/newsfirstlive-kannada/media/post_attachments/wp-content/uploads/2025/07/Wiaan_Mulder.jpg)
ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯವಾಡುತ್ತಿದ್ದು ಒಂದೇ ಇನ್ನಿಂಗ್ಸ್ನಲ್ಲೇ ಕೇವಲ 5 ವಿಕೆಟ್ಗೆ 626 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಆದರೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಕ್ಯಾಪ್ಟನ್ಗೆ 400 ರನ್‌ಗಳ ಬಾರಿಸೋ ಅವಕಾಶ ಇದ್ದರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರೋದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ನಾಯಕ ಟಾಸ್ ಗೆದ್ದು ದಕ್ಷಿಣ ಆಫ್ರಿಕಾದ ಆಟಗಾರರನ್ನ ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಅಕ್ಷರಶಃ ಅಬ್ಬರಿಸಿದರು. ಇದರಲ್ಲಿ ಆಫ್ರಿಕಾದ ನಾಯಕ ವಿಯಾನ್ ಮುಲ್ಡರ್, ಟೆಸ್ಟ್ ಪಂದ್ಯವಾದರೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಕೇವಲ 334 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 49 ಅತ್ಯಮೂಲ್ಯ ಸೊಗಸಾದ ಬೌಂಡರಿಗಳಿಂದ ಬರೋಬ್ಬರಿ 367 ರನ್ಗಳನ್ನ ಬಾರಿಸಿದ್ದಾರೆ.
ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 5 ವಿಕೆಟ್ಗೆ 626 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿದೆ. ಆದರೆ ಕ್ಯಾಪ್ಟನ್ ವಿಯಾನ್ ಮುಲ್ಡರ್ ಅವರು ಇನ್ನು ಕೇವಲ 34 ರನ್ ಬಾರಿಸಿದ್ದರೇ ವೆಸ್ಟ್ ಇಂಡೀಸ್ನ ದಂಥಕತೆ ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆ ಬ್ರೇಕ್ ಮಾಡಬಹುದಿತ್ತು. ಆದರೆ ನಾಯಕನಾಗಿಯೂ ವಿಯಾನ್ ಮುಲ್ಡರ್ ಅವರು ತಮ್ಮ ಸ್ವಾರ್ಥಕ್ಕೆ ಆಡದೇ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮುಲ್ಡರ್ ರನ್ ಬಾರಿಸುತ್ತಿದ್ದ ಪರಿ ನೋಡಿದರೆ ಅರ್ಧ ಗಂಟೆಯಲ್ಲಿ 400 ರನ್‌ಗಳ ಗಡಿ ದಾಟಿಬಿಡುತ್ತಿದ್ದರು. ದಕ್ಷಿಣ ಆಫ್ರಿಕಾ ತಂಡ ಇಷ್ಟು ರನ್ ಬಾರಿಸಿದ್ದು ಕೇವಲ 4 ಸೆಷನ್‌ಗಳ ಆಟದಲ್ಲಿ. ಇನ್ನೂ 3 ಮುಕ್ಕಾಲು ದಿನಗಳ ಆಟ ಬಾಕಿ ಇರುವಾಗ, 367 ರನ್ ಹೊಡೆದಿರುವಾಗ ಡಿಕ್ಲೇರ್ ಮಾಡಿಕೊಳ್ಳುತ್ತಾನೆಂದರೆ ಮುಲ್ಡರ್ ಎಷ್ಟು ನಿಸ್ವಾರ್ಥಿಯಾಗಿರಬಹುದು?. ಬ್ರಿಯಾನ್ ಲಾರಾನ 400 ರನ್‌ಗಳ ದಾಖಲೆ ಮುರಿದು ಹೊಸ ದಾಖಲೆ ಬರೆಯುವ ಅಪರೂಪದ ಅವಕಾಶ ಮುಲ್ಡರ್ ಮುಂದೆ ಇದ್ದರೂ ಅದನ್ನ ಮಾಡಲಿಲ್ಲ.
ಇದನ್ನೂ ಓದಿ:ಇಂಗ್ಲೆಂಡ್ ತಂಡದ ದೀಪ ಆರಿಸಿದ ಆಕಾಶ್ ದೀಪ್.. ಭಾರೀ ರನ್‌ಗಳ ಅಂತರದಿಂದ ಗಿಲ್ ಪಡೆಗೆ ಜಯ
ಜಿಂಬಾಬ್ವೆಯ ದುರ್ಬಲ ಬ್ಯಾಟಿಂಗ್ ಲೈನ್‌ಅಪ್ ಮತ್ತು ದಕ್ಷಿಣ ಆಫ್ರಿಕಾದ ಬೌಲಿಂಗ್ ಸಾಮರ್ಥ್ಯ ನೋಡಿದರೆ ಇನ್ನೆರಡು ದಿನದಲ್ಲಿ ಟೆಸ್ಟ್ ಪಂದ್ಯವೇ ಮುಗಿದುಹೋಗಬಹುದು. ನಿಜಕ್ಕೂ ಇಷ್ಟು ಅವಸರದಲ್ಲಿ ಡಿಕ್ಲೇರ್ ಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ಬಹುಶಃ ಬೇರೆ ಯಾರೋ ನಾಯಕನಾಗಿದ್ರೆ ಮುಲ್ಡರ್ ಇಂತಹ ದಾಖಲೆಯ ಹೊಸ್ತಿಲಲ್ಲಿ ಇರುವಾಗ ಡಿಕ್ಲೇರ್ ನಿರ್ಧಾರ ಕೈಗೊಂಡಿದ್ದರೆ, ಆತ ಎದುರಿಸಬಹುದಾಗಿದ್ದ ಟೀಕೆಗಳು ಊಹಿಸಲೂ ಸಾಧ್ಯವಿರಲಿಲ್ಲ.
ಅದರಲ್ಲಿಯೂ ದಾಖಲೆಗಳನ್ನಷ್ಟೇ ಲೆಕ್ಕಹಾಕುವ ಅಭಿಮಾನಿಗಳಿರುವ ಭಾರತ ಕ್ರಿಕೆಟ್ ತಂಡದಲ್ಲಿ ನಡೆದಿದ್ದರೆ ಕಥೆನೇ ಬೇರೆ ಇರುತ್ತಿತ್ತು. ಆದರಿಲ್ಲಿ ಸ್ವತಃ ನಾಯಕನಾದ ಮುಲ್ಡರ್ ನಿರ್ಧಾರ ತೆಗೆದುಕೊಂಡು ನಿಜಕ್ಕೂ ಅಚ್ಚರಿ ಮೂಡಿಸಿದ್ದಾನೆ. ಇದರಿಂದ ಫ್ಯಾನ್ಸ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೇವಲ ಅರ್ಧ ಗಂಟೆ ಬ್ಯಾಟ್ ಬೀಸಿದ್ರೆ 400 ರನ್‌ಗಳ ಗಡಿ ಕ್ಯಾಪ್ಟನ್ ವಿಯಾನ್ ಮುಲ್ಡರ್ ಅವರು ದಾಟಿ ದೊಡ್ಡದಾದ ರೆಕಾರ್ಡ್ ಮಾಡುತ್ತಿದ್ದರು. ಆದರೆ ಅಂತಹ ಅವಕಾಶವನ್ನ ಕೈಚೆಲ್ಲಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ