/newsfirstlive-kannada/media/post_attachments/wp-content/uploads/2025/04/OM-Prakash-2.jpg)
ಬೆಂಗಳೂರು: ನಿವೃತ್ತ ಡಿಜಿಪಿ ಓಂಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಓಂಪ್ರಕಾಶ್ ಅವರ ಪತ್ನಿ ಪಲ್ಲವಿ A1, ಮಗಳು ಕೃತಿ A2 ಆಗಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹಲವು ಅನುಮಾನಗಳು ಶುರುವಾಗಿವೆ. ಮೊದಲೇ ಪ್ಲಾನ್ ಮಾಡಿ ಓಂಪ್ರಕಾಶ್ ಕೊಲೆ ಮಾಡಲಾಗಿದೆಯಾ ಎಂಬ ಅನುಮಾನ ಇದೆ. ಅದಕ್ಕೆ ಕಾರಣ ಪತ್ನಿ ಹಾಗೂ ಮಗಳ ನಡೆ.
ಕೊಲೆಗೆ ಮೊದಲೇ ಸಂಚು?
ಅನುಮಾನ-1: ಮನೆಯಲ್ಲಿ ಜಗಳ ಮಾಡಿಕೊಂಡು 5 ದಿನದ ಹಿಂದೆ ಮನೆ ಬಿಟ್ಟು ಹೋಗಿದ್ದರು
ಅನುಮಾನ-2: 5 ದಿನಗಳ ಹಿಂದೆ ಮನೆ ಬಿಟ್ಟು ಹೋಗಿ, ತಮ್ಮ ಸೋದರಿಯ ಮನೆಯಲ್ಲಿ ಇದ್ದರು
ಅನುಮಾನ-3: ಈ ಜಗಳದಲ್ಲಿ ನಿನ್ನ ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ರಂತೆ ಪಲ್ಲವಿ
ಅನುಮಾನ-4: ಮಗಳು ಕೃತಿ ಓಂಪ್ರಕಾಶ್ರನ್ನ ಪಪ್ಪಾ ಮನೆಗೆ ಬನ್ನಿ ಅಂತ ವಾಪಸ್ ಕರೆತಂದಿದ್ಳು
ಅನುಮಾನ-5: ಎರಡು ದಿನಗಳ ಹಿಂದಷ್ಟೇ ಓಂಪ್ರಕಾಶ್ರನ್ನ ಮನೆಗೆ ವಾಪಸ್ ಕರೆತಂದಿದ್ದ ಕೃತಿ
ಇದನ್ನೂ ಓದಿ: ‘I finished monster’ ಕೊಲೆ ಮಾಡಿ ಆ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿದ್ರಂತೆ ಓಂ ಪ್ರಕಾಶ್ ಪತ್ನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ