ತಮ್ಮನ ಸ್ನೇಹಿತನ ಜತೆ ಅಕ್ರಮ ಸಂಬಂಧ; ದೈಹಿಕ ಸುಖಕ್ಕಾಗಿ ಗಂಡನನ್ನೇ ಬೀದಿ ಹೆಣ ಮಾಡಿದ್ಳು!

author-image
Ganesh Nachikethu
Updated On
ತಮ್ಮನ ಸ್ನೇಹಿತನ ಜತೆ ಅಕ್ರಮ ಸಂಬಂಧ; ದೈಹಿಕ ಸುಖಕ್ಕಾಗಿ ಗಂಡನನ್ನೇ ಬೀದಿ ಹೆಣ ಮಾಡಿದ್ಳು!
Advertisment
  • ಅಕ್ರಮ ಸಂಬಂಧದ ಗೀಳಿಗೆ ನಡೆಯಿತು ಪತಿಯ ಮರ್ಡರ್​
  • ಬಾಣಂತನಕ್ಕೆ ಹೋಗಿದ್ದವಳಿಗೆ ಮತ್ತೊಬ್ಬನ ಮೇಲೆ ಪ್ರೀತಿ
  • ರಾತ್ರೋ ರಾತ್ರಿ ಗಂಡನಿಗೆ ಫೋನ್​ ಮಾಡಿದ್ದ ಇಂದುಶ್ರೀ..!

ಚಿಕ್ಕಬಳ್ಳಾಪುರ: ಇನ್ಸ್​ಸ್ಟಾದಲ್ಲೇ ಲವ್ ಮಾಡಿದ್ದ ಆ ಜೋಡಿಗೆ ಮದುವೆಯಾಗಿ ಒಂದು ಮುದ್ದಾದ ಮಗು ಕೂಡ ಆಯ್ತು. ಆದ್ರೆ, ಹಾಲು ಜೇನಿನ ಸಂಸಾರ ಅಂತಿರುವಾಗಲೇ ಪತ್ನಿಗೆ ಬರ್ತಿದ್ದ ಅದೊಂದು ಕಾಲ್, ಇಡೀ ಮನೆಯನ್ನೇ ಸ್ಮಶಾನ ಮಾಡಿಬಿಟ್ಟಿದೆ.
ನದಿ ನೀರಲ್ಲಿ ಬಿದ್ದಿದ್ದ ಒಂಟಿ ಶವ. ಇದು ಸಾಮಾನ್ಯ ಸಾವಲ್ಲ, ಕೊಲೆ. ಅಟ್ಟಾಡಿಸಿಕೊಂಡು ಮಾಡಿರುವ ಭೀಕರ ಮರ್ಡರ್​. ಅಷ್ಟಕ್ಕೂ ಈ ಕೊಲೆ ಹಿಂದೆ ಪ್ರೀತಿ ಇದೆ. ದ್ವೇಷಾನೂ ಇದೆ. ಅಕ್ರಮ ಸಂಬಂಧದ ಘಾಟೂ ಇದೆ.

ಬಾಣಂತನಕ್ಕೆ ಹೋದವಳಿಗಿತ್ತಂತೆ ‘ಅಕ್ರಮ’ ಸಂಬಂಧ!

ಕೊಲೆಯಾದ ವ್ಯಕ್ತಿ ಬೇಱರು ಅಲ್ಲ, ಸುಭಾಷ್. 35 ವಯಸ್ಸು. ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದ ನಿವಾಸಿ. ವಿಪರ್ಯಾಸ ಏನಂದ್ರೆ, ತನ್ನ ಪತ್ನಿಯ ಅಕ್ರಮ ಸಂಬಂಧದ ಚಟಕ್ಕೆ ಪ್ರಶಾಂತ್​ ಬಲಿಯಾಗಿ ಹೋಗಿದ್ದಾನೆ.

ಅಕ್ರಮ ಸಂಬಂಧಕ್ಕೆ ಕೊಲೆ!

ಕಳೆದ ಒಂದೂವರೆ ವರ್ಷದ ಸುಭಾಷ್​ ಹಾಗೂ ದೊಡ್ಡಬಳ್ಳಾಪುರದ ಇಂದುಶ್ರಿಗೂ ಇನ್ಸ್​ಸ್ಟಾಗ್ರಾಂನಲ್ಲಿ ಲವ್ ಆಗಿದೆ. ಬಳಿಕ ರಾಜಾನುಕುಂಟೆ ಬಳಿ ಸಾಮೂಹಿಕ ವಿವಾಹ ಕೂಡ ಆಗ್ತಾರೆ. ಆದ್ರೆ, ಬೇರೆ ಜಾತಿ ಹುಡುಗನನ್ನ ಮದುವೆಯಾಗಿದ್ದಕ್ಕೆ ಇಂದುಶ್ರೀ ಮನೆಯವರು ಮದುವೆಗೆ ಬರಲ್ಲ. ಇನ್ನು, ಇವ್ರ ಪ್ರೀತಿಯ ಸಾಕ್ಷಿಯಾಗಿ ನಾಲ್ಕು ತಿಂಗಳ ಮಗು ಕೂಡ ಇದೆ. ಅತ್ತ, ಬಾಣಂತನಕ್ಕೆ ಇಂದುಶ್ರಿ ಸುಭಾಷ್ ದೊಡ್ಡಪ್ಪ ಮನೆಯಲ್ಲಿ ಇದ್ದಳಂತೆ. ಆದ್ರೆ, ಇತ್ತೀಚೆಗೆ ಸದಾ ಫೋನ್​ನಲ್ಲಿ ಬ್ಯೂಸಿಯಾರ್ಗಿತ್ತಿದ್ದ ಇಂದುಗೆ ತಮ್ಮನ ಸ್ನೇಹಿತ ಪ್ರವೀಣ್​ ಜೊತೆ ಅಕ್ರಮ ಸಂಬಂಧ ಇತ್ತಂತೆ.

ಅಕ್ಕನ ಅಕ್ರಮ ಸಂಬಂಧಕ್ಕೆ ತಮ್ಮನ ಸಾಥ್!

ಅಕ್ಕನ ಲವ್ವಿ ಡವ್ವಿಗೆ ತಮ್ಮ ಮನೋಜನ ಸಾಥ್ ಕೂಡ ಇತ್ತು. ಅತ್ತ, ವಿಚಾರ ತಿಳಿದು ಕೋಪಗೊಂಡಿದ್ದ ಸುಭಾಷ್, ಇಂದುಶ್ರೀಗೆ ವಾರ್ನ್​ ಕೂಡ ಮಾಡಿದ್ನಂತೆ.

ಇನ್ನು, ರಾತ್ರೋರಾತ್ರಿ ಗಂಡನಿಗೆ ಫೋನ್​ ಮಾಡಿದ್ದ ಇಂದುಶ್ರೀ. ವೀರದಿಮ್ಮ ಕಣಿಮೆ ಬಳಿ ಯಾರೋ ಹೊಡೀತ್ತಿದ್ದಾರೆ. ಬೇಗ ಬಾ ಅಂತ ಕಥೆ ಕಟ್ಟಿದ್ದಾಳೆ. ಇದ್ರಿಂದ ಶಾಕ್ ಆದ ಸುಭಾಷ್, ಕಣಿವೆ ಕಡೆ ಹೊರಟಿದ್ದ. ಸ್ಪಾಟ್​ಗೆ ಬಂದಿದ್ದೇ ತಡ ಮನೋಜ್, ಪ್ರವೀಣ್​ ಸೇರಿ ಏಳು ಜನ ಸೇರ್ಕೊಂಡು ಸುಭಾಷ್​ನ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ.

ಇತ್ತ, ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಇಂದುಶ್ರೀ ತಮ್ಮ ಮನೋಜ್​ನ ವಶಕ್ಕೆ ಪಡೆದು ಕೊಲೆ ತನಿಖೆ ಮುಂದುವರೆಸಿದ್ದಾರೆ.

ಮನೆ, ಗಂಡ, ಮಗು ಅಂತಾ ಇಂದುಶ್ರೀ ಬಂಗಾರದಂಗೆ ಸಂಸಾರ ಮಾಡ್ಕೊಂಡು ಹೋಗಬಹುದಿತ್ತು. ಆದ್ರೆ, ಅಕ್ರಮ ಸಂಬಂಧದ ಚಟಕ್ಕೆ ತಾಳಿ ಕಟ್ಟಿದ ಗಂಡನನ್ನೇ ಹತ್ಯೆ ಮಾಡಿಸಿದ್ದು ನಿಜಕ್ಕೂ ಅಪರಾಧ. ಮತ್ತೊಂದಡೆ, ಸ್ವಂತ ತಮ್ಮನೇ ತನ್ನ ಕೈಯಾರೇ ಅಕ್ಕನ ಹಣೆಯ ಕುಂಕುಮ ಅಳಿಸಿದ್ರೆ, ಅತ್ತ, ಏನೂ ಅರಿಯದ ಕಂದ ತಂದೆ ಇಲ್ಲದ ತಬ್ಬಲಿಯಾಗಿವಂತಾಗಿದ್ದು ಮಾತ್ರ ಘೋರ ದುರಂತ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ; ಟೀಮ್​ ಇಂಡಿಯಾ ಆತಂಕ ಹೆಚ್ಚಿಸಿದ ಕೊಹ್ಲಿ; ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment