newsfirstkannada.com

ಹೆಂಡತಿಯಿಂದ ಕೋಟಿ ಕೋಟಿ ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​​; ಏನಿದು ಅಸಲಿ ಕಹಾನಿ..?

Share :

Published February 21, 2024 at 10:19pm

Update February 22, 2024 at 6:31am

    ನ್ಯೂಸ್​ ಫಸ್ಟ್​ನಲ್ಲಿ ಗಂಡ - ಹೆಂಡತಿಯ ಕದನ!

    ಸರೋವರ ಬ್ಯಾಂಕ್​ ಬ್ರಹ್ಮಾಂಡದ ಕಥೆಗೆ ಟ್ವಿಸ್ಟ್

    ಪತಿ ಆರೋಪಕ್ಕೆ ತಿರುಗೇಟು ಕೊಟ್ಟ ಸಿಇಒ ಶೃತಿ

ಬೆಂಗಳೂರು: ಮೊನ್ನೆಯಷ್ಟೆ ನ್ಯೂಸ್​ ಫಸ್ಟ್, ಸರೋವರ ಕೋ ಆಪರೇಟಿವ್​ ಬ್ಯಾಂಕ್​ನ ಬ್ರಹ್ಮಾಂಡದ ಕತೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು.. ಆದ್ರೆ, ಬ್ಯಾಂಕ್​ ಬ್ರಹ್ಮಾಂಡದ ಕಥೆಗೆ ಟ್ವಿಸ್ಟ್​ ಸಿಕ್ಕಿದೆ. ಸರೋವರ ಬ್ಯಾಂಕ್​ನಲ್ಲಿ ಹಣ ಇಟ್ಟವರ ಕಥೆ ಹರೋಹರವಾಗಿದೆ ಅಂತಾ ಆರೋಪ ಮಾಡಿದ ಪತಿ ಮಹೇಶ್​ಗೆ ಪತ್ನಿ ಶೃತಿ ತಿರುಗೇಟು ಕೊಟ್ಟಿದ್ದಾರೆ.

ಕಚ್ಚಾಟ.. ಅರಚಾಟ.. ಕಿರುಚಾಟ.. ಆರೋಪ.. ಪ್ರತ್ಯಾರೋಪ.. ಗಂಡ ಹೆಂಡತಿಯ ವಾಗ್ಯುದ್ಧ.. ಇದು ಸರೋವರ ಕೋ ಆಪರೇಟಿವ್ ಸಿಇಒ ಶೃತಿ ಹಾಗೂ ಶೃತಿ ಪತಿ ಮಹೇಶ್ ಅವರ ಮಾತಿನ ಸಮರದ ಪರಿ..!

ಹೌದು.. ಮೊನ್ನೆ 19ನೇ ತಾರೀಖಿನಂದು ನಗರದಲ್ಲಿನ ಸರೋವರ ಬ್ಯಾಂಕ್​ನಲ್ಲಿ ಅವ್ಯವಹಾರ ನಡೆದಿದೆ.. ಬ್ಯಾಂಕ್ ಸಿಇಒ ಶೃತಿ ಕೋಟಿ ಕೋಟಿ ಮೋಸ ಮಾಡ್ತಿದ್ದಾರೆ.. ಗ್ರಾಹಕರ ದುಡ್ಡಲ್ಲಿ ಶೃತಿ ಐಷರಾಮಿ ಜೀವನ ಮಾಡ್ತಿದ್ದಾರೆ ಅಂತಾ ಸ್ವತಃ ಶೃತಿ ಪತಿ ಮಹೇಶ್ ಆರೋಪಗಳ ಸುರಿಮಳೆ ಸುರಿಸಿದ್ರು.. ಇದೀಗ ಪತಿ ಮಹೇಶ್ ಆರೋಪಕ್ಕೆ ತಿರುಗಿಬಿದ್ದಿರುವ ಶೃತಿ, ಇದೆಲ್ಲಾ ಸುಳ್ಳು ಅಂತಾ ಟಾಂಗ್ ಕೊಟ್ಟಿದ್ದಾರೆ.

ವೈಯಕ್ತಿಕ ವಿಚಾರವನ್ನ ಸೊಸೈಟಿಗೆ ಲಿಂಕ್ ಮಾಡಿದ್ರಾ ಮಹೇಶ್!?
ತಮ್ಮ ವಿರುದ್ಧ ಆರೋಪಗಳನ್ನ ನಿರಾಕರಿಸಿರುವ ಸಿಇಒ ಶೃತಿ

ಇವತ್ತು ನ್ಯೂಸ್​ ಫಸ್ಟ್​ ಸ್ಟುಡಿಯೋದಲ್ಲಿ ಒನ್ ಟು ಒನ್ ಮಾತಿಗೆ ಕುಳಿತ್ತಿದ್ದ ವೇಳೆ ಪತಿ ಮಹೇಶ್ ಮಾಡಿದ್ದ ಆರೋಪಗಳನ್ನ ಸಿಇಒ ಶೃತಿ ತಳ್ಳಿ ಹಾಕಿದ್ದಾರೆ.. ಸಂಸಾರಿಕ ವೈಮಸ್ಸನ್ನ ಸೊಸೈಟಿ ಬಾಗಿಲಿಗೆ ತಂದು ನಾಟಕವಾಡ್ತಿದ್ದಾರೆ ಎಂದು ಪತಿ ಮಹೇಶ್ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ ಶೃತಿ.

ಅದಲ್ಲದೇ, ಪತಿ ಮಹೇಶ್ ವಿರುದ್ದ ಮತ್ತಷ್ಟು ಆರೋಪಗಳನ್ನ ಮಾಡಿದ್ದಾರೆ.. ಶೃತಿ ಬಳಿಯಿರೋ ಮನೆಯನ್ನ ತಮ್ಮ ಹೆಸರಿಗೆ ಬರೆದುಕೊಡುವಂತೆ ಒತ್ತಾಯ ಮಾಡ್ತಿದ್ದಾರೆ.. ಅದಕ್ಕೆ ಒಪ್ಪದ ಕಾರಣ ಈ ರೀತಿ ಮಾಡ್ತಿದ್ದಾರೆ ಎಂದು ದೂರಿದ್ದಾರೆ.. ಅದಲ್ಲದೇ, ನಾನು ಬ್ಯಾಂಕ್​ನಲ್ಲಿ ಎಂಪ್ಲಾಯಿ ಆಗಿ ಸೇರಿಕೊಂಡಿದ್ದು, ಆ ಬ್ಯಾಂಕ್​ ನನ್ನದಲ್ಲ ಎಂದು ಹೇಳಿದ್ರು.

ಒಟ್ಟಾರೆ. ಈ ಪ್ರಕರಣ ಬಿಡಿಸಲಾಗದ ಕಗ್ಗಂಟಾಗಿದೆ.. ಇದು ದುಡ್ಡಿನ ವ್ಯವಹಾರನಾ? ಸಂಸಾರಿಕ ಕಲಾಹನಾ? ಮಹೇಶ್ ಆರೋಪ ನಿಜಾನಾ? ಗೊತ್ತಿಲ್ಲ.. ಈ ಕೇಸ್​ನಲ್ಲಿ ಸರಿಯಾದ ತನಿಖೆಯಾದ ಬಳಿಕವಷ್ಟೆ ಸ್ಪಷ್ಟ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿಯಿಂದ ಕೋಟಿ ಕೋಟಿ ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​​; ಏನಿದು ಅಸಲಿ ಕಹಾನಿ..?

https://newsfirstlive.com/wp-content/uploads/2024/02/SAROVARA-1.jpg

Load More