ಅಬ್ಬಾ.. ಮಲಗಿದ್ದ ಗಂಡನ ಮೇಲೆ ಬಿಸಿ ಬಿಸಿ ಎಣ್ಣೆ ಸುರಿದ ಹೆಂಡತಿ; ಕಾರಣವೇನು?

author-image
Veena Gangani
Updated On
ಅಬ್ಬಾ.. ಮಲಗಿದ್ದ ಗಂಡನ ಮೇಲೆ ಬಿಸಿ ಬಿಸಿ ಎಣ್ಣೆ ಸುರಿದ ಹೆಂಡತಿ; ಕಾರಣವೇನು?
Advertisment
  • ಎಣ್ಣೆ ಮೈಮೇಲೆ ಬಿಳುತ್ತಿದ್ದಂತೆ ಜೋರಾಗಿ ಕಿರುಚಾಡಿದ ಪತಿರಾಯ
  • ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು.. ಮುಂದೇನು?
  • ಪತಿ ರೆಹಮಾನ್ ಮಲಗುತ್ತಿದ್ದಾಗ ಏಕಾಏಕಿ ಎಣ್ಣೆ ಎರಚಿದ ಪತ್ನಿ; ಯಾಕೆ?

ಮುಂಬೈ: ಬಾಡಿಗೆ ಮನೆ ಖಾಲಿ ಮಾಡುವ ವಿಚಾರದಲ್ಲಿ ಗಂಡ, ಹೆಂಡತಿ ನಡುವೆ ಗಲಾಟೆ ಆಗುತ್ತಲೇ ಇತ್ತು. ಹೀಗೆ ಜಗಳ ನಡೆದ ದಿನ ಪತಿ ಮೇಲೆ ಪತ್ನಿ ಕುದಿಯುವ ಎಣ್ಣೆ ಹಾಕಿದ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ. 10 ವರ್ಷಗಳ ಹಿಂದೆ ರೆಹಮಾನ್ ಅನ್ಸಾರಿ (32) ಮತ್ತು ಅವರ ಪತ್ನಿ ಸಿರಿನ್ ಅನ್ಸಾರಿ (30) ಮದುವೆಯಾಗಿದ್ದರು.

publive-image

ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ಆದರೆ ಇದರ ಮಧ್ಯೆ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತಂತೆ. ಗಲಾಟೆಯಿಂದ ಬೇಸತ್ತ ಮಾಲೀಕ ಬಾಡಿಗೆಗೆ ಪಡೆದ ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರಂತೆ. ಮನೆ ಹಾಗೂ ಹಣದ ವಿಚಾರವಾಗಿ ದಂಪತಿಗಳ ಮತ್ತೆ ಮಧ್ಯೆ ಜಗಳ ನಡೆದಿದೆ. ಗಲಾಟೆಯ ಬಳಿಕ ಪತಿ ರೆಹಮಾನ್ ಮಲಗುತ್ತಿದ್ದಾಗ ಏಕಾಏಕಿ ಬಂದ ಪತ್ನಿ ಆತನ ಮುಖದ ಮೇಲೆ ಅಡುಗೆ ಮಾಡುವ ಎಣ್ಣೆಯನ್ನು ಬಿಸಿ ಮಾಡಿ ರೆಹಮಾನ್ ಮುಖ ಹಾಗೂ ದೇಹದ ಮೇಲೆ ಸುರಿದಿದ್ದಾಳಂತೆ. ಇನ್ನು ಎಣ್ಣೆ ಮೈಮೇಲೆ ಬಿದ್ದ ಕೂಡಲೇ ಪತಿ ಜೋರಾಗಿ ಕಿರುಚಾಡಿದ್ದಾರೆ. ಆತನ ಶಬ್ದ ಕೇಳಿ ಅಕ್ಕ ಪಕ್ಕದ ನಿವಾಸಿಗಳು ದೌಡಾಯಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

publive-image

ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್‌.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?

ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ನಂತರ ಹಲವಾರು ಗಂಟೆಗಳ ಕಾಲ ರೆಹಮಾನ್ ಮಾತನಾಡಲು ಸಾಧ್ಯವಾಗಲಿಲ್ಲ. ಇದರಿಂದ ರೆಹಮಾನ್​ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸದ್ಯ ಅವರ ಹೇಳಿಕೆಯನ್ನು ದಾಖಲಿಸಿದ ನಂತರ, ನಾವು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 ಅಡಿಯಲ್ಲಿ ಪತ್ನಿ ವಿರುದ್ಧ ಥಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment