ಪುರುಷರೇ ಎಚ್ಚರ.. ಗಂಡ ಕಲರ್ ಕಲರ್ ಬಿಂದಿ ಕೊಡಿಸಲಿಲ್ಲ ಅಂತ ಮುದ್ದಾದ ಹೆಂಡತಿ ಮಾಡಿದ್ದೇನು?

author-image
Veena Gangani
Updated On
ಪುರುಷರೇ ಎಚ್ಚರ.. ಗಂಡ ಕಲರ್ ಕಲರ್ ಬಿಂದಿ ಕೊಡಿಸಲಿಲ್ಲ ಅಂತ ಮುದ್ದಾದ ಹೆಂಡತಿ ಮಾಡಿದ್ದೇನು?
Advertisment
  • ಬಣ್ಣ ಬಣ್ಣದ ಬಿಂದಿಗಾಗಿ ಗಂಡ ಹೆಂಡತಿ ಮಾಡಿದ್ದೇನು?
  • ಸಣ್ಣ ಮಟ್ಟದ ಬಿಂದಿ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ
  • ಗಂಡ ಹೆಂಡತಿ ನಡುವಿನ ಗಲಾಟೆ ಆ ಮಟ್ಟಿಗೆ ಹೋಗಿದ್ದು ಏಕೆ?

ಹೆಣ್ಮಕ್ಕಳೇ ಆಗಲಿ.. ಹೆಂಗಸರೇ ಆಗಲಿ.. ಹಣೆಯಲ್ಲಿ ಬೊಟ್ಟು ಅಥವಾ ಬಿಂದಿ ಇಟ್ಟರೆ ಒಂದು ಲಕ್ಷಣ. ಈಗಿನ ಕಾಲದಲ್ಲಿ, ಹೆಣ್ಮಕ್ಕಳು ಹಣೆಗೆ ಬಿಂದಿ ಇಟ್ಟುಕೊಂಡ್ರೇ ಕೆಲವರು ಆಶ್ಚರ್ಯ ಪಟ್ಟುಕೊಂಡು ನೋಡ್ತಾರೆ. ಯಾಕಂದ್ರೇ ಸದ್ಯ ಇವರಾದ್ರೂ, ಕುಂಕುಮ ಬದಲು, ಹಣೆಗೆ ಬಿಂದಿಯಾದ್ರೂ ಇಡ್ತಿದ್ದಾರಲ್ವಾ ಅಂತ ಆಶ್ಚರ್ಯ ಪಡ್ತಾರೆ.

ಇದನ್ನೂ ಓದಿ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?

publive-image

ಈ ಹಣೆಗಿಡೋ ಬಿಂದಿ ಬಗ್ಗೆ ನಿಮಗೆ ಹೇಳೋಕೆ ಒಂದು ಕಾರಣ ಇದೆ. ಹೆಂಡ್ತಿಗೆ ದಿನಾ ಬಿಂದಿ ಇಟ್ಟುಕೊಳ್ಳೋದು ಒಂದು ಅಭ್ಯಾಸ ಇತ್ತು. ಅದು ಒಂದು ಲೆಕ್ಕದಲ್ಲಿ ಚಟ ಅಂತಾನೇ ಹೇಳಬಹುದು. ಏನೇ ಆದ್ರೂ ಅಥವಾ ಏನೇ ಅಡಿಕ್ಟ್ ಮಾಡಿಕೊಂಡ್ರೂ ಅದಕ್ಕೆ ಕಂಟ್ರೋಲ್ ಅನ್ನೋದು ಇರಬೇಕು. ಆದ್ರೆ ಹೆಂಡ್ತಿಗಿದ್ದ ಬಿಂದಿ ಇಟ್ಟುಕೊಳ್ಳುವ ವಿಚಾರಕ್ಕೆ ಗಂಡನ ನಡುವೆ ಹೆಚ್ಚಿನ ಗಲಾಟೆ ನಡೆಯುತ್ತಲೇ ಇತ್ತು. ಆದರೆ ಇದೀಗ ಗಂಡ ಹೆಂಡತಿ ನಡುವಿನ ಗಲಾಟೆ ನೇರವಾಗಿ ಕೋರ್ಟ್​ ಮೆಟ್ಟಿಲೇರಿ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾಳೆ.

publive-image

ಈ ಜಗತ್ತಲ್ಲಿ ಯಾವುದೂ ಆಫ್​ಟ್ರಾಲ್ ಅಲ್ಲ.. ಆದ್ರೆ ಬಿಂದಿ ಇಟ್ಟುಕೊಳ್ಳೋ ವಿಷಯ ಈಗ ಕೋರ್ಟ್​ ಮೆಟ್ಟಿಲೇರೋವರೆಗೆ ಹೋಗದೆ ಅಂದ್ರೆ ಅಚ್ಚರಿ ಪಡುವ ವಿಚಾರವೇ ಸರಿ. ಇನ್ನೂ, ತನ್ನ ಗಂಡ, ಪ್ರತಿದಿನ ಬಣ್ಣ ಬಣ್ಣದ ಬಿಂದಿಗಳನ್ನು ಇಟ್ಟುಕೊಳ್ಳೋದಕ್ಕೆ ಬಿಡ್ತಿಲ್ಲ ಅಂತ ಆರೋಪ ಮಾಡಿ, ಮಹಿಳೆಯೊಬ್ಬಳು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಈ ಡಿವೋರ್ಸ್​ ಕೇಸ್ ಈಗ, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ನಡೆದಿರೋದು ಉತ್ತರಪ್ರದೇಶದ ಆಗ್ರಾದಲ್ಲಿ ಅಂತ ವರದಿಯಾಗಿದೆ.

publive-image

ಮಹಿಳೆಯ ಗಂಡ, ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಫ್ಯಾಮಿಲಿಯಲ್ಲಿ ಅಷ್ಟೇನೂ ಆರ್ಥಿಕವಾಗಿ  ಸರಿಯಿಲ್ಲ ಅಂತ ಹೇಳಲಾಗುತ್ತಿದೆ. ಇದರ ನಡುವೆ, ಆ ಮಹಿಳೆ, ಪ್ರತಿ ದಿನ ಹೊಸ ಹೊಸ ಡಿಸೈನ್ ಇರೋ ಬಿಂದಿಗಳನ್ನು ಇಟ್ಟುಕೊಳ್ಳೋ ಅಭ್ಯಾಸವನ್ನು ಇಟ್ಟುಕೊಂಡಿದ್ದಳು. ಅದಕ್ಕೋಸ್ಕರ, ಗಂಡನಿಗೆ ದಿನಾ, ಹೊಸ ಡಿಸೈನ್ ಬಿಂದಿಯನ್ನು ತಂದುಕೊಡು ಅಂತ ಹಠ ಹಿಡಿಯುತ್ತಿದ್ದಳು. ಈ ವಿಚಾರಕ್ಕೆ ದಂಪತಿಗಳ ನಡುವೆ ಸಾಕಷ್ಟೂ ಬಾರಿ ಗಲಾಟೆಯಾಗ್ತಿತ್ತು. ಜೊತೆಗೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ಕೂಡ ದಾಖಲಾಗಿತ್ತು. ಕೇಸ್​ ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಪೊಲೀಸರು, ಗಂಡ- ಹೆಂಡ್ತಿಯ ವಾದವನ್ನ ಕೇಳಿ, ಫ್ಯಾಮಿಲಿ ಕನ್ಸಲ್​​ಟೆನ್ಸಿ ಸೆಂಟರ್​ಗೆ ಹೋಗೋಕೆ ಹೇಳಿದ್ದಾರೆ. ಹಾಗೇ ದಂಪತಿ ಹೋಗಿದ್ದಾರೆ. ಆದ್ರೂ ಕೂಡ, ಇವರಿಬ್ಬರು ಅಲ್ಲೇ ಕಿತ್ತಾಡಿಕೊಂಡು, ಈ ಗಂಡನಿಂದ ಮುಕ್ತಿ ಬೇಕು ಅಂತ ಮಹಿಳೆ, ಡಿವೋರ್ಸ್​ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಈಗ, ಈ ಮಹಿಳೆಯ ಡಿವೋರ್ಸ್​ ನಡೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

publive-image

ಈ ಕೇಸ್ ಬಗ್ಗೆ ಫ್ಯಾಮಿಲಿ ಕನ್ಸಲ್​​ಟೆಂಟ್ ಡಾ.ಅಮಿತ್ ಗೌಡ್ ಹೇಳೋ ಹಾಗೇ, ಮಹಿಳೆ ದಿನಕ್ಕೆ ಒಂದರಂತೆ, ತಿಂಗಳಿಗೆ 30 ರಿಂದ 35 ಹೊಸ ಡಿಸೈನ್ ಬಿಂದಿಗಳನ್ನು ಬೇಕು ಅಂತ ಗಂಡನಿಗೆ ಪೀಡಿಸ್ತಾ ಇದ್ದಳು. ಈ ವಿಚಾರವಾಗಿ ದಂಪತಿಗಳು ಸಾಕಷ್ಟೂ ಬಾರೀ ಕಿತ್ತಾಡಿಕೊಂಡಿದ್ರು. ಕನ್ಸಲ್​ಟೆಂಟ್ ಕಮಿಟಿಯಿಂದ ದಂಪತಿಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. ಈಗ, ಮಹಿಳೆ ಡಿವೋರ್ಸ್​ ಬೇಕು ಅಂತ ಕೋರ್ಟ್‌ಗೆ ಹೋಗಿದ್ದಾಳೆ.

ಇದನ್ನೂ ಓದಿ:ಬರೋಬ್ಬರಿ 280 KG ತೂಕ.. ಇದು ಯಾರು ಅರಿಯದ ಬಂಗಾರದ ಬಾಗಿಲು; ಏನಿದರ ಇತಿಹಾಸ?

ಈ ರೀತಿಯ ಕೇಸ್​ ಆಗ್ರಾದಲ್ಲಿ ನಡೆದಿರೋದು ಇದೇನೂ ಮೊದಲಲ್ಲ. ಈ ಹಿಂದೆ ಮಹಿಳೆಯೊಬ್ಬಳು, ತನಗೆ ಗಂಡ ಮೊಮೋಸ್‌ ಕೊಡಿಸಿಲಿಲ್ಲ ಅಂತ ಡಿವೋರ್ಸ್​ ಕೋರಿದ್ರು. ಫ್ಯಾಮಿಲಿ ಕನ್ಸಲ್​​ಟೆನ್ಸಿ ಅವರು ಮಾತುಕತೆ ನಡೆಸಿದ ಮೇಲೆ, ಆ ಮಹಿಳೆ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆದುಕೊಂಡ್ರು ಅಂತ ಫ್ಯಾಮಿಲಿ ಕನ್ಸಲ್​​ಟೆಂಟ್ ಡಾ.ಅಮಿತ್ ಗೌಡ್ ಮಾಹಿತಿ ಕೊಟ್ಟಿದ್ದಾರೆ. ಈ ಡಿವೋರ್ಸ್​ ಕೇಸ್​​ ನೋಡಿದ್ರೇ, ಹೆಂಡ್ತಿ ಚಿನ್ನ, ಬೆಳ್ಳಿ ಕೇಳ್ತಿಲ್ಲ, ಹಣೆಗೆ ಇಡೋದಕ್ಕೆ ಬಿಂದಿ ತಾನೇ ಕೊಡಿಸಬಹುದಾಗಿತ್ತು ಅಂತ ಕೆಲ ಸೋಶಿಯಲ್ ಮೀಡಿಯಾ ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನು, ಕೆಲವರು ಇತ್ತೀಚೆಗೆ ಚಿತ್ರ- ವಿಚಿತ್ರ ಕಾರಣಗಳನ್ನ ಕೊಟ್ಟು, ಡಿವೋರ್ಸ್​ ಪಡೆಯೋದು ಒಂದು ಲೆಕ್ಕದಲ್ಲಿ ಬ್ಯುಸಿನೆಸ್​​ ಮಾಡಿಕೊಳ್ತಿದ್ದಾರೆ ಅಂತ ಮತ್ತಷ್ಟೂ ಜನ ಹೇಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment