Advertisment

40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ.. ಆಗಲೂ ಮಾತನಾಡದೇ ಜೀವ ಬಿಟ್ಟ ಪತಿ..

author-image
Ganesh
Updated On
40 ವರ್ಷಗಳ ನಂತರ ಫೋನ್ ಮಾಡಿದ ಪತ್ನಿ.. ಆಗಲೂ ಮಾತನಾಡದೇ ಜೀವ ಬಿಟ್ಟ ಪತಿ..
Advertisment
  • ಮಳೆ, ಗಾಳಿ, ಚಳಿ ತಡೆಯಲಾಗದೇ ಪ್ರಾಣಬಿಟ್ಟ ವೃದ್ಧ
  • 40 ವರ್ಷಗಳ ಹಿಂದೆ ಬೇರೆ ಬೇರೆಯಾಗಿದ್ದ ಸತಿ, ಪತಿ
  • ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ವೃದ್ಧ ಸಾವು

ಉತ್ತರ ಕನ್ನಡ: ಪತ್ನಿಯ ಮೇಲೆ ಸುಮಾರು 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ, ಸಾಯುವ ವೇಳೆಯೂ ಮಾತನಾಡದೇ ಕಣ್ಮುಚ್ಚಿದ ಪ್ರಸಂಗ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೂಯಿಸ್ ಫರ್ನಾಂಡಿಸ್ (75) ಮೃತ ದುರ್ದೈವಿ.

Advertisment

ಕಳೆದ 40 ವರ್ಷಗಳ ಹಿಂದೆ ಪತ್ನಿ ಜೊತೆ ಕೋಪಿಸಿಕೊಂಡು ಲೂಯಿಸ್ ಮಾತು ಬಿಟ್ಟಿದ್ದನಂತೆ. ಇದರಿಂದ ನೊಂದ ಪತ್ನಿ ಕೆಲಸ ಅರಸಿ ಮುಂಬೈಗೆ ಹೋಗಿದ್ದಳು. ಇತ್ತ ಕೂಲಿ ಕೆಲಸದ ಜೊತೆಗೆ ಪ್ಲಾಸ್ಟಿಕ್ ಆರಿಸುತ್ತಿದ್ದ ಲುಯಿಸ್, ಎಂಎಸ್​ಐಎಲ್​ ಮದ್ಯದಂಗಡಿ ಪಕ್ಕ ವಾಸವಿದ್ದ. ಇತ್ತೀಚೆಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಗಾಳಿ, ಮಳೆಗೆ ಚಳಿಯಿಂದ ಲೂಯಿಸ್ ನಡಗುತ್ತಿದ್ದ. ಇದನ್ನು ನೋಡಿದ ಕೆಪಿಸಿ ಕಾಲೋನಿಯ ಸ್ಥಳೀಯ ಸ್ಟಿವನ್ ತಮ್ಮ ಮನೆಗೆ ಬರುವಂತೆ ಕೇಳಿಕೊಂಡಿದ್ದಾರೆ. ಆದರೆ ಲೂಯಿಸ್ ಅವರ ಮನೆಗೆ ಹೋಗಲು ಒಪ್ಪಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ದಿಢೀರ್ ಶಿಫ್ಟ್

ಜುಲೈ 23 ರಂದು ಸಂಜೆ ಸ್ವಿವನ್ ವಡಾಪಾವ್ ನೀಡಿ ಲೂಯಿಸ್​​ನನ್ನು ಕೊನೆಯದಾಗಿ ಮಾತನಾಡಿಸಿಕೊಂಡು ಬಂದಿದ್ದರು. ಈ ವೇಳೆ ಸ್ವಿವನ್, ಲೂಯಿಸ್ ಪತ್ನಿಗೆ ಕರೆ ಮಾಡಿ ವಿಚಾರ ಹೇಳಿದ್ದರಂತೆ. ಆಗ ಲೂಯಿಸ್​ ಜೊತೆ ಆತನ ಪತ್ನಿ ಮಾತನಾಡೋದಾಗಿ ಹೇಳಿದ್ದಾಳೆ. ಆದರೆ ಲೂಯಿಸ್ ಮಾತನಾಡಲು ಇಷ್ಟಪಡಲಿಲ್ಲ ಎನ್ನಲಾಗಿದೆ. ಜುಲೈ 25 ರಂದು ಸಂಜೆ 6 ಗಂಟೆ ವೇಳೆಗೆ ಲೂಯಿಸ್ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸಾವನ್ನಪ್ಪಿದ ಬಳಿಕ ಕೂಡ ಆತನ ಪತ್ನಿಗೆ ಫೋನ್ ಮಾಡಿ ಮಾಹಿತಿ ನೀಡಲಾಗಿದೆ.

Advertisment

ಇದನ್ನೂ ಓದಿ:ಟೀಂ ಇಂಡಿಯಾಗೆ ಆಘಾತ.. ಲಂಕಾ ವಿರುದ್ಧ ಇಂದು ಸ್ಟಾರ್​ ವೇಗಿ ಆಡೋದು ಡೌಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment