/newsfirstlive-kannada/media/post_attachments/wp-content/uploads/2025/06/DELHI-HUSBAND-MURDER.jpg)
ಮೊನ್ನೆ ಮೊನ್ನೆಯಷ್ಟೇ ಮೇಘಾಲಯ ಕೇಸ್ ನೋಡಿದ್ದ ಉತ್ತರ ಭಾರತದ ಪೊಲೀಸರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಫಿಸಿಯೋಥೆರಪಿಸ್ಟ್ ಪತ್ನಿ.. ತನ್ನ ಲವರ್ ಜೊತೆ ಸೇರಿ ಮಾಡಿ ಗಂಡನ ಕಥೆಯನ್ನೇ ಮುಗಿಸಿದ್ದಾಳೆ. ಇದು ಕೂಡ ರಘುವಂಶಿ.. ಸೋನಂ.. ಹನಿಮೂನ್ ಕೇಸ್ ಹೋಲುವಂತಿದೆ.
ಮುಸ್ಕಾನ್ ಆಯ್ತು.. ಸೋನಂ ಆಯ್ತು.. ಇವರ ಸಾಲಿನಲ್ಲಿ ಈಗ ರೀನಾ ಸಿಂಧು.. ಈ ಮೂವರು ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನ ಕೊಂದ ಆರೋಪ ಹೊತ್ತವರು. ಮುಸ್ಕಾನ್.. ಸೋನಂ.. ಕೇಸ್ನಲ್ಲಿ ಪ್ರೇಮ ವೈವಾಹಿಕ ಕಲಹ ಇದ್ರೆ. ರೀನಾ ಸಿಂಧು ಕೇಸ್ನಲ್ಲಿ ಆಸ್ತಿ ವಿವಾದ ಕೂಡ ಸೇರಿಕೊಂಡಿದೆ.
ರವೀಂದರ್ ಕುಮಾರ್ ದೆಹಲಿ ಮೂಲದವನು. ಕೆಲ ದಿನಗಳಿಂದ ನಾಪತ್ತೆಯಾಗಿದ್ದ. ಸಹೋದರ ಮಿಸ್ಸಿಂಗ್ ಅಂತ ದೆಹಲಿಯಲ್ಲಿ ರವೀಂದರ್ ಸಹೋದರ ರಾಜೇಶ್ ಕೋಟ್ದ್ವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದೇ ಜೂನ್ 5ರಂದು ಉತ್ತರಾಖಂಡದ ಕೋಟ್ದ್ವಾರ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಪೊಲೀಸರು ಪೋಸ್ಟ್ ಮಾರ್ಟಂ ಬಳಿಕ ಇದನ್ನ ಕೊಲೆ ಎಂದು ದೃಢಪಡಿಸಿದ್ರು. ಅಲ್ಲಿಂದ ತನಿಖೆ ಶುರುವಾಗಿತ್ತು. ಆಗಲೇ ಈ ಆರೋಪಿ ಲಾಕ್ ಆಗಿದ್ದಳು.
ಉತ್ತರ ಪ್ರದೇಶದ ಮೊರಾದಾಬಾದ್ ನಗರದ ರಾಮಗಂಗಾ ವಿಹಾರ್‌ನ ಐಷಾರಾಮಿ ಕಾಲೋನಿಯಲ್ಲಿದೆ. ಕೋಟ್ಯಂತರ ಮೌಲ್ಯದ ಮನೆ ಮಾರಾಟ ಮಾಡಬೇಕು ಅಂತ ರವೀಂದರ್ ನಿರ್ಧಾರ ಮಾಡಿದ್ದ. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೀತ್ತಿತ್ತು. ಅಲ್ಲಿಗೆ ಸುಮ್ಮನಾಗದ ಪತ್ನಿ ರೀನಾ ಸಿಂಧು.. ತನ್ನ ಬಾಯ್ ಫ್ರೆಂಡ್ ಜೊತೆ ರವೀಂದರ್ ಕಥೆಯನ್ನ ಮುಗಿಸೇ ಬಿಟ್ಟಿದ್ದಾಳೆ.
ಕೆಲವು ತಿಂಗಳ ಹಿಂದೆ ರೀನಾ ಸಿಂಧು ಮತ್ತು ಪ್ರಿಯಕರ ಪರಿತೋಷ್ ಆಸ್ತಿಯನ್ನ ಕಬಳಿಸಲು ರವೀಂದರ್ ಕೊಲೆಗೆ ಸ್ಕೆಚ್ ಹಾಕಿದ್ದರಂತೆ. ಮೇ 31 ರಂದು, ಸಿಂಧು ರವೀಂದರ್ನನ್ನ ಉತ್ತರ ಪ್ರದೇಶದ ನಗೀನಾದಲ್ಲಿರುವ ಪರಿತೋಷ್ ಮನೆಗೆ ಪಾರ್ಟಿಯ ನೆಪ ಹೇಳಿ ಕರೆದೊಯ್ದಿದ್ದರಂತೆ. ಅವರು ರವೀಂದರ್ಗೆ ಕಂಠ ಪೂರ್ತಿ ಕುಡಿಸಿ, ಇಬ್ಬರೂ ಸೇರಿ ಗುದ್ದಲಿಯಿಂದ ಕುತ್ತಿಗೆ ಮತ್ತು ಎದೆಗೆ ಹೊಡೆದು ಕೊಂದಿದ್ದಾರೆ.
ಬಳಿಕ ಶವವನ್ನ SUV 500ನಲ್ಲಿ ಮೊದಲು ರಾಮನಗರಕ್ಕೆ ಮತ್ತು ನಂತರ ಕೋಟ್ದ್ವಾರಕ್ಕೆ ಎರಡು ದಿನ ಸಾಗಿಸಿದ್ದಾರೆ. ಬೆಳಗಿನ ಜಾವ ಆರೋಪಿಗಳು ಶವವನ್ನ ದುಗಡ್ಡ ಬಳಿ ಎಸೆದು ಪರಾರಿಯಾಗಿದ್ದಾರೆ. ಮೊದಲಿಗೆ ಇದು ರಸ್ತೆ ಅಪಘಾತದಂತೆ ಕಂಡರೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರವೀಂದರ್ ಕೊಲೆಯಾಗಿರೋದು ದೃಢಪಟ್ಟಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ರವೀಂದರ್ ಎಸ್‌ಯುವಿ ಕಾರಿನ ಓಡಾಟ ಕಂಡು ಬಂದಿದೆ. ರೀನಾ ಸಿಂಧುವನ್ನ ವಿಚಾರಣೆ ನಡೆಸಿದಾಗ ಪ್ರಯಕರ ಪರಿತೋಷ್.. ನಾನು ಕೊಂದ್ವಿ ಅಂತ ಬಾಯ್ಬಿಟ್ಟಿದ್ದಾಳೆ.
ಪರಿತೋಷ್ರನ್ನ ಪ್ರೀತಿಸುತ್ತಿದ್ದ ರೀನಾ.. ಹತ್ಯೆ ಮಾಡೋಣ ಹಣ ಬರುತ್ತೆ. ನಿನಗೂ 10 ಲಕ್ಷ ರೂಪಾಯಿಗಳನ್ನ ಕೊಡ್ತೀನಿ ಅಂತ ಹೇಳಿ ಬಿಟ್ಟಿದ್ಳು. ಸಾಲದೂ ಅಂತ ನನ್ನ ಗಂಡನನ್ನ ಮುಗಿಸಿ ನಾವು ಒಟ್ಟಿಗೆ ಇರೋಣ ಅಂತ ಹೇಳಿ ಆಸೆ ಹುಟ್ಟಿಸಿದ್ದಳಂತೆ. ವಿಚಾರಣೆ ಮುಗಿಸಿದ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸೋನಮ್ ರಘುವಂಶಿ. ಮುಸ್ಕಾನ್ ರಸ್ತೋಗಿ ಕೇಸ್ ಅನ್ನ ಜನ ಮರೆಯೀದಕ್ಕೆ ಮುಂಚೆ ಮತ್ತೊಂದು ಕೇಸ್ ಬೆಳಕಿಗೆ ಬಂದಿರೋದು ಜನರನ್ನ ಗಂಡು ಹೆತ್ತವರು ಬೆಚ್ಚಿ ಬೀಳುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ