newsfirstkannada.com

ಟಾಸ್​ ಗೆದ್ದ ಹಾರ್ದಿಕ್​ ಪಾಂಡೆ, ಬ್ಯಾಟಿಂಗ್​ ಆಯ್ಕೆ.. ಟೀಮ್​ ಇಂಡಿಯಾದ ಪ್ಲೇಯಿಂಗ್​- 11ನಲ್ಲಿ ಯಾಱರಿಗೆ ಸ್ಥಾನ?

Share :

Published August 13, 2023 at 7:41pm

Update August 13, 2023 at 7:44pm

    ಕುತೂಹಲ ಮೂಡಿಸಿದ ಟಿ20 ಸರಣಿಯ ಕೊನೆಯ ಪಂದ್ಯ

    ಇವತ್ತಿನ ಪಂದ್ಯ ಗೆದ್ದ ತಂಡಕ್ಕೆ ಸರಣಿಯ ವಿಜಯಮಾಲೆ..!

    ಜೈಸ್ವಾಲ್​, ಗಿಲ್​, ತಿಲಕ್​, ಸೂರ್ಯ ತಂಡದ ಬ್ಯಾಟಿಂಗ್​ ಬಲ

ವೆಸ್ಟ್​ ಇಂಡೀಸ್​ ವಿರುದ್ಧದ 5ನೇ ಮತ್ತು ಕೊನೆಯ ಟಿ20 ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್​ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತದ ಪರ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್​ ಓಪರನ್ಸ್​ ಆಗಿ ಕ್ರೀಸ್​ಗೆ ಇಳಿಯಲಿದ್ದಾರೆ. ತಿಲಕ್ ವರ್ಮಾ, ಸೂರ್ಯಕುಮಾರ್​, ಸಂಜು ಸ್ಯಾಮ್ಸನ್​ ಮಿಡಲ್ ಆರ್ಡರ್​ನಲ್ಲಿ ಬ್ಯಾಟ್​ ಬೀಸಲಿದ್ದಾರೆ. ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಆಲ್​ ರೌಂಡರ್​ಗಳಾಗಿ ಕಣಕ್ಕೆ ಇಳಿಯಲಿದ್ದು ಭಾರತದ ಪರ ಕುಲ್​ದೀಪ್ ಯಾದವ್, ಚಹಲ್​ ಸ್ಪಿನ್ನರ್​ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದು ಎದುರಾಳಿಯನ್ನು ಕಟ್ಟಿ ಹಾಕುವ ಪ್ಲಾನ್​ನಲ್ಲಿದ್ದಾರೆ. ಇನ್ನು ವಿಂಡೀಸ್​ ಕೂಡ ಟೆಸ್ಟ್​ ಹಾಗೂ ಏಕದಿನ ಸರಣಿಗಳನ್ನ ಸೋತಿದ್ದು ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.

ಕ್ಯಾಪ್ಟನ್​ ರೋವಮನ್ ಪೊವೆಲ್, ವಿಕೆಟ್​ ಕೀಪರ್ ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್ ವಿಂಡೀಸ್​ ಪರ ಉತ್ತಮ ಬ್ಯಾಟಿಂಗ್ ಲೈನ್​ ಹೊಂದಿದ್ದಾರೆ. ಪೊವೆಲ್​ರ ಸಾರಥ್ಯದ ವಿಂಡೀಸ್​ ಪಡೆ ಮೊದಲ 2 ಪಂದ್ಯಗಳನ್ನು ಗೆದ್ದು ಇನ್ನೇನು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು. ಆದರೆ ನಿರ್ದಿಷ್ಟ ಹೋರಾಟದಿಂದ 3 ಮತ್ತು 4ನೇ ಪಂದ್ಯವನ್ನು ಹಾರ್ದಿಕ್​ ಸಾರಥ್ಯದ ಟೀಮ್​ ಇಂಡಿಯಾ ಗೆದ್ದುಕೊಂಡಿತ್ತು. ಇದು ವಿಂಡೀಸ್​ಗೆ ಭಾರೀ ಆಘಾತವನ್ನುಂಟು ಮಾಡಿದೆ. ಇದರಿಂದ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದು ಸದ್ಯ ನಡೆಯುತ್ತಿರುವ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಕೈವಶವಾಗಲಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್​ ಇಲೆವೆನ್​:

ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಸೂರ್ಯಕುಮಾರ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್​ದೀಪ್​ ಸಿಂಗ್, ಚಹಲ್, ಮುಖೇಶ್ ಕುಮಾರ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್​ ಗೆದ್ದ ಹಾರ್ದಿಕ್​ ಪಾಂಡೆ, ಬ್ಯಾಟಿಂಗ್​ ಆಯ್ಕೆ.. ಟೀಮ್​ ಇಂಡಿಯಾದ ಪ್ಲೇಯಿಂಗ್​- 11ನಲ್ಲಿ ಯಾಱರಿಗೆ ಸ್ಥಾನ?

https://newsfirstlive.com/wp-content/uploads/2023/08/WI_IND_TOSS.jpg

Load More