/newsfirstlive-kannada/media/post_attachments/wp-content/uploads/2023/05/Siddaramaiah-Watch.jpg)
ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಚ್ ಗಿಫ್ಟ್ ಸಿಕ್ಕಿದೆ. ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರು ವಾಚ್​ ಗಿಫ್ಟ್​​ ನೀಡಿದ್ದಾರೆ.
ಪಾರ್ವತಿ ಅವರು RADO ಕಂಪನಿ ವಾಚ್ ಅನ್ನು ಪತಿಗೆ ಗಿಫ್ಟ್ ಮಾಡಿದ್ದಾರೆ. ಪತ್ನಿ ಗಿಫ್ಟ್​ ಕೊಟ್ಟ ಬಗ್ಗೆ ಸಿದ್ದರಾಮಯ್ಯ ಅವರು ಸಚಿವ ಎಂಬಿ ಪಾಟೀಲ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಹೇಳಿಕೊಂಡಿದ್ದಾರೆ.
ಇನ್ನು ಸಚಿವ ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ. ನೀವು ಯಾವಾಗಲೂ ವಾಚ್ ಹಾಕಿಕೊಂಡಿರಲೇಬೇಕು ಎಂದು ಹೇಳಿದ್ದಾರೆ.
ಹ್ಯೂಬ್ಲೆಟ್ ವಾಚ್​ ಧರಿಸಿ ಸಂಕಷ್ಟಕ್ಕೆ ಸಿಲುಕಿದ್ದ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ಹಿಂದೊಮ್ಮೆ ದುಬಾರಿ ಬೆಲೆಯ ವಾಚ್​ ಕಟ್ಟಿ ಸುದ್ದಿಯಾಗಿದ್ದರು. ಹ್ಯೂಬ್ಲೆಟ್​ ವಾಚ್​ ಧರಿಸಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದಹಾಗೆಯೇ ಹ್ಯೂಬ್ಲೆಟ್​ ವಾಚ್​ ಸ್ವಿಜರ್ಲ್ಯಾಂಡ್ ಮೂಲದ್ದಾಗಿದೆ. ದುಬಾರಿ ಬ್ರಾಂಡ್​ ಎಂದೆನಿಸಿಕೊಂಡಿದೆ. ಈ ವಾಚ್​ ಅನ್ನು ಸಿದ್ದರಾಮಯ್ಯ ಅವರು ಹಿಂದೊಮ್ಮೆ ಧರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us