/newsfirstlive-kannada/media/post_attachments/wp-content/uploads/2025/07/hasana1.jpg)
ಹಾಸನ: ಅದು ಜುಲೈ 5 ಶನಿವಾರ. ಹಾಸನ-ಬೇಲೂರು ನಡುವಿನ ರಾಷ್ಟ್ರೀಯ ಹೆದ್ದಾರಿ. ಬೆಳಿಗ್ಗಿನ ಸಮಯದಲ್ಲಿ ಪೊಲೀಸರ ಟೀಮ್​ ಪ್ರಕರಣ ಒಂದರ ತನಿಖೆ ನಡೆಸುತ್ತಿದ್ರು. ಅಲ್ಲಿ ಸೇರಿದ್ದವರೆಲ್ಲಾ ಮುಖ ಎಲ್ಲಾ ಜಜ್ಜಿ ಹೋಗಿದೆ. ರಕ್ತ ಎಲ್ಲಾ ಚೆಲ್ಲಾಡಿದೆ ಅಂತೆಲ್ಲಾ ಮಾತಾಡುತ್ತಿದ್ದರು. ಅಲ್ಲೇನೋ ಌಕ್ಸಿಡೆಂಟ್​ ಆಗಿರ್ಬೋದು ಅನ್ನೋ ಊಹೆ ಮೊದಲಿತ್ತು. ಬಟ್​ ಅಲ್ಲಾಗಿದ್ದು ಒಂದು ಘನಘೋರ ಹತ್ಯೆ.
ಇದನ್ನೂ ಓದಿ:ನಾನು ಕರ್ನಾಟಕದ ಹುಡುಗಿ; ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಶಿಲ್ಪಾ ಶೆಟ್ಟಿ -VIDEO
ಹೂವಿನಹಳ್ಳಿ ಇಲ್ಲೆ ಕಾವಲು ಗ್ರಾಮ ಅನ್ನೋ ಊರಿದೆ. ಮಧು ಅನ್ನೋ 36 ವರ್ಷದ ವ್ಯಕ್ತಿ, ಭವ್ಯ ಅನ್ನೋ ಮಹಿಳೆ ಜೊತೆ ಮದುವೆಯಾಗಿ, ತನ್ನದೇ ಆದ ಒಂದು ಸುಂದರ ಸಂಸಾರದ ನೌಕೆ ಓಡಿಸ್ತಿದ್ದ. ವರ್ಷಗಳು ಉರುಳ್ತಾ ಇದ್ದಂಗೆ ಭವ್ಯಗೆ ಗಂಡನ ಮೇಲೆ ಪ್ರೀತಿ ಅಳಸಿ ಹೋಗ್ತಾ ಇತ್ತು.. ಸಣ್ಣ ಸಣ್ಣ ಮುನಿಸುಗಳು ಶುರುವಾಗಿದ್ವು. ಇದ್ದಕ್ಕಿದ್ದಂತೆ ತವರಿಗೆ ಹೋಗಿದ್ದಳು. ಮಗಳು ಮನೆಗೆ ಬಂದು ಗಂಡನ ಮೇಲೆ ಚಾಡಿ ಹೇಳಿದ್ರೂ, ತಾಯಿ ಮಗಳದ್ದೇ ಸರಿ ಅಂತ ಬೆನ್ನು ತಟ್ಟುತ್ತಿದ್ದರು. ಮಗಳ ಸಂಸಾರ ದಡ ಸೇರಿಸಬೇಕಿದ್ದ ತಾಯಿನೇ, ಮಗಳ ಸಂಸಾರವನ್ನ ಮುಳುಗಿಸೋಕೆ ಹೊರಟಿದ್ದಳು.
ಜುಲೈ 4. ಪ್ರತಿ ದಿನದಂತೆ ಗಾರೆ ಕೆಲಸಕ್ಕೆ ಹೋಗಿದ್ದ ಮಧು, ಸಂಜೆಯಾದ್ರೂ ಮನೆಗೆ ವಾಪಸ್​ ಬಂದಿಲ್ಲ. ಮಗ ಕತ್ತಲಾದ್ರೂ ಬರದೇ ಇರೋದನ್ನ ನೋಡಿ ಮಧು ತಾಯಿ ರುಕ್ಮಿಣಿ ಗ್ರಾಮಾಂತರ ಠಾಣೆಗೆ ಹೋಗಿ ಕಂಪ್ಲೇಂಟ್​ ಕೊಡ್ತಾರೆ. ದೂರು​ ಕೊಟ್ಟು ಬೆಳಗ್ಗೆ ಮಗ ಮನೆಗೆ ಬರ್ತಾನೆ ಅಂದುಕೊಂಡಿದ್ದ ಆ ತಾಯಿಗೆ ಮನೆಗೆ ಬಂದಿದ್ದು ಮಗನ ಶವ.
ಅಷ್ಟಕ್ಕೂ ಮಧುಗೆ ಆಗಿದ್ದೇನು..?
ಮಧು ಶವ ಸಿಕ್ಕಾಗ ಅದು ಌಕ್ಸಿಡೆಂಟ್​ ಅಂತಲೇ ಅಂದುಕೊಂಡಿದ್ರು. ಆದ್ರೆ, ಮುಖದ ಮೇಲೆ ಗಾಯಗಳನ್ನ ನೋಡಿದಾಗ, ಯಾರೋ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ತಲೆ ಮತ್ತು ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ಬಂದಿತ್ತು. ಮಗ ಘೋರವಾಗಿ ಸಾವನ್ನಪ್ಪಿದ್ದು ಮಧು ತಾಯಿ ರುಕ್ಮಿಣಿಗೆ ಸಹಿಸಲಾಗಿಲ್ಲ. ಇನ್ನೂ ಮಧು ತಂಗಿಗೆ, ಅಣ್ಣನದ್ದು ಌಕ್ಸಿಡೆಂಟ್​ ಅಲ್ಲ.. ಪಕ್ಕಾ ಕೊಲೆ ಅನ್ನೋದಕ್ಕೆ ಈ ಹಿಂದೆ ಕೆಲ ಘಟನೆಗಳು ಸಾಕ್ಷಿಯಾಗಿ ಕಣ್ಮುಂದೆ ಬಂದಿದ್ವು. ಅದಕ್ಕಾಗಿ ಕೂಡಲೇ ಮಧು ಕುಟುಂಬ ಪೊಲೀಸರಿಗೆ ಮಗನದ್ದು ಕೊಲೆ ಅಂತ ದೂರು ದಾಖಲು ಮಾಡ್ತಾರೆ. ಮಗನ ಸಾವಿಗೆ ಸೊಸೆ ಭವ್ಯ, ಭವ್ಯ ತಾಯಿ ಜಯಂತಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲು ಮಾಡಲಾಗುತ್ತದೆ. ಅವರಿಬ್ಬರ ಅನುಮಾನಕ್ಕೆ ಕಾರಣ ಭವ್ಯ ನಡೆಸುತ್ತಿದ್ದಿದ್ದ ಗುಟ್ಟಿನ ಅವ್ಯವ್ಯಹಾರ.
/newsfirstlive-kannada/media/post_attachments/wp-content/uploads/2025/07/hasana2.jpg)
ಅತ್ತಿಗೆಯ ವ್ಯವಹಾರದ ಬಗ್ಗೆ ವಾರಗಿತ್ತಿಗೆ ಎಲ್ಲಾ ಗೊತ್ತಾಗಿತ್ತು. ಆದ್ರೆ ಅದನ್ನ ಯಾರೂ ನಂಬಿರಲಿಲ್ಲ. ಕೊನೆಗೆ ಅಣ್ಣನ ಕೊಲೆ ನಂತರ ಮನೆ ಸೊಸೆ ಭವ್ಯಳ ಮತ್ತೊಂದು ಕರಾಳ ಮುಖ ಬಯಲಾಗಿದೆ. ಆಟೋ ಚಾಲಕ ಮೋಹನ್ ಕುಮಾರ್ ಮತ್ತು ಭವ್ಯ ನಡುವೆ 2 ವರ್ಷಗಳ ಹಿಂದೆ ಸ್ನೇಹವಾಗಿತ್ತು. ಆ ಸ್ನೇಹ ಸ್ವಲ್ಪ ದಿನಕ್ಕೆ ಮೋಹ ಆಗ್ಬಿಟ್ಟಿತ್ತು. ಈ ಅಕ್ರಮದ ವಾಸನೆ ಇಡೀ ಊರಿಗೆ ಹಬ್ಬಿದ್ರೂ. ಗಂಡ ಮಧು ಮಾತ್ರ ನಂಬಿರ್ಲಿಲ್ಲ. ಅಷ್ಟೇ ಯಾಕೆ ಸ್ವಂತ ತಂಗಿ ಹೇಳಿದ್ರೂ ಕೇಳದ ಅಮಾಯಕ ಮಧು. ದಿನ ದಿನಕ್ಕೂ ಭವ್ಯಳ ಮೋಹ ಮಿತಿ ಮೀರಿ, ಮೋಹನನ ಜೊತೆ ಇರೋಕೆ ಇಷ್ಟ ಪಟ್ಟಿದ್ದಾಳೆ. ಆದ್ರೆ, ಈಗ ಅದಕ್ಕೆ ಅಡ್ಡಿಯಾಗ್ತಿರೋದು ಗಂಡ ಮಧು. ಮೋಹನನ ಜೊತೆ ಸೇರಿ ಗಂಡನ ಕೊಲೆಗೆ ಸಂಚು ರೂಪಿಸಿದ್ದಳು. ಇದಕ್ಕೆ ತಾಯಿ ಜಯಂತಿ ಕೂಡ ಸಾಥ್​ ಕೊಟ್ಟಿದ್ದಳು. ಜುಲೈ 4 ರಂದು, ಮೋಹನ ತನ್ನ ಆಟೋದಲ್ಲಿ ಮಧುವನ್ನ ಕೂರಿಸಿಕೊಂಡು ಹೋಗಿ ಕಂಠಪೂರ್ತಿ ಕುಡಿಸಿ, ಆತ ರೋಡಲ್ಲಿ ಬಿದ್ದು ಸಾಯುವಂತೆ ಪ್ಲಾನ್​ ಮಾಡಿದ್ರು. ಆದ್ರೆ​ ಮಧು ಸಾಯದೇ ಹೋದ್ರೆ ಹೇಗೆ ಅಂತ ತಾನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ಮೋಹನ್​ ತನ್ನ ಆಟೋದಲ್ಲೇ ಮೃತದೇಹವನ್ನ ರಾಷ್ಟ್ರೀಯ ಹೆದ್ದಾರಿ ಹತ್ತಿರಕ್ಕೆ ತಂದು ಎಸೆದು ಮಧು ಅಪಘಾತದಿಂದ ಸತ್ತಿದ್ದಾನೆ ಅಂತ ಬಿಂಬಿಸೋಕೆ ಟ್ರೈ ಮಾಡಿದ್ದ. ಆದರೀಗ ಮೂವರೂ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಅಣ್ಣನ ಸಾವಿಗೆ ಕಾರಣರಾದವ್ರಿಗೆ ತಕ್ಕ ಶಿಕ್ಷೆ ಆಗ್ಬೇಕು ಅನ್ನೋದು ಕುಟುಂಬಸ್ಥರ ಆಕ್ರೋಶ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅನ್ನೋ ಕಾರಣಕ್ಕೆ ಇಷ್ಟು ಭೀಕರವಾಗಿ ಕೊಲೆ ಮಾಡಿದ್ದಕ್ಕೆ ಅವ್ರು ಇದಕ್ಕಿಂತ ಕಠಿಣ ಶಿಕ್ಷೆ ಅನುಭವಿಸ್ಲಿ ಅನ್ನೋ ಶಾಪ ಹಾಕಿದಾರೆ. ಒಂದು ಕ್ಲಿಷ್ಟಕರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮೊಹಮದ್ ಸುಜೀತಾ ಅವ್ರು, ಎಎಸ್ಪಿಗಳಾದ ತಮ್ಮಯ್ಯ, ವೆಂಕಟೇಶ್‌ನಾಯ್ಡು ಹಾಗೂ ಡಿವೈಎಸ್ಪಿ ಮುರುಳೀಧರ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಜಾಯ್ ಅಂತೋನಿ, ಪಿಎಸ್‌ಐ ಕೃಷ್ಣನಾಯಕ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಪ್ರಕರಣ ಬೇಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us