ಆಂಗ್ಲರಿಗೆ ನಡುಕ ಹುಟ್ಟಿಸಿದ ರಿಷಭ್ ಪಂತ್​​.. ವಿಕೆಟ್​ ಕೀಪರ್​ ಕೌಂಟರ್​​ ಅಟ್ಯಾಕ್​ ಹೇಗಿರುತ್ತೆ?

author-image
Bheemappa
Updated On
ಆಂಗ್ಲರಿಗೆ ನಡುಕ ಹುಟ್ಟಿಸಿದ ರಿಷಭ್ ಪಂತ್​​.. ವಿಕೆಟ್​ ಕೀಪರ್​ ಕೌಂಟರ್​​ ಅಟ್ಯಾಕ್​ ಹೇಗಿರುತ್ತೆ?
Advertisment
  • ಪಂತ್​ನ ಬಲೆಗೆ ಬೀಳಿಸಲು ಇಂಗ್ಲೆಂಡ್​ ಸ್ಪೆಷಲ್​ ಪ್ಲಾನ್..!
  • ಎರಡು ಇನ್ನಿಂಗ್ಸ್​ಗಳಲ್ಲೂ ಸೆಂಚುರಿ ಬಾರಿಸಿರುವ ಪಂತ್​​
  • 2ನೇ ಟೆಸ್ಟ್​ಗೂ ಮೊದಲೇ ಎದುರಾಳಿ ಪಡೆಯಲ್ಲಿ ಟೆನ್ಶನ್​

ಇಂಗ್ಲೆಂಡ್​​ನಲ್ಲಿ ಟೀಮ್​ ಇಂಡಿಯಾದ ಡೇರ್​​ ಡೆವಿಲ್​ ರಿಷಭ್​ ಪಂತ್​ ಘರ್ಜನೆ ಜೋರಾಗಿದೆ. ಮೊದಲ ಟೆಸ್ಟ್​​ನಲ್ಲಿ ಗೆದ್ದರೂ ಕೂಡ ಪಂತ್​ ಪರಾಕ್ರಮ ತೋರಿದ ರೀತಿಗೆ ಆಂಗ್ಲ ಪಡೆ ಬೆಚ್ಚಿ ಬಿದ್ದಿದೆ. ಬಝ್​​ಬಾಲ್​​ ಅಸ್ತ್ರ ಪ್ರಯೋಗಿಸಿದ ಆಂಗ್ಲರಿಗೆ ಪಂತ್​ ತನ್ನ ಫೆಂಟಾಸ್ಟಿಕ್​ ಆಟದಿಂದಲೇ ಕೌಂಟರ್​ ಕೊಟ್ಟರು. ಪಂತ್​ ಆಟ 2ನೇ ಟೆಸ್ಟ್​ಗೂ ಮುನ್ನ ಇಂಗ್ಲೆಂಡ್​ನ ಕ್ಯಾಂಪ್​ನ ಟೆನ್ಶನ್​ ಹೆಚ್ಚಿಸಿದೆ.

ಇಂಡೋ-ಇಂಗ್ಲೆಂಡ್​​ 2ನೇ ಟೆಸ್ಟ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಬುಧವಾರದಿಂದ ಬರ್ಮಿಂಗ್​​ಹ್ಯಾಮ್​​ನ ಎಡ್ಜ್​​​ಬ್ಯಾಸ್ಟನ್​ ಟೆಸ್ಟ್​​ ಕದನ ಆರಂಭವಾಗಲಿದ್ದು, ಟೀಮ್​ ಇಂಡಿಯಾದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೊದಲ ಟೆಸ್ಟ್​ ಸೋತಿರೋ ಶುಭ್​ಮನ್​ ಗಿಲ್​ ಪಡೆ 2ನೇ ಟೆಸ್ಟ್​​ನಲ್ಲಿ ಪುಟಿದೇಳೋ ಲೆಕ್ಕಾಚಾರ ಹಾಕ್ತಿದೆ. ಅತ್ತ ಮೊದಲ ಟೆಸ್ಟ್​ ಗೆದ್ದಿದ್ರೂ ಇಂಗ್ಲೆಂಡ್​ ತಂಡದಲ್ಲಿ ನೆಮ್ಮದಿಯಿಲ್ಲದಂತಾಗಿದೆ. ಡೇರ್​​​ಡೆವಿಲ್​ ರಿಷಭ್​ ಪಂತ್​ ​ಆಂಗ್ಲರ ನೆಮ್ಮದಿ ಕೆಡಿಸಿದ್ದಾರೆ.

publive-image

ರೆಡ್​ ಹಾಟ್​ ಫಾರ್ಮ್​ನಲ್ಲಿ ಪಂತ್​.! ಇಂಗ್ಲೆಂಡ್​ಗೆ ಟೆನ್ಶನ್​.!

ಲೀಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅಬ್ಬರಿಸಿದ ರಿಷಭ್​ ಪಂತ್​​ ಇಂಗ್ಲೆಂಡ್​ ಬೌಲರ್​​ಗಳ ಬೆವರಿಳಿಸಿದರು. ಪಂತ್​ ಅಟ್ಯಾಕಿಂಗ್​​ ಆಟಕ್ಕೆ ಬ್ರೇಕ್​ ಹಾಕೋದು ಹೇಗೆ ಅನ್ನೋದು ಗೊತ್ತಾಗದೇ ಇಂಗ್ಲೆಂಡ್​ ಕ್ಯಾಪ್ಟನ್​​ ಬೆನ್​ ಸ್ಟೋಕ್ಸ್​ಗೆ ಪರದಾಡಿದರು. ಎರಡೂ ಇನ್ನಿಂಗ್ಸ್​ಗಳಲ್ಲಿ ಆಂಗ್ಲರನ್ನ ಅಟ್ಟಾಡಿಸಿದ ರಿಷಭ್​ ಪಂತ್​ ಶತಕ ಸಿಡಿಸಿ ಮಿಂಚಿದರು. ಪಂತ್​ ಮೊದಲೇ ಡೇಂಜರ್​​, ಅಂತಾದ್ರಲ್ಲಿ ರೆಡ್​​ ಹಾಟ್​ ಫಾರ್ಮ್​ನಲ್ಲಿ ಬೇರೆ ಇದ್ದಾರೆ. ಇದೇ ಕಾರಣಕ್ಕೆ ನೋಡಿ ಇಂಗ್ಲೆಂಡ್​​​ಗೆ ಟೆನ್ಶನ್​ ಶುರುವಾಗಿರೋದು.

ಎಡ್ಜ್​​​ಬ್ಯಾಸ್ಟನ್​​ನಲ್ಲಿ ಪಂತ್​ ಪರಾಕ್ರಮ.. ಆಂಗ್ಲರಿಗೆ ನಡುಕ.!

ಇಂಗ್ಲೆಂಡ್​ ತಂಡದ ಟೆನ್ಶನ್​ ಹಿಂದಿರೋ ಮೊದಲ ರೀಸನ್​ ಇದೇ ನೋಡಿ. ಮೊದಲ ಟೆಸ್ಟ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ರಿಷಭ್​ ಪಂತ್​ 2ನೇ ಟೆಸ್ಟ್​ನಲ್ಲೂ ಫೆಂಟಾಸ್ಟಿಕ್​ ಆಟವಾಡೋ ಭರವಸೆ ಹುಟ್ಟು ಹಾಕಿದ್ದಾರೆ. ಒಂದೆಡೆ ಸಾಲಿಡ್​​ ಟಚ್​​​ನಲ್ಲಿರೋ ರಿಷಭ್​ ಪಂತ್​, 2ನೇ ಟೆಸ್ಟ್​​ ನಡೆಯೋ ಎಡ್ಜ್​​ಬ್ಯಾಸ್ಟನ್​ ಸ್ಟೇಡಿಯಂನಲ್ಲಿ ಪರಾಕ್ರಮ ಮೆರೆದಿದ್ದಾರೆ. ಈ ಅದ್ಭುತ ಆಟದ ಇತಿಹಾಸ ಆಂಗ್ಲರನ್ನ ಕಾಡ್ತಿದೆ.

ಎಡ್ಜ್​ಬ್ಯಾಸ್ಟನ್​ನಲ್ಲಿ ರಿಷಭ್​ ಪಂತ್​

ಎಡ್ಜ್​​ಬ್ಯಾಸ್ಟನ್​ನಲ್ಲಿ ಪಂತ್​ 2 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ದಾರೆ. ಎರಡೂ ಇನ್ನಿಂಗ್ಸ್​​ಗಳಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿರೋ ಪಂತ್​, 103.04ರ ಸರಾಸರಿಯಲ್ಲಿ 203 ರನ್​ಗಳಿಸಿದ್ದಾರೆ. 1 ಶತಕ, 1 ಹಾಫ್​​ ಸೆಂಚುರಿ ಸಿಡಿಸಿದ್ದಾರೆ.

ಇಂಗ್ಲೆಂಡ್​ ಕಂಡಿಷನ್ಸ್​ನಲ್ಲಿ ಪಂತ್​ ಫೆಂಟಾಸ್ಟಿಕ್​.!

ಮೊದಲ ಟೆಸ್ಟ್ ನಡೆದಿರೋ ಲೀಡ್ಸ್​​ ಮಾತ್ರವಲ್ಲ ಅಥವಾ 2ನೇ ಟೆಸ್ಟ್​ ನಡೆಯೋ ಎಡ್ಜ್​​ಬ್ಯಾಸ್ಟನ್​ ಮಾತ್ರವಲ್ಲ. ಇಂಗ್ಲೆಂಡ್​​ನ ಟಫ್​ ಪ್ಲೇಯಿಂಗ್​ ಕಂಡಿಷನ್ಸ್​ನಲ್ಲಿ ಆಡೋದು ಅಂದ್ರೆನೇ ಪಂತ್​ಗೆ ಫೇವರಿಟ್​​. ಇಂಗ್ಲೆಂಡ್​ನ ಪೇಸ್​​ & ಬೌನ್ಸಿ ಕಂಡಿಷನ್ಸ್​ನಲ್ಲಿ ಬ್ಯಾಟಿಂಗ್​ ನಡೆಸೋಕೆ ದಿಗ್ಗಜ ಆಟಗಾರರೇ ಪರದಾಡಿದ ನಿದರ್ಶನಗಳಿವೆ. ಆದ್ರೆ, ಪಂತ್​​ ಮಾತ್ರ ಇಲ್ಲಿ ಸಲೀಸಾಗಿ ರನ್​ಗಳಿಸ್ತಾರೆ. ಬ್ಯಾಟಿಂಗ್​ ಹಾಗೂ ಕಾನ್ಫಿಡೆನ್ಸ್​​ ಲೆವೆಲ್​ನಲ್ಲಿ ಇರುತ್ತೆ. ಆಂಗ್ಲರ ನಾಡಿನ ಟ್ರ್ಯಾಕ್​ ರೆಕಾರ್ಡ್​​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.!

ಆಂಗ್ಲರ ನಾಡಲ್ಲಿ ಪಂತ್​ ಬ್ಯಾಟಿಂಗ್​​​​

ಇಂಗ್ಲೆಂಡ್​​ನಲ್ಲಿ ಈವರೆಗೆ 19 ಇನ್ನಿಂಗ್ಸ್​ಗಳಲ್ಲಿ ರಿಷಭ್​​ ಪಂತ್​​ ಬ್ಯಾಟಿಂಗ್​ ನಡೆಸಿದ್ದಾರೆ. 42.52ರ ಸರಾಸರಿಯಲ್ಲಿ 808 ರನ್​ಗಳಿಸಿದ್ದಾರೆ. 2 ಹಾಫ್​ ಸೆಂಚುರಿ 4 ಸೆಂಚುರಿ ಸಿಡಿಸಿ ಶೈನ್​ ಆಗಿದ್ದಾರೆ.

ಇದನ್ನೂ ಓದಿ:RCB ಬೌಲರ್ ಯಶ್​ ದಯಾಳ್​​ ಅರೆಸ್ಟ್ ಆಗ್ತಾರಾ, ಎಫ್​ಐಆರ್​ನಲ್ಲಿ ಏನಿದೆ..? ಸಿಎಂ ಕಚೇರಿಯಿಂದ ತನಿಖೆಗೆ ಆದೇಶ!

publive-image

ದಿಗ್ಗಜರ ದಾಖಲೆ ಮೇಲೆ ರಿಷಭ್​ ಪಂತ್ ಕಣ್ಣು.!

ಮೊದಲ ಟೆಸ್ಟ್​​ನ ಎರಡೂ ಇನ್ನಿಂಗ್ಸ್​​​ಗಳಲ್ಲಿ ಶತಕ ಸಿಡಿಸಿ ಮಿಂಚಿರುವ ರಿಷಭ್​ ಪಂತ್​ ದಿಗ್ಗಜರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಎಡ್ಜ್​​ಬ್ಯಾಸ್ಟನ್​ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ರೆ, ಸೆಂಚುರಿ ಹ್ಯಾಟ್ರಿಕ್​ ಬಾರಿಸಲಿದ್ದಾರೆ. ಈ ಮೂಲಕ ದಿಗ್ಗಜರ ಸಾಲು ಸೇರಲಿದ್ದಾರೆ. ಡಾನ್​ ಬ್ರಾಡ್ಮನ್​, ರಾಹುಲ್​ ದ್ರಾವಿಡ್​, ಬ್ರಯಾನ್​ ಲಾರಾ ಬಳಿಕ ಈ ಸಾಧನೆ ಮಾಡಿದ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಗೆ ಪಂತ್​ ಪಾತ್ರರಾಗಲಿದ್ದಾರೆ.

ಅದ್ಭುತ ರಿಧಮ್​​ನಲ್ಲಿರೋ ರಿಷಭ್​ ಪಂತ್​ 2ನೇ ಟೆಸ್ಟ್​​ನಲ್ಲೂ ಧಮ್​ದಾರ್​ ಬ್ಯಾಟಿಂಗ್​ ನಡೆಸೋಕೆ ಸಜ್ಜಾಗಿದ್ದಾರೆ. ಆದ್ರೆ, 2ನೇ ಟೆಸ್ಟ್​ನಲ್ಲಿ ಪಂತ್​ನ ಬಲೆಗೆ ಬೀಳಿಸಲು ಇಂಗ್ಲೆಂಡ್​ ಸ್ಪೆಷಲ್​ ಪ್ಲಾನ್​ನೊಂದಿಗೆ ಕಣಕ್ಕಿಳಿಯೋದು ಪಕ್ಕಾ.! ಇದು ಪಂತ್​ ಗೊತ್ತಿರೋ ವಿಚಾರವೇ. ಹೀಗಾಗಿ ಇಂಗ್ಲೆಂಡ್​ನ ಹೊಸ ತಂತ್ರಕ್ಕೆ ಪಂತ್​ ಕೌಂಟರ್​​ ಅಟ್ಯಾಕ್​ ಹೇಗಿರುತ್ತೆ.? ಅನ್ನೋದು ಸದ್ಯದ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment