newsfirstkannada.com

ಹೆಂಡತಿ ಸರ್ಕಾರಿ ಅಧಿಕಾರಿ..ಗಂಡ ನಿರುದ್ಯೋಗಿ; ತಾಳಿ ಕಟ್ಟಿದ ಕೈಯಿಂದಲೇ ಪತ್ನಿಯನ್ನು ಬರ್ಬರವಾಗಿ ಕೊಂದನು ಪಾಪಿ ಪತಿ

Share :

Published January 30, 2024 at 6:38am

Update January 30, 2024 at 6:54am

    ಆನ್​ಲೈನ್​ನಲ್ಲಿ ಪರಿಚಯವಾಗಿ ನಿಶಾ-ಮನಿಷ್ ಮದುವೆ

    ದಾಂಪತ್ಯದಲ್ಲಿ ಬಿರುಕು, ಅದೊಂದು ಕಾರಣಕ್ಕೆ ಕೊಲೆ ಮಾಡಿದ

    ಕೊಲೆಯನ್ನು ಮರೆ ಮಾಚಲು ಪತಿಯ​ ಹೈಡ್ರಾಮಾ.. ಸಿಕ್ಕಿಬಿದ್ದಿದ್ಹೇಗೆ?

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾ ಹೇಳ್ತಾರೆ. ಆದರೆ, ಮಧ್ಯಪ್ರದೇಶದಲ್ಲಿ ನಿರುದ್ಯೋಗಿ ಗಂಡನೇ ಪ್ರೀತಿಸಿ ಮದುವೆಯಾಗಿದ್ದ ತನ್ನ ಅಧಿಕಾರಿ ಹೆಂಡತಿಯನ್ನ ಹತ್ಯೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಆ ಪಾಪಿ ಪತಿರಾಯ ತನ್ನ ಹೆಂಡತಿಯನ್ನ ಯಾಕೆ ಕೊಲೆ ಮಾಡಿದ ಅನ್ನೋ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.

ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ಯಾಕೆ ನಿರುದ್ಯೋಗಿ ಪತಿ?

ಇವ್ರ ಹೆಸರು ನಿಶಾ ನಾಪಿಥ್. ಮಹಿಳಾ ಸರ್ಕಾರಿ ಅಧಿಕಾರಿ. ಆದ್ರೆ, ಏಕಾಏಕಿ ತಾಳಿ ಕಟ್ಟಿದ ಗಂಡನೇ ನಿಶಾ ನಾಪಿಥ್​ರನ್ನ ಕೊಲೆ ಮಾಡಿದ್ದಾನೆ.

ಕೊಲೆಗೆ ಕಾರಣ!

ನಿಶಾ ಹಾಗೂ ಮನಿಷ್.. ಇಬ್ಬರು ಆನ್​ಲೈನ್​ ವೆಬ್​ಸೈಟ್​ನಲ್ಲಿ ಪರಿಚಯವಾಗಿದ್ದು, 2020ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಶುರುವಿನಲ್ಲಿ ಚೆನ್ನಾಗ್ಗಿದ್ದ ಜೋಡಿ ಮಧ್ಯೆ ಕಾಲ ಕ್ರಮೇಣ ಬಿರುಕು ಉಂಟಾಗಿದೆ.. ಮಧ್ಯಪ್ರದೇಶದ ಶಹಾಪುರದಲ್ಲಿ ಉಪವಿಭಾಗೀಯ ಅಧೀಕ್ಷಕಿಯಾಗಿದ್ದ ನಿಶಾ ಕೈ ತುಂಬಾ ಸಂಬಳ ಪಡೀತಾಯಿದ್ಲು.. ಮನಿಷ್​ ನಿರುದ್ಯೋಗಿ ಆಗಿದ್ದ ಕಾರಣ.. ನಿಷಾ ತನ್ನ ವಿಮೆ, ಬ್ಯಾಂಕ್ ಖಾತೆ ಯಾವುದ್ರಲ್ಲೂ ಮನಿಷ್​ ಹೆಸರನ್ನ ನಾಮಿನಿಯಾಗಿ ಉಲ್ಲೇಖ ಮಾಡಿರ್ಲಿಲ್ಲ.. ಹೀಗಾಗಿಯೇ, ಸಿಟ್ಟಿಗೆದ್ದ ಪಾಪಿ ಪತಿ ತಾಳಿ ಕಟ್ಟಿದ ಕೈಗಳಿಂದಲೇ ಪತ್ನಿಯ ಉಸಿರನ್ನು ನಿಲ್ಲಿಸಿದ್ದಾನೆ.

ಕೊಲೆ ಮಾಡಿ ನಾಟಕವಾಡಿದ್ದ ಕಿರಾತಕ ಪತಿ!

ತಾನು ಮಾಡಿದ ಕೊಲೆಯನ್ನು ಮರೆ ಮಾಚಲು ಮನಿಷ್ ಶರ್ಮಾ​ ಹೈಡ್ರಾಮಾ ಮಾಡಿದ್ದ. ಉಸಿರಾಟ ತೊಂದರೆ ಇದೆ ಬಿಂಬಿಸಿ ನಿಶಾ ಮೃತದೇಹವನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾನೆ. ವೈದ್ಯರು ಪರೀಕ್ಷಿಸಿದಾಗ ಆಕೆ ಮೃತಪಟ್ಟಿದ್ದು ಗೊತ್ತಾಗಿದೆ. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಅಸಹಜ ಸಾವು ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ಬಂದ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಹತ್ಯೆ ಬಯಲಾಗಬಾರದು ಎಂದು ರಕ್ತದ ಕಲೆ ಅಂಟಿದ್ದ ಬಟ್ಟೆ, ದಿಂಬನ್ನು ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದ. ತನಿಖೆ ತಂಡ ಸ್ಥಳ ಪರಿಶೀಲನೆ ನಡೆಸಿ, ಸಿಕ್ಕ ಸುಳಿವುಗಳ ಆಧಾರದ ಮೇಲೆ ಶರ್ಮಾನನ್ನು ಬಂಧಿಸಿದ್ದಾರೆ.

ಇನ್ನು, ನಿಷಾ ಸಹೋದರಿ ನಿಲಿಮಾ ಕೂಡ ಮನಿಷ್​ ಕುರಿತು ಸಾಲು ಸಾಲು ಆರೋಪಗಳನ್ನ ಮಾಡಿದ್ದಾಳೆ. ನಿತ್ಯ ನಿಷಾಗೆ ಹಣ ಕೊಡುವಂತೆ ಪೀಡಿಸ್ತಿದ್ದ ಎಂದು ಪೊಲೀಸರೆದುರು ಆರೋಪಿಸಿದ್ದಾಳೆ. ಒಟ್ಟಾರೆ ಹಣದ ಮೋಹಕ್ಕೆ ಬಿದ್ದ ಪತಿರಾಯ ತಾಳಿಕಟ್ಟಿದವಳ ಉಸಿರನ್ನೇ ನಿಲ್ಲಿಸಿದ್ದು ಮಾತ್ರ ನಿಜಕ್ಕೂ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಸರ್ಕಾರಿ ಅಧಿಕಾರಿ..ಗಂಡ ನಿರುದ್ಯೋಗಿ; ತಾಳಿ ಕಟ್ಟಿದ ಕೈಯಿಂದಲೇ ಪತ್ನಿಯನ್ನು ಬರ್ಬರವಾಗಿ ಕೊಂದನು ಪಾಪಿ ಪತಿ

https://newsfirstlive.com/wp-content/uploads/2024/01/Nisha.jpg

Load More