/newsfirstlive-kannada/media/post_attachments/wp-content/uploads/2023/11/Yuvi_Kohli.jpg)
ಇತ್ತೀಚೆಗೆ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ. ಭಾರತದ ಈ ಐತಿಹಾಸಿಕ ಗೆಲುವಿಗೆ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಅಭಿನಂದಿಸಿದ್ದಾರೆ.
ಇನ್ನು, ಟೀಮ್ ಇಂಡಿಯಾದ ಆಟಗಾರರನ್ನು ಯುವರಾಜ್ ಸಿಂಗ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಯುವಿ ಮತ್ತು ಕೊಹ್ಲಿ ನಡುವಿನ ಬಿರುಕು ರಿವೀಲ್ ಮಾಡಿದೆ. ಯುವರಾಜ್ ಸಿಂಗ್ ಹಾಕಿರೋ ಪೋಸ್ಟ್ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ಬಹಿರಂಗಗೊಳಿಸಿದೆ.
ಅಸಲಿಗೆ ಆಗಿದ್ದೇನು?
ಭಾರತ ತಂಡ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಈ ಬೆನ್ನಲ್ಲೇ ಯುವರಾಜ್ ಸಿಂಗ್ ಪೋಸ್ಟ್ ಒಂದು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಕೊಹ್ಲಿ ಹೊರತಾಗಿ ಎಲ್ಲರನ್ನೂ ಯವಿ ಟ್ಯಾಗ್ ಮಾಡಿದ್ದಾರೆ. ಈ ಬೆಳವಣಿಗೆ ಯುವಿ, ಕೊಹ್ಲಿ ಮಧ್ಯೆ ಬಿರುಕು ಮೂಡಿದೆ ಅನ್ನೋ ಚರ್ಚೆ ಹುಟ್ಟುಹಾಕಿದೆ.
ಯುವಿ ಪೋಸ್ಟ್ನಲ್ಲೇನಿದೆ?
ವ್ಹಾವ್ ಎಂತಹ ಅದ್ಭುತ ಪಂದ್ಯ. ರೋಹಿತ್ ಶರ್ಮಾ ಅದ್ಭುತ ನಾಯಕತ್ವದಿಂದ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಬಂದಿದೆ. ಭಾರತದ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದರು. ರವೀಂದ್ರ ಜಡೇಜ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಮಿಂಚಿದರು. ಮೊಹಮ್ಮದ್ ಶಮಿ ತಮ್ಮ ಸಾಮರ್ಥ್ಯವನ್ನು ತೋರಿದರು ಎಂದು ಪೋಸ್ಟ್ ಹಾಕಿದ್ದಾರೆ ಯುವಿ. ಈ ಪೋಸ್ಟ್ನಲ್ಲೂ ಎಲ್ಲೂ ಕೊಹ್ಲಿ ಹೆಸರು ಹಾಕಿಲ್ಲ.
ಇದನ್ನೂ ಓದಿ:ಕೇವಲ 16 ಎಸೆತದಲ್ಲಿ ಅರ್ಧ ಶತಕ, 28 ಎಸೆತದಲ್ಲಿ ಸೆಂಚುರಿ.. ಐಪಿಎಲ್ಗೆ ಎಬಿಡಿ ಮತ್ತೆ ಕಂಬ್ಯಾಕ್..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್