ಹಳೇ ಬಾಯ್​ಫ್ರೆಂಡ್​ ಜೊತೆ ಪತ್ನಿ ಪರಾರಿ, ಮನನೊಂದು ಪತಿ ಸಾವಿಗೆ ಶರಣು

author-image
Ganesh
Updated On
ಹಳೇ ಬಾಯ್​ಫ್ರೆಂಡ್​ ಜೊತೆ ಪತ್ನಿ ಪರಾರಿ, ಮನನೊಂದು ಪತಿ ಸಾವಿಗೆ ಶರಣು
Advertisment
  • 13 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಜೋಡಿ
  • ಪ್ರೀತಿಯ ಕಾಣಿಕೆಯಾಗಿ ಇಬ್ಬರು ಮುದ್ದಾದ ಮಕ್ಕಳು
  • ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅವರಿಬ್ಬರು ಒಬ್ಬರಿಗೊಬ್ಬರು ಪ್ರೀತಿಸಿ 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆ ಇಬ್ಬರ ಪ್ರೀತಿಯ ಕಾಣಿಕೆಯಾಗಿ ಮುದ್ದಾದ ಇಬ್ಬರು ಮಕ್ಕಳಿದ್ದರು. ಆದ್ರೆ ಮಾಜಿ ಪ್ರೀಯಕರನ ಹಿಂದೆ ಬಿದ್ದ ಪತ್ನಿ, ಪತಿರಾಯನಿಗೆ ಕೈಕೊಟ್ಟು ಪರಾರಿಯಗಿದ್ದಾಳೆ. ಇದರಿಂದ ಮನನೊಂದು ಪತಿ ಫೇಸ್​​ಬುಕ್​ನಲ್ಲಿ ನೋವಿನ ವಿಡಿಯೋ ಹರಿಬಿಟ್ಟು ಸಾವಿಗೆ ಶರಣಾಗಿದ್ದಾನೆ.

ಆರೋಪ ಏನು..?

ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ ನಿವಾಸಿ ನಾಗೇಶ್ ಮೃತಪಟ್ಟ ವ್ಯಕ್ತಿ. ಈತ ರಂಜಿತಾ ಎಂಬಾಕೆಯ ಪ್ರೀತಿಸಿ ಮದುವೆಯಾಗಿದ್ದ. ನಂತರದ ದಿನಗಳಲ್ಲಿ ಬದುಕಿಗೆ ಅಂತಾ ಬ್ಯೂಟಿ ಪಾರ್ಲರ್​​ ಶುರು ಮಾಡಿದ್ದಳು. ಬ್ಯೂಟಿ ಪಾರ್ಲರ್​ ಕೆಲಸದ ಬ್ಯುಸಿ ನಡುವೆ ರಂಜಿತಾ ಗಂಡನ ಮರೆತಿದ್ದಾಳೆ. ಆಕೆಯ ಹಳೆ ಪ್ರಿಯಕರನ ಜೊತೆ ಸುತ್ತಾಡಲು ಶುರುಮಾಡಿದ್ದಳಂತೆ. ಕೆಲವು ದಿನಗಳ ಹಿಂದೆ ರಂಜಿತಾ ಗಂಡನ ಬಿಟ್ಟು ಹಳೇ ಲವ್ವರ್ ಜೊತೆ ಓಡಿ ಹೋಗಿದ್ದಾಳಂತೆ. ಇದರಿಂದ ನೊಂದ ನಾಗೇಶ್ ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಹಿರಿಯ ನಟನ ಮನೆಯಲ್ಲಿ ಮುಗಿಯದ ಜಗಳ.. ತಂದೆಯಿಂದಲೇ ದೂರು, ಆ್ಯಕ್ಟರ್ ಮನೋಜ್ ಅರೆಸ್ಟ್!

ವಿಡಿಯೋದಲ್ಲಿ ನನ್ನ ಸಾವಿಗೆ ಪತ್ನಿ ರಂಜಿತಾ, ಆಕೆಯ ಪ್ರಿಯಕರ ಭರತ್ ಎಂದು ದೂರಿದ್ದಾನೆ. ಅಡಿಕೆ ವ್ಯಾಪಾರಿಯಾಗಿದ್ದ ನಾಗೇಶ್, ಇಸ್ಪೀಟ್ ಜೂಜಿಗೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತಿರಿಸಲು ಕೆಲ ತಿಂಗಳ ಹಿಂದಷ್ಟೇ ಗುಬ್ಬಿ ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಾಟ ಮಾಡಿದ್ದ. ನಂತರ ಒಂದಿಷ್ಟು ಹಣವನ್ನು ವ್ಯಾಪಾರಕ್ಕಾಗಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಘಟನಾ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಡುಪಿ; ಕೋಳಿ ಪಂದ್ಯಕ್ಕೆ ಪೊಲೀಸರಿಂದ ಬ್ರೇಕ್.. ಅನುಮತಿ ಕೊಡದಿದ್ರೆ ಹೋರಾಟದ ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment