/newsfirstlive-kannada/media/post_attachments/wp-content/uploads/2025/02/KALABURAGI-DANGEROUS-WIFE.jpg)
ಹೆಂಡತಿ ಗಂಡನನ್ನು ಯಾವ ನಡೆಯನ್ನು ಬೇಕಾದ್ರೂ ಸಹಿಸಿಯಾಳು, ಆದ್ರೆ ಪರಸ್ತ್ರಿ ಜೊತೆಯ ಸಂಗವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅದಕ್ಕೆ ತಾಜಾ ನಿದರ್ಶನ ಕಲಬುರಗಿಯಲ್ಲಿ ಪತ್ನಿಯೊಬ್ಬಳು ಮಾಡಿದ ಕಿತಾಪತಿ.
ಪರಸ್ತ್ರೀ ಸಂಗ ಮಾಡಿದ ಪತಿಗೆ ಬುದ್ಧಿ ಕಲಿಸಲು ಪತ್ನಿ, ತಾನೇ ಕೆಲ ಯುವಕರಿಗೆ ಸುಪಾರಿ ಕೊಟ್ಟು ಎರಡು ಕಾಲು ಮುರಿಸಿದ ಘಟನೆ ಕಲಬುರಗಿ ನಗರದ ಅತ್ತರ್ ಕಂಪೌಂಡ್ ಬಳಿ ನಡೆದಿದೆ. ವೆಂಕಟೇಶ್ ಹಾಗೂ ಉಮಾದೇವಿ ಪತಿ ಪತ್ನಿಯರು. ಇತ್ತೀಚೆಗೆ ಪರಸ್ತ್ರೀ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಜಗಳಗಳಾಗಿದ್ದವು. ಆದರೂ ಕೂಡ ವೆಂಕಟೇಶ್ ಪರಸ್ತ್ರೀ ಸಂಗ ಬಿಟ್ಟಿದ್ದಿಲ್ಲ. ಇದರಿಂದ ರೊಚ್ಚಿಗೆದ್ದ ಪತ್ನಿ ಗಂಡನ ಕಾಲು ಮುರಿದು ಹಾಕುವಂತೆ 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾಳೆ.
ಇದನ್ನೂ ಓದಿ: ಹೊಸಪೇಟೆಯಲ್ಲಿ 100 ಕೋಟಿಗೂ ಅಧಿಕ ವಂಚನೆ ಪ್ರಕರಣ; ಗೋವಾದಲ್ಲಿ ಆರೋಪಿಯ ಸೆರೆ
ಸುಪಾರಿ ಪಡೆದ ಯುವಕರು ಉಮಾದೇವಿಯ ಪತಿ ವೆಂಟಕೇಶನ ಎರಡು ಕಾಲನ್ನು ಮುರಿದು ಹಾಕಿದ್ದಾರೆ. ಪ್ರಕರಣವನ್ನು ಭೇದಿಸಿರುವ ಬ್ರಹ್ಮಪುರ ಠಾಣೆ ಪೊಲೀಸರು ಸುಪಾರಿ ನೀಡಿದ ಉಮಾದೇವಿ ಹಾಗೂ ಸುಪಾರಿ ಪಡೆದ ಆರೀಫ್, ಮನೋಹರ ಹಾಗೂ ಸುನೀಲ್ನನ್ನು ಬಂಧಿಸಿದ್ದಾರೆ. ಮತ್ತೊಂದು ಕಡೆ ಎರಡು ಕಾಲು ಮುರಿದುಕೊಂಡ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ