/newsfirstlive-kannada/media/post_attachments/wp-content/uploads/2025/06/CTR.jpg)
ಚಿತ್ರದುರ್ಗ: 2ನೇ ಮದುವೆಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮವೇ ಸೃಷ್ಟಿಯಾಗಿದೆ.
ಆಗಿದ್ದೇನು..?
4 ವರ್ಷದ ಹಿಂದೆ ತನುಜಾ ಎಂಬಾಕೆಯನ್ನ ಆರೋಪಿ ಕಾರ್ತಿಕ್ ಮದುವೆಯಾಗಿದ್ದ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್ನನ್ನು ಕೈಹಿಡಿದಿದ್ದಳು.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ಪಾಪದ ಕೆಲಸ.. ಪತ್ನಿಯ ರುಂಡ ಕಡಿದು ಠಾಣೆಗೆ ಬಂದ ಪತಿ, ಕಂದಮ್ಮ ಅನಾಥ
ಹೀಗಿದ್ದೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ. ಮಾಹಿತಿಗಳ ಪ್ರಕಾರ, ವರದಕ್ಷಿಣೆ ಆಸೆಗೆ ಮತ್ತೊಮ್ಮೆ ಹಸಣೆ ಏರಲು ಸಿದ್ಧವಾಗಿದ್ದ ಎಂದು ಹೇಳಲಾಗಿದೆ. ಈ ವಿಚಾರ ಹೇಗೋ ಮೊದಲ ಪತ್ನಿಯ ಕಿವಿಗೆ ಬಿದ್ದಿದೆ. ಸುದ್ದಿ ತಿಳಿದು ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಧರ್ಮದೇಟು ಕೊಟ್ಟಿದ್ದಾಳೆ. ಆ ಮೂಲಕ ಕಾರ್ತಿಕ್ ಪತ್ನಿ ತನುಜಾ ಕುಟುಂಬಸ್ಥರಿಂದ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತ ಮದುವೆಗೆ ತಯಾರಾಗಿದ್ದ ವಧುವಿನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ