್ನು ಪ್ರಾಕೃತಿಕವಾಗಿ ತಯಾರಿಸಲು ಅಷ್ಟು ಸರಳವಲ್ಲದ ಕಾರಣ ಈ ಬಣ್ಣವನ್ನು ಯಾವುದೇ ದೇಶಗಳು ತನ್ನ ರಾಷ್ಟ್ರಧ್ವಜದ ಬಣ್ಣದಲ್ಲಿ ಅಳವಡಿಸಲು ಮುಂದಾಗಲಿಲ್ಲ. ಅದು ಮಾತ್ರವಲ್ಲ ಈ ಒಂದು ಬಣ್ಣದ ಬೆಲೆಯೂ ಕೂಡ ತುಂಬಾ ದುಬಾರಿ. ಇದನ್ನು Sea Snails ನಿಂದ ತೆಗೆದು ತಯಾರಿಸಬೇಕಾಗುತ್ತದೆ. ಹೀಗಾಗಿ ಹಲವು ವರ್ಷಗಳ ಹಿಂದೆ ವಿಶ್ವದಲ್ಲಿ ಈ ಬಣ್ಣದ ಉಪಯೋಗ ತುಂಬಾ ವಿರಳವಾಗಿ ಮಾಡಲಾಗುತ್ತಿತ್ತು. ಹೀಗಾಗಿ ಯಾವುದೇ ರಾಷ್ಟ್ರವು ತನ್ನ ರಾಷ್ಟ್ರಧ್ವಜದಲ್ಲಿ ನೇರಳೆ ಬಣ್ಣವನ್ನು ಬಳಸಿಲ್ಲ.
ಆದ್ರೆ ಡೊಮಿನಿಕಾದ ರಾಷ್ಟ್ರಧ್ವಜದಲ್ಲಿರುವ ಗಿಳಿಯ ಚಿತ್ರದಲ್ಲಿ ನಮಗೆ ನೆರಳೆ ಬಣ್ಣ ಕಾಣಸಿಗುತ್ತದೆ. ಸಂಪೂರ್ಣ ಹಸಿರು ಬಣ್ಣದಲ್ಲಿರುವ ಡೊಮಿನಕಾದ ರಾಷ್ಟ್ರಧ್ವಜದಲ್ಲಿ ಹಳದಿ ಕಪ್ಪು ಮತ್ತು ಬಿಳಿಯ ಬಣ್ಣದ ಎರಡು ಕ್ರಾಸ್ಗಳಿವೆ. ಅದರ ನಡುವೆ ಗಿಳಿಯ ಚಿತ್ರವಿದೆ. ಗಿಳಿಯ ಕುತ್ತಿಗೆಯ ಬಣ್ಣದಲ್ಲಿ ನೇರಳೆ ಬಣ್ಣವಿದೆ. ಇದೊಂದೇ ದೇಶ ತನ್ನ ರಾಷ್ಟ್ರಧ್ವಜದಲ್ಲಿ ಒಂದಿಷ್ಟಾದರೂ ನೇರಳೆ ಬಣ್ಣವನ್ನು ಉಪಯೋಗಿಸಿಕೊಂಡಿರುವ ದೇಶ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ