newsfirstkannada.com

ಪತಿ ಮನೆ ಮುಂದೆ ಧರಣಿ ಕೂತು ಪತ್ನಿ ಕಣ್ಣೀರು; ಸ್ಥಳಕ್ಕೆ ಶಾಸಕ ವೀರೇಂದ್ರ ಪಪ್ಪಿ ಬಂದರೂ ತಣ್ಣಗಾಗದ ಮಿಡ್​​ನೈಟ್​​ ಹೈಡ್ರಾಮಾ

Share :

Published March 19, 2024 at 7:55am

    ವಿಷಯ ತಿಳಿದು ಶಾಸಕ ವೀರೇಂದ್ರ ಪಪ್ಪಿ ಕೂಡ ಭೇಟಿ ನೀಡಿದ್ದರು

    ಕೋಟೆ ಠಾಣೆ ಪೊಲೀಸರ ವಿರುದ್ಧವೂ ಸಂತ್ರಸ್ತೆಯಿಂದ ಆರೋಪ

    ಜ್ಯೋತಿಸಿ ಬಳಿ ಕರೆದೊಯ್ದು ಮಕ್ಕಳಾಗಂದತೆ ಮಾತ್ರ ನುಂಗಿಸಿದ್ರಂತೆ

ಚಿತ್ರದುರ್ಗ: ಪತಿಯ ಮನೆಯ ಮುಂದೆ ಪತ್ನಿ ಅಹೋರಾತ್ರಿ ಧರಣಿ ಕುಳಿತ ಪ್ರಸಂಗ ಚಿತ್ರದುರ್ಗದ ಆದರ್ಶ ನಗರದಲ್ಲಿ ನಡೆದಿದೆ. ಗಂಡನ ಮನೆಯವರು, ಮನೆಯಿಂದ ಆಚೆ ಹಾಕಿದ್ದಕ್ಕೆ ಪತಿ ಮನೆ ಮುಂದೆ ಪತ್ನಿ ಧರಣಿ ಕುಳಿತಿದ್ದಾಳೆ. ಪತಿ ವಿಕಾಸ ಹಾಗೂ ಅತ್ತೆ ಮಾವನ ವಿರುದ್ಧ ತೇಜಸ್ವಿನಿ ಗಂಭೀರ ಆರೋಪ ಮಾಡಿದ್ದಾಳೆ. ಮನೆಯ ಬಾಗಿಲು ತೆಗೆಯದೇ ನನ್ನನ್ನು ಹೊರಗೆ ಹಾಕಿದ್ದಾರೆ ಎಂದು ಕಣ್ಣೀರು ಇಟ್ಟಿದ್ದಾಳೆ.
ಅಹೋರಾತ್ರಿ ಧರಣಿ ವೇಳೆ ನೂಕಾಟ, ತಳ್ಳಾಟ ನಡೆದಿದ್ದು, ತೇಜಸ್ವಿನಿಗೆ ಗಾಯಗೊಂಡಿದ್ದಾರೆ. ಮಾತ್ರವಲ್ಲ ತೇಜಸ್ವಿನಿ ಅವರು ಅಲ್ಲೇ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಪೊಲೀಸರ ವಿರುದ್ಧವೂ ಮಹಿಳೆ ಆಕ್ರೋಶ
ಇದೇ ಗಲಾಟೆ ವಿಚಾರ ಸಂಬಂಧ ಕೋಟೆ ಠಾಣೆಯ ಪೊಲೀಸರ ವಿರುದ್ಧವೂ ತೇಜಸ್ವಿನಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿತ ಪತಿ ವಿಕಾಸ್​​ನನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿನಿ ಮೇಲೆ ಕಲ್ಲು ಎಸೆಯಲಾಗಿದೆ. ಪರಿಣಾಮ ಘಟನಾ ಸ್ಥಳದಲ್ಲಿ ಉದ್ವಿಗ್ನದ ವಾತಾವರಣ ಉಂಟಾಗಿ ತೇಜಸ್ವಿನಿ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

ನಾವು ಬೆಳಗ್ಗೆಯಿಂದ ಕಾಯುತ್ತ ಕೂತಿದ್ದರೂ ಒಬ್ಬನೇ ಒಬ್ಬ ಪೊಲೀಸರು ಇಲ್ಲಿಗೆ ಬರಲಿಲ್ಲ. ಆದರೆ ವಿಕಾಸನನ್ನು ರಕ್ಷಣೆ ಮಾಡಲು 15 ಜನ ಪೊಲೀಸರ ಬಂದಿದ್ದಾರೆ. ಅವರನ್ನು ಯಾಕೆ ಪೊಲೀಸ್ ವಾಹನದಲ್ಲಿ ಭದ್ರತೆಯೊಂದಿಗೆ ಕರೆದೊಯ್ದಿದ್ದು? ದೂರು ಕೊಡದೇ ಇದ್ರೂ ವಿಕಾಸನನ್ನು ಪೊಲೀಸರು ಜೀಪ್​​ನಲ್ಲಿ ಕರೆದೊಯ್ದಿದ್ಯಾಕೆ? ಇಂಥ ಪೊಲೀಸರಿಂದ ನಾವು ನ್ಯಾಯ ಬಯಸೋಕೆ ಸಾಧ್ಯವಾ? ಎಂದು ತೇಜಸ್ವಿನಿ ತಾಯಿ ವಿದ್ಯಾ ಪ್ರಶ್ನೆ ಮಾಡಿದ್ದಾಳೆ.

ತೇಜಸ್ವಿನಿ ಮಾಡ್ತಿರುವ ಆರೋಪ ಏನು?
ಕಳೆದ ಮೂರು ವರ್ಷಗಳ ಹಿಂದೆ ತೇಜಸ್ವಿನಿ, ವಿಕಾಸ್ ಮದುವೆ ಆಗಿದ್ದರು. ವಿಕಾಸ್ ಚಿತ್ರದುರ್ಗ ಮೂಲದವರಾಗಿದ್ದರೆ, ತೇಜಸ್ವಿನಿ ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ಮೂಲದವರು. ನನಗೆ ಮಕ್ಕಳಗಾದಂತೆ ಗಂಡನ ಮನೆಯವರು ಮಾತ್ರೆ ಕೊಡಿಸಿದ್ದಾರೆ. ನನ್ನ ಹೊಟ್ಟೆಯಲ್ಲಿರುವ ಮಗು ಹೆಣ್ಣೋ ಗಂಡೋ ಎಂದು ತಿಳಿಯೋಕೆ ಸಾಗರದ ಜ್ಯೋತಿಷಿ ಬಳಿ ಕರೆದೊಯ್ದಿದ್ದರು. ಈ ವೇಳೆ ಹಿಂದೆ ಕೈ ಕಟ್ಟಿಸಿ ಮಾತ್ರೆ ನುಂಗುವಂತೆ ಹೇಳ್ತಿದ್ದರು. ವರದಕ್ಷಿಣೆ ತರುವಂತೆ ಕುರುಕುಳ ಕೊಡ್ತಿದ್ದರು. ಕೇವಲ ಪತಿ ಮಾತ್ರವಲ್ಲ ಅತ್ತೆ, ಮಾವ ಕೂಡ ನನಗೆ ಹಿಂಸೆ ನೀಡಿದ್ದಾರೆ ಎಂದು ತೇಜಸ್ವಿನಿ ಆರೋಪಿಸಿದ್ದಾಳೆ.

ಶಾಸಕರು ಭೇಟಿ..!
ಈ ವಿಚಾರ ತಿಳಿದು ವಿಕಾಸ್ ಮನೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ನೀಡಿದ್ದರು. ಶಾಸಕರ ಮುಂದೆಯೇ ತೇಜಸ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹಣ ಇದ್ದವ್ರು ಏನು ಬೇಕಾದ್ರೂ ಮಾಡಬಹುದಾ ಸರ್? ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ತೇಜಸ್ವಿನಿ ಹಾಗೂ ಕುಟುಂಬಸ್ಥರ ಮನವೊಲಿಸಲು ಶಾಸಕರು ಪ್ರಯತ್ನಿಸಿದರು. ನೀವು ಕೂಡಿ ಬಾಳ್ತೀವಿ ಅಂದ್ರೆ ನಾನು ಇಬ್ಬರನ್ನೂ ಸೇರಿಸಿ ಮಾತಾಡ್ತೀನಿ. ನಿಮ್ಮಿಬ್ಬರ ವೈಯಕ್ತಿ ವಿಚಾರಕ್ಕೆ ಎಂಟ್ರಿಯಾಗುವ ಅಗತ್ಯ ನನಗೆ ಇಲ್ಲ. ನಿನ್ನ ಪೋಷಕರು ಹಾಗೂ ಆತನ ಪೋಷಕರು ನನ್ನ ಮನೆಗೆ ಬಂದಿದ್ದರು. ಈ ಕಾರಣಕ್ಕೆ ನಾನು ಇಲ್ಲಿಗೆ ಬಂದೆ ಎಂದರು. ಅದಕ್ಕೆ ಒಪ್ಪದೇ ತನಗೆ ನ್ಯಾಯ ಬೇಕು ಎಂದು ತೇಜಸ್ವಿನಿ ಪಟ್ಟು ಹಿಡಿದ್ದಾಳೆ. ಸರಿ ಹಾಗಿದ್ರೆ ಕೂತು ಮಾತಾಡಿ ಸರಿಪಡಿಸಿಕೊಳ್ಳಿ, ಇಲ್ಲಾ ಕಾನೂನು ಹೋರಾಟ ಮಾಡಿ ಎಂದು ಶಾಸಕರು ಸಲಹೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತಿ ಮನೆ ಮುಂದೆ ಧರಣಿ ಕೂತು ಪತ್ನಿ ಕಣ್ಣೀರು; ಸ್ಥಳಕ್ಕೆ ಶಾಸಕ ವೀರೇಂದ್ರ ಪಪ್ಪಿ ಬಂದರೂ ತಣ್ಣಗಾಗದ ಮಿಡ್​​ನೈಟ್​​ ಹೈಡ್ರಾಮಾ

https://newsfirstlive.com/wp-content/uploads/2024/03/CTR-GALATE.jpg

Load More