‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್‌’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು?

author-image
admin
Updated On
ಏನೇ ಆಗಲಿ ಹೆದರಲ್ಲ.. ಯುವ ಡಿವೋರ್ಸ್‌ ಅರ್ಜಿಗೆ ಶ್ರೀದೇವಿ ಕೊಟ್ರು ಹೊಸ ಟ್ವಿಸ್ಟ್‌; ಹೇಳಿದ್ದೇನು?
Advertisment
  • ಮಾನಸಿಕ ಹಿಂಸೆ, ಟಾರ್ಚರ್ ಅನುಭವಿಸುತ್ತಿರುವೆ ಎಂದಿರುವ ಯುವ
  • ಯುವ ರಾಜ್‌ಗೂ ನನಗೂ 4 ವರ್ಷ ವಯಸ್ಸಿನ ಅಂತರವಿದೆ ಇತ್ತು
  • ಪತಿಯ ಲೀಗಲ್ ನೋಟಿಸ್‌ಗೆ ಶ್ರೀದೇವಿ ಅವರಿಂದ ಸವಿವರ ಉತ್ತರ

ಬೆಂಗಳೂರು: ನಟ ಯುವ ರಾಜ್‌ ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್‌ನಲ್ಲಿ ಯುವ ರಾಜ್‌ ಕುಮಾರ್‌ ಅವರು ತನ್ನ ಪತ್ನಿಯಿಂದ ಮಾನಸಿಕ ಹಿಂಸೆ, ಟಾರ್ಚರ್ ಅನುಭವಿಸುತ್ತಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಆದರೆ ಈ ವಿಚ್ಛೇದನಕ್ಕೆ ಈಗ ಶ್ರೀದೇವಿ ಅವರು ಕೂಡ ಕೌಂಟರ್ ಕೊಡುತ್ತಿದ್ದಾರೆ.

publive-image

ಯುವ ಡಿವೋರ್ಸ್‌ ಅರ್ಜಿ ಸಲ್ಲಿಸುವ ಮುನ್ನ ತನ್ನ ಪತ್ನಿ ಶ್ರೀದೇವಿಗೆ ಲೀಗಲ್‌ ನೋಟಿಸ್ ನೀಡಿದ್ದರು. ಪತಿಯ ಲೀಗಲ್ ನೋಟಿಸ್‌ಗೆ ಶ್ರೀದೇವಿ ಅವರು ಸವಿವರ ಉತ್ತರ ನೀಡಿದ್ದು, ತಾನು ಕೂಡ ಮಾನಸಿಕ, ದೈಹಿಕ, ಆರ್ಥಿಕವಾಗಿ ಟಾರ್ಚರ್‌ ಅನುಭವಿಸಿದ್ದಾಗಿ ಉಲ್ಲೇಖ ಮಾಡಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಯುವ ರಾಜ್‌ಕುಮಾರ್ ಅವರ ಜೊತೆ ಸಹ ನಟಿ ಜೊತೆ ಅಫೇರ್‌ ಇರೋದಾಗಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..! 

ಯುವ ರಾಜ್‌ ಕುಮಾರ್ ಅವರ ಲೀಗಲ್‌ ನೋಟಿಸ್‌ಗೆ ಉತ್ತರಿಸಿರುವ ಶ್ರೀದೇವಿ ಅವರು, ಸ್ನೇಹಿತೆಯ ಜೊತೆ ಮದುವೆಯಾಗಿ ಈಗ ಸಹ ನಟಿ ಜತೆ ಲವ್‌ ಮಾಡುತ್ತಿದ್ದಾರೆ. ಸಹ ನಟಿಯ ಜೊತೆ ಯುವರಾಜ್‌ ಕುಮಾರ್ ಸಿಕ್ಕಿ ಹಾಕಿಕೊಂಡಿದ್ದರು ಎಂದು ಶ್ರೀದೇವಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು? 

ಶ್ರೀದೇವಿ ಅವರ ಉತ್ತರವೇನು?
ಯುವ ರಾಜ್‌ಗೂ ನನಗೂ 4 ವರ್ಷ ವಯಸ್ಸಿನ ಅಂತರವಿದೆ. 4 ವರ್ಷ ಚಿಕ್ಕವನಾದರೂ ಯುವ ರಾಜ್ ಅವರನ್ನು ಸಹಿಸಿಕೊಂಡಿದ್ದೆ. ಸುಳ್ಳು ಮತ್ತು ಹುರುಳಿಲ್ಲದ ಆರೋಪಗಳಿಂದ ಅವರು ಹಿಂಸೆ ಮಾಡ್ತಿದ್ದಾರೆ. ಡಿಸೆಂಬರ್ 2023ರವರೆಗೂ ಮೆಸೇಜ್ ಮಾಡ್ತಿದ್ದ ಯುವ ರಾಜ್‌ ಕುಮಾರ್ ಸುಳ್ಳು ಮೆಸೇಜ್‌ಗಳನ್ನ ಕಳುಹಿಸಿ ಕಿರುಕುಳ ನೀಡಿದ್ದಾರೆ.

publive-image

ಇಷ್ಟೇ ಅಲ್ಲ ಶ್ರೀದೇವಿ ಭೈರಪ್ಪ ಅವರು ಸ್ನೇಹಿತೆಯ ಜೊತೆ ಮದುವೆಯಾಗಿ ಈಗ ಸಹ ನಟಿ ಜತೆ ಲವ್‌ ಮಾಡುತ್ತಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಸಹ ನಟಿಯ ಜೊತೆ ಯುವರಾಜ್‌ಕುಮಾರ್ ರೆಡ್‌ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment