/newsfirstlive-kannada/media/post_attachments/wp-content/uploads/2025/06/Andhra-women-loan.jpg)
ಗಂಡ ಮಾಡಿದ 80,000 ರೂಪಾಯಿ ಸಾಲಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿ ಶಿಕ್ಷಿಸಿರುವ ಅಮಾನವೀಯ ಘಟನೆ ಆಂಧ್ರದ ಚಿತ್ತೂರಿನಲ್ಲಿ ನಡೆದಿದೆ. ಗಂಡ ಸಾಲ ಮಾಡಿ ಪತಿ ಊರು ಬಿಟ್ಟ ತಪ್ಪಿಗೆ ಪತ್ನಿಗೆ ಥಳಿಸಿದ್ದಾರೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕ್ಷೇತ್ರದಲ್ಲೇ ಈ ಅಮಾನವೀಯ ಕೃತ್ಯ ನಡೆದಿದೆ. ಗಂಡ ಸಾಲದ ಹಣ ವಾಪಸ್ ನೀಡಿಲ್ಲ ಎಂದು ಶ್ರೀಶಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿದ ದುರುಳರು ಅವಮಾನ ಮಾಡಿದ್ದಾರೆ.
ಶ್ರೀಶಾ ಪತಿ ತಿಮ್ಮರಾಯಪ್ಪ 80 ಸಾವಿರ ರೂಪಾಯಿ ಹಣ ಸಾಲ ಪಡೆದು ಊರು ಬಿಟ್ಟು ಪರಾರಿಯಾಗಿದ್ದಾರೆ. ಕುಪ್ಪಂ ಮಂಡಲದ ನಾರಾಯಣಪುರ ಗ್ರಾಮದಲ್ಲಿ ಟಿಡಿಪಿ ಕಾರ್ಯಕರ್ತರೇ ಸಾಲದ ಹಣ ವಸೂಲಿಗಾಗಿ ಶ್ರೀಶಾಳನ್ನು ಮರಕ್ಕೆ ಕಟ್ಟಿ ನಿಂದಿಸಿದ್ದಾರೆ.
ಇದನ್ನೂ ಓದಿ: ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ದೂರು; ಕಾರಣವೇನು?
ಗಂಡ ಊರು ಬಿಟ್ಟು ಹೋದ ಮೇಲೆ ಶ್ರೀಶಾಳೇ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಚಂದ್ರಬಾಬು ನಾಯ್ಡು ಅವರು ಚಿತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿ ಆರೋಪಿಗಳಾದ ಮುನಿಕಣ್ಣಪ್ಪ, ಶ್ರೀಕಾಂತ್ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಆಂಧ್ರ ಗೃಹ ಸಚಿವೆ ಅನಿತಾ ಅವರು ಸಂತ್ರಸ್ತ ಮಹಿಳೆಯ ಜೊತೆ ಮಾತನಾಡಿದ್ದು, ಆರೋಪಿಗಳ ಮೇಲೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ