Advertisment

ಪತಿಯ ಗುಟ್ಕಾ ಸೇವನೆಯಿಂದ ನೊಂದ ಪತ್ನಿ.. ನೇ*ಣಿಗೆ ಕೊರಳೊಡ್ಡಿದ ಹೆಂಡತಿ

author-image
AS Harshith
Updated On
ಗಂಡನಿಗಾಗಿ ವ್ರತ ಮಾಡಿದ ಪತ್ನಿ ಜೀವವನ್ನೇ ಕಳೆದುಕೊಂಡಳು: ಪತಿಯ ದುರಭ್ಯಾಸ ಆಕೆಯ ಅಂತ್ಯಕ್ಕೆ ಕಾರಣವಾಗಿದ್ದು ಹೇಗೆ?
Advertisment
  • ಗುಟ್ಕಾ ಅಥವಾ ಪಾನ್​ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ
  • ಹೆಂಡತಿಯ ಸಾವಿಗೆ ಕಾರಣವಾದ ಪತಿಯ ಗುಟ್ಕಾ ಸೇವಿಸುವ ಚಟ
  • ಗುಟ್ಕಾ ಸೇವನೆ ವಿಚಾರಕ್ಕೆ ಗಲಾಟೆ.. ಹೆಂಡತಿಯನ್ನು ಕಳೆದುಕೊಂಡ ಪತಿ

ಗುಟ್ಕಾ ಅಥವಾ ಪಾನ್​ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇದರ ಸೇವನೆಯಿಂದ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಸರ್ಕಾರ ಈ ಕುರಿತಾಗಿ ಎಷ್ಟೇ ಜಾಗೃತಗೊಳಿಸಿದರೂ ಅದರ ಮಾರಾಟ ಮತ್ತು ಸೇವನೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕೆಲವರಿಗಂತೂ ಗುಟ್ಕಾ ಸೇವಿಸುವವರನ್ನು ಕಂಡರೆ ಮಾರುದ್ಧ ಓಡುತ್ತಾರೆ. ಅದರ ವಾಸನೆಯನ್ನು ಇಷ್ಟಪದವರು ಇದ್ದಾರೆ. ಆದರೆ ಇದೇ ಗುಟ್ಕಾದಿಂದಾಗಿ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಪತಿಯ ಗುಟ್ಕಾ ಸೇವನೆ ಕಾರಣವಾಗಿದೆ.

Advertisment

ಹೌದು. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗುಟ್ಕಾ ಸೇವನೆಯ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಜೈಲಿನಿಂದಲೇ ಖ್ಯಾತ ನಿರ್ದೇಶಕನಿಗೆ ಪತ್ರ! ನನ್ಮ ಮೇಲಿನ ಎಲ್ಲಾ ಪ್ರಕರಣ ರಾಜಕೀಯ ಪ್ರೇರಿತ ಎಂದು ಉಲ್ಲೇಖ!

ಕರ್ವಾ ಚೌತ್​ ಆಚರಣೆಯ ಭಾಗವಾಗಿ ದಿನವಿಡೀ ಉಪವಾಸದಲ್ಲಿದ್ದ ಸಾರಿಕಾ ಎಂಬಾಕೆ ಸಂಜೆಯ ವೇಳೆ ಪತಿ ಸುಲಭ್ ನಾಮದೇವ್‌ಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆಯೂ ಆತ ಗುಟ್ಕಾ ಜಗಿಯುತ್ತಿದನ್ನು ಕಂಡು ಬೇಸರಗೊಂಡಿದ್ದಾಳೆ. ಜೊತೆಗೆ ಈ ವಿಚಾರವಾಗಿ ಜಗಳ ನಡೆದಿದ್ದು, ಬಳಿಕ ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisment

ಇದನ್ನೂ ಓದಿ: ಜನಬಲ, ಧನಬಲ ಗಟ್ಟಿಯಾಗುವ ದಿನ, ಪ್ರೇಮಿಗಳ ಮಧ್ಯೆ ಬೇಸರ; ಇಲ್ಲಿದೆ ಇಂದಿನ ಭವಿಷ್ಯ

ಗುಟ್ಕಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಮಾರಕ ಕಾಯಿಲೆಗಳು ಬರುತ್ತವೆ. ಬಹುತೇಕರು ಇದರ ದಾಸರಾಗಿದ್ದಾರೆ. ಹದಿಹರೆಯದವರು ಕೂಡ ಸೇವಿಸುತ್ತಿದ್ದಾರೆ. ಹೀಗಿದ್ದರು ಭಾರತದಲ್ಲಿ ಗುಟ್ಕಾ ಮಾರಾಟವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment