newsfirstkannada.com

WI vs IND: ಭಾರತಕ್ಕೆ ಡು ಆರ್ ಡೈ ಪಂದ್ಯ.. ಇಂದಾದ್ರೂ ಫಲಿಸುತ್ತಾ ಕ್ಯಾಪ್ಟನ್​ ಹಾರ್ದಿಕ್​ ಪಡೆಗೆ ಜಯ

Share :

Published August 8, 2023 at 2:19pm

Update August 8, 2023 at 2:15pm

  ಕೆರಿಬಿಯನ್ನರ ಜತೆ ಗೆಲುವಿನ ಖಾತೆ ಓಪನ್ ಮಾಡದ ಭಾರತ

  ವಿಂಡೀಸ್​ ಎದುರು ಗೆಲ್ಲಲು ಟೀಮ್​ ಇಂಡಿಯಾ ಕಸರತ್ತು

  ಈ ಟಿ20 ಸರಣಿ ಮೇಲೆ ಕ್ಯಾಪ್ಟನ್ ಹಾರ್ದಿಕ್​ ಭವಿಷ್ಯ ನಿರ್ಧಾರ

ಟೀಮ್ ಇಂಡಿಯಾ ಹೇಳಿಕೊಳ್ಳೋಕೆ ಮಾತ್ರ ವರ್ಲ್ಡ್ ನಂ.1 ಟೀಮಾ?. ತಂಡದ ಘರ್ಜನೆ ಏನಿದ್ರೂ ಪೇಪರ್​​​ಗೆ ಮಾತ್ರ ಸೀಮಿತನಾ?. ವಿಶ್ವಕಪ್​ಗೆ ಸಿದ್ಧವಾಗ್ತಿರೋ ಭಾರತ ಮತ್ತೆ ಪುಟಿದು ನಿಲ್ಲೋದು ಕಷ್ಟನಾ?. ಇಂತಹ ಹಲವು ಪ್ರಶ್ನೆಗಳು ಕ್ರಿಕೆಟ್ ಪ್ರಿಯರನ್ನ ಕಾಡಲು ಆರಂಭಿಸಿವೆ.

ಐಸಿಸಿ 3 ಮಾದರಿ ಕ್ರಿಕೆಟ್​​ ಱಂಕಿಂಗ್​​ನಲ್ಲಿ ಟಾಪ್​​​​​​​-3 ಪ್ಲೇಸ್​ನಲ್ಲಿ ಸ್ಥಾನ ಪಡೆದಿರೋ ಒನ್​ ಆ್ಯಂಡ್​​ ಒನ್ಲಿ ಟೀಮ್​ ಅಂದ್ರೆ ಅದು ಟೀಮ್ ಇಂಡಿಯಾ. ಏಕದಿನ ಒಂದು ಬಿಟ್ರೆ, ಟೆಸ್ಟ್ ಹಾಗೂ ಟಿ20ಯಲ್ಲಿ ಭಾರತ ತಂಡ ನಂ.1 ಪಟ್ಟ ಅಲಂಕರಿಸಿದೆ. ವಿಶ್ವದ ಬಲಿಷ್ಠ ಹಾಗೂ ಪ್ರತಿಷ್ಟಿತ ತಂಡವಾಗಿ ಗುರುತಿಸಿಕೊಂಡಿದೆ. ಇಂಥಾ ತಂಡ ಇದೀಗ ಹಿಂದೆಂದೂ ಕಾಣದಂತ ದೊಡ್ಡ ಮುಖಭಂಗವಾಗಿದೆ.

ಇಶನ್ ಕಿಶನ್, ಪಾಂಡ್ಯ, ಚಹಲ್

ಇದೇನಾ ಕ್ಯಾಪ್ಟನ್ಸಿ ಮಾಡುವ ರೀತಿ..?

ವಿಶ್ವ ಕ್ರಿಕೆಟ್​​ನ ಬಲಿಷ್ಠ ತಂಡವೆನಿಸಿರೋ ಭಾರತ ಹೋದ ಕಡೆಯಲೆಲ್ಲ ಗೆಲುವಿನ ಝಂಡಾ ನೆಡುತ್ತೆ ಅನ್ನೋದು ಫ್ಯಾನ್ಸ್​ ಲೆಕ್ಕಾಚಾರ. ಇಷ್ಟು, ಪವರ್​ಫುಲ್​ ಟೀಮ್ ಅನ್ನಿಸಿಕೊಂಡಿರೋ ಟೀಮ್​ ಇಂಡಿಯಾ,​ ಕೆರಿಬಿಯನ್ನರ ನಾಡಲ್ಲಿ ಗೆಲುವಿನ ಖಾತೆ ತೆರೆಯಲು ಹೆಣಗಾಡ್ತಿದೆ. ವಿಂಡೀಸ್​ ತಂಡವನ್ನ ಸುಲಭವಾಗಿ ಮಟ್ಟ ಹಾಕಬೇಕಿದ್ದ, ಮೆನ್​ ಇನ್​ ಬ್ಲೂ ಪಡೆ ಸತತ ಎರಡು ಟಿ20 ಪಂದ್ಯಗಳಲ್ಲಿ ಮುಗ್ಗರಿಸಿ ಕ್ರಿಕೆಟ್ ಲೋಕದ ಮುಜುಗರಕ್ಕೀಡಾಗಿದೆ.

ಆಟದಲ್ಲಿ ಸೋಲು-ಗೆಲುವು ಸಾಮಾನ್ಯ ನಿಜ. ಆದ್ರೆ, ಟಿ20 ಕ್ರಿಕೆಟ್​​ನ ನಂ.1 ತಂಡವೊಂದು ಬ್ಯಾಕ್​ ಟು ಬ್ಯಾಕ್​ ಪಂದ್ಯಗಳನ್ನ ಸೋಲೋದಂದ್ರೆ ಏನರ್ಥ?. 7 ವರ್ಷದ ಬಳಿಕ ಸರಣಿಯೊಂದರಲ್ಲಿ ಸತತ 2 ಪಂದ್ಯಗಳನ್ನ ಟೀಮ್​ ಇಂಡಿಯಾ ಸೋತಿರೋದು. ಅದು ವಿಶ್ವದರ್ಜೆಯ ಆಟಗಾರರು ತಂಡದಲ್ಲಿದ್ದಾಗ.

ಟೀಮ್​ ಇಂಡಿಯಾ ಈ ಫೇಲ್ಯೂರ್​​ಗೆ ಕ್ಯಾಪ್ಟನ್ ಹಾರ್ದಿಕ್​ ಪಾಂಡ್ಯ ಹೊಣೆಗಾರ ಅಂದ್ರೆ ತಪ್ಪಾಗಲ್ಲ. ನಾಯಕನಾಗಿ ಹಾರ್ದಿಕ್​ ಮಾಡಿಕೊಂಡಿರುವ ಯಡವಟ್ಟುಗಳು ಸೋಲಿಗೆ ಗುರಿ ಮಾಡಿವೆ. ಐಪಿಎಲ್​​ನಲ್ಲಿ ಗುಜರಾತ್ ಟೈಟನ್ಸ್​​​ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿ ಶಹಬ್ಬಾಸ್​ ಗಿರಿ ಗಿಟ್ಟಿಸಿಕೊಂಡ ಈ ಹಾರ್ದಿಕ್​​ ತಂಡವನ್ನ ಗೆಲುವಿನ ಟ್ರ್ಯಾಕ್​ಗೆ ತರಲು ಇನ್ನಿಲ್ಲದ ಪರದಾಟ ನಡೆಸಿದ್ದಾರೆ.

ಮಾತು ಸಾಕು, ಕಮ್​ಬ್ಯಾಕ್​ ಬಗ್ಗೆ ಗಮನ ಹರಿಸಿ..!

ಟಿ20 ತಂಡದ ಚುಕ್ಕಾಣಿ ಹಿಡಿದಿರೋ ಪಾಂಡ್ಯರನ್ನ ದಿಗ್ಗಜ ಧೋನಿ ಕ್ಯಾಪ್ಟನ್ಸಿ ಹೋಲಿಕೆ ಮಾಡಲಾಗ್ತಿತ್ತು. ಆದ್ರೆ ಈಗ ಅವರ ಸ್ಮಾರ್ಟ್​ ಕ್ಯಾಪ್ಟನ್ಸಿ ಈಗ ಪ್ರಶ್ನಾರ್ಹವಾಗಿದೆ. ಅವರು ತೆಗೆದುಕೊಂಡ ಕೆಲ ಬ್ಲಂಡರ್ ಡಿಶಿಷನ್ಸ್​​ ಭಾರತದ ಗೆಲುವನ್ನ ಕಸಿದಿದೆ. ಚಹಲ್​​​ ವಿಕೆಟ್ ಟೇಕಿಂಗ್​​ ಸ್ಪಿನ್ನರ್ ಅನ್ನೋದು ಎಲ್ಲರಿಗೂ ಗೊತ್ತು. ಸಾಲಿಡ್​ ರಿಧಮ್​ನಲ್ಲೂ ಇದ್ರೂ ಆದ್ರೆ, ಪಾಂಡ್ಯ ಮೊದಲೆರಡು ಪಂದ್ಯಗಳಲ್ಲಿ ಚಹಲ್​ಗೆ 4 ಓವರ್​​ ಪೂರ್ಣ ಬೌಲಿಂಗ್ ಅನ್ನೇ ನೀಡಿಲ್ಲ.

ಎರಡನೇ ಟಿ20ಯಲ್ಲೂ ಅಷ್ಟೇ ಚಹಲ್​, 3ನೇ ಓವರ್​ನಲ್ಲಿ ಮ್ಯಾಜಿಕ್​ ಮಾಡಿದ್ರು. ಆದ್ರೆ, 4ನೇ ಓವರ್​​ ಬೌಲಿಂಗ್​ ಮಾಡೋ ಸೌಭಾಗ್ಯ ಸಿಗಲಿಲ್ಲ. ಕ್ಯಾಪ್ಟನ್​ ಹಾರ್ದಿಕ್​ ತೆಗೆದುಕೊಂಡ ಈ ನಿರ್ಧಾರ ಕೂಡ ಸೋಲಿಗೆ ಒಂದು ಕಾರಣ. ಇದಿಷ್ಟೇ ಅಲ್ಲ.. 2 ನೇ ಟಿ20 ಪಂದ್ಯದಲ್ಲಿ ಆಲ್​​ರೌಂಡರ್​ ಅಕ್ಷರ್​ ಪಟೇಲ್​ಗೆ ಬೌಲಿಂಗ್​ ಅನ್ನೇ ನೀಡಲಿಲ್ಲ.. ಇದ್ಯಾಕೆ ಅನ್ನೋ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

ಆಡಿದ 2 ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಕನಿಷ್ಠ ಹೋರಾಟದ ಮನೋಭಾವ ತೋರಿಸಲಿಲ್ಲ. ಆದ್ರೂ, ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಆ್ಯಟಿಟ್ಯೂಡ್​ ಹಾರ್ದಿಕ್​ ಪಾಂಡ್ಯದು. ಪಂದ್ಯ ಬಳಿಕ ಕೇಳಿದ್ರೆ, ನಾವು ಇನ್ನೂ ಕಲಿಕೆಯ ಹಂತದಲ್ಲಿದ್ದೇವೆ ಅಂತಾರೆ. ಅಲ್ಲ ಈ ತಂಡವನ್ನ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕಣಕ್ಕಿಳಿಸಿದ್ರೆ ಏನ್​ ಗತಿ?.

ಟಿ20 ಸ್ಟಾರ್​​ಗಳ ಆಟ ಐಪಿಎಲ್​ಗೆ ಸೀಮಿತಾನ.?

ಹಾರ್ದಿಕ್​ ಪಾಂಡ್ಯ ಸೈನ್ಯದಲ್ಲಿ ಯಾರಿಲ್ಲ ಹೇಳಿ ಬಿಗ್ ಹಿಟ್ಟರ್​​, ಮ್ಯಾಚ್ ವಿನ್ನರ್​​​ ಹಾಗೂ ಗೇಮ್​​​​ಚೇಂಜರ್​​​​ನಂತಹ ಆಟಗಾರರಿದ್ದಾರೆ. ಶುಭ್​​ಮನ್​ ಗಿಲ್​​​, ಸಂಜು ಸ್ಯಾಮ್ಸನ್​​​, ಸೂರ್ಯಕುಮಾರ್​ ಯಾದವ್​ ಹಾಗೂ ಹಾರ್ದಿಕ್​​ರಂತ ಐಪಿಎಲ್​​​ ಸ್ಟಾರ್​ಗಳ ದಂಡೇ ಇದೆ. ಆದ್ರೆ, ಆಟ ಪರ್ಫಾಮೆನ್ಸ್​ ಮಾತ್ರ ಝೀರೋ. ಐಪಿಎಲ್​ ಅಖಾಡದಲ್ಲಿ ಅಬ್ಬರಿಸುವ ಇವರು ವಿಂಡೀಸ್ ವಿರುದ್ಧ ರನ್​ ಗಳಿಸಲು ತಿಣುಕಾಡ್ತಿದ್ದಾರೆ.

ಸೂರ್ಯಕುಮಾರ್ ಯಾದವ್, ಕ್ಯಾಪ್ಟನ್​ ಪಾಂಡ್ಯ

ಇಂದು ಸಿಡಿದೇಳದಿದ್ರೆ ಸರಣಿ ಸೋಲಿನ ಮುಖಭಂಗ ಪಕ್ಕಾ.!

ಇಂದು ಗಯಾನದ ಪ್ರಾವಿಡೆನ್ಸ್​ನಲ್ಲಿ ನಡೆಯುವ ಪಂದ್ಯ ಭಾರತಕ್ಕೆ ಡು ಆರ್ ಡೈ. ಪಂದ್ಯ ಗೆಲ್ಲದೇ ಬೇರೆ ವಿಧಿಯಿಲ್ಲ. ಒಂದು ವೇಳೆ ಇಂದು ಕೂಡ ಭಾರತ ಮುಗ್ಗರಿಸಿದ್ರೆ, ಸರಣಿ ಸೋಲಿನ ಮುಖಭಂಗಕ್ಕೆ ತುತ್ತಾಗುತ್ತೆ. ಕೊನೆಯ ಮೂರು ಪಂದ್ಯಗಳಲ್ಲಿ ಗೆಲುವು ಕಾಣಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಆಟಗಾರರು ಎಚ್ಚೆತ್ತುಕೊಂಡು ಆಡಬೇಕಿದೆ. ಅಟ್ಲೀಸ್ಟ್​​ ಹೋರಾಟದ ಮನೋಭಾವವನ್ನಾದ್ರೂ ತೋರಿಸಬೇಕಿದೆ..

ಟಿ20 ಸ್ಪೆಷಲಿಸ್ಟ್​ಗಳಾದ ವಿಂಡೀಸ್​​ ಪಡೆಯನ್ನ ಮಣಿಸೋದು ಅಂದುಕೊಂಡಷ್ಟು ಸುಲಭವಿಲ್ಲ. ಹಾಗಂತ ಅಸಾಧ್ಯವೇನು ಅಲ್ಲ. ಆ್ಯಟಿಟ್ಯೂಡ್​​​ ಬದಲಿಸಿಕೊಳ್ಳೋದ್ರ ಜೊತೆ ಶಕ್ತಿ ಮೀರಿ ಹೋರಾಟ ನಡೆಸಬೇಕು. ಹಾಗಾದಲ್ಲಿ ಮಾತ್ರ ಇಂಡಿಯಾ ಸರಣಿ ಜೀವಂತವಾಗಿರಿಸಿಕೊಳ್ಳಲು ಸಾಧ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WI vs IND: ಭಾರತಕ್ಕೆ ಡು ಆರ್ ಡೈ ಪಂದ್ಯ.. ಇಂದಾದ್ರೂ ಫಲಿಸುತ್ತಾ ಕ್ಯಾಪ್ಟನ್​ ಹಾರ್ದಿಕ್​ ಪಡೆಗೆ ಜಯ

https://newsfirstlive.com/wp-content/uploads/2023/08/SURYA_KUMAR_ISHAN.jpg

Load More