ಗಂಡ-ಹೆಂಡತಿ ಜಗಳ ಕೊ*ಲೆಯಲ್ಲಿ ಅಂತ್ಯ.. ಸ್ಕ್ರೂಡ್ರೈವರ್​ನಿಂದ ಚುಚ್ಚಿ, ಕೊಡಲಿಯಿಂದ ಕೊಚ್ಚಿ ಕೊಂ*ದೇ ಬಿಟ್ಟ

author-image
AS Harshith
Updated On
ಗಂಡ-ಹೆಂಡತಿ ಜಗಳ ಕೊ*ಲೆಯಲ್ಲಿ ಅಂತ್ಯ.. ಸ್ಕ್ರೂಡ್ರೈವರ್​ನಿಂದ ಚುಚ್ಚಿ, ಕೊಡಲಿಯಿಂದ ಕೊಚ್ಚಿ ಕೊಂ*ದೇ ಬಿಟ್ಟ
Advertisment
  • ತಾಳಿ ಕಟ್ಟಿದ ಗಂಡನ ಕೈಯಾರೆ ಸಾವನ್ನಪ್ಪಿದ ಹೆಂಡತಿ
  • ಗಂಡನ ಕೊಡಲಿ ಏಟಿಗೆ ಸಾವನಪ್ಪಿದ ಪತ್ನಿ.. ಅಷ್ಟಕ್ಕೂ ಆಗಿದ್ದೇನು?
  • ಹೆಂಡತಿಗೆ ಸ್ಕ್ರೂಡ್ರೈವರ್​ನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ ಪತಿ

ಕೌಟುಂಬಿಕ ಕಲಹ ಹಿನ್ನೆಲೆ, ಪಾಪಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯದ ಮಂಥನಹಳ್ಳಿ ಗ್ರಾಮದಲ್ಲಿ ನಡೆದಿದೆ. ತೇಜಸ್ವಿನಿ ಕೊಲೆಯಾದ ಮಹಿಳೆ. ಜಯರಾಮು ಕೊಲೆಗೈದ ದುರ್ದೈವಿ.

ಇದನ್ನೂ ಓದಿ: ಮನೆ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಮಗ.. ಸಾವಿನಲ್ಲೂ ಸಾರ್ಥಕತೆ ಮೆರೆದು ಬೆಳಕಾದ

ಕೌಟುಂಬಿಕ ‌ವಿಚಾರವಾಗಿ ದಂಪತಿಗಳ ನಡುವೆ ಜಗಳ ಶುರುವಾಗಿದೆ. ಬಳಿಕ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡಿದ್ದ ಪತಿ ಜಯರಾಮು ತನ್ನ ಪತ್ನಿ ತೇಜಸ್ವಿನಿ ಕುತ್ತಿಗೆಗೆ ಸ್ಕ್ರೂಡ್ರೈವರ್​ನಿಂದ ಚುಚ್ಚಿದ್ದಾನೆ.

ಇದನ್ನೂ ಓದಿ: ಮೊಬೈಲ್​ ರಿಟ್ರೀವ್​, ದರ್ಶನ್​ಗೆ ಮತ್ತಷ್ಟು ಸಂಕಷ್ಟ.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

ಸ್ಕ್ರೂಡ್ರೈವರ್​ನಿಂದ ಚುಚ್ಚಿರೋದು ಮಾತ್ರವಲ್ಲದೆ, ಬಳಿಕ ತಲೆಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ತೇಜಸ್ವಿನಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಇದನ್ನೂ ಓದಿ: ಸಾವಿನ ಸಂಖ್ಯೆ 18ಕ್ಕೆ ಏರಿಕೆ, 40ಕ್ಕೂ ಹೆಚ್ಚು ಜನರಿಗೆ ಗಾಯ.. ಫಾಕ್ಟರಿ ಸ್ಫೋಟದಲ್ಲಿ 380 ಮಂದಿ ಏನಾದ್ರು?

ಬೆಳ್ಳೂರು ಪೊಲೀಸ್ ‌ಠಾಣೆ‌‌‌‌ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment